
ಕುಮಾರ್. ಎನ್. ಭದ್ರಾವತಿ ನಿರ್ಮಾಣ, ಎಂವೈ ಕೃಷ್ಣ ನಿರ್ದೇಶನದ ‘ಊರಿನ ಗ್ರಾಮಸ್ಥರಲ್ಲಿ ವಿನಂತಿ’ ಚಿತ್ರವು ಕುಟುಂಬ ಸಂಬಂಧಗಳು, ಗ್ರಾಮೀಣ ರಾಜಕೀಯ, ಭಕ್ತಿ, ಕಲಾ ಸಂಸ್ಕೃತಿ ಮತ್ತು ಮಾನವೀಯ ಸಂಘರ್ಷ ಇವೆಲ್ಲವೂ ಸೇರಿ ಒಂದು ಭಾವನಾತ್ಮಕ ಹಾಗೂ ಮನರಂಜನಾತ್ಮಕ ಅನುಭವವನ್ನು ನೀಡಲಿದೆ ಎನ್ನಲಾಗುತ್ತಿದೆ. ಈ ಚಿತ್ರದ ಪೋಸ್ಟರ್ ಸಾಕಷ್ಟು ವೈರಲ್ ಅಗುತ್ತಿದೆ.
ಊರಿನ ಗ್ರಾಮಸ್ಥರಲ್ಲಿ ವಿನಂತಿ ಪೋಸ್ಟರ್ ಕಮಾಲ್!
ಕನ್ನಡ ಚಿತ್ರರಂಗದಲ್ಲಿ ಕೆಜಿಎಫ್, ಕಾಂತಾರಗಳಂತೆ ಬಿಗ್ ಬಜೆಟ್ ಮೂಲಕ ಸೌಂಡ್ ಮಾಡುತ್ತಿರುವ ಸಿನಿಮಾಗಳು ಒಂದುಕಡೆಯಾದರೆ, ‘ಸು ಫ್ರಂ ಸೋ’ ಚಿತ್ರದಂತಹ ಸ್ಮಾಲ್ ಬಜೆಟ್ ಸಿನಿಮಾಗಳೂ ಕೂಡ ಸೂಪರ್ ಹಿಟ್ ದಾಖಲಿಸಿ ಗಮನಸೆಳೆದಿವೆ. ಹೊಸಹೊಸ ಪ್ರಯೋಗಗಳ ಮೂಲಕ ಸ್ಯಾಂಡಲ್‌ವುಡ್ ನಿರಂತರವಾಗಿ ಸಿನಿಮಾಗಳನ್ನು ತೆರೆಗೆ ತರುವುದರ ಮೂಲಕ ಕನ್ನಡ ಚಿತ್ರರಂಗ ‘ನಿಂತ ನೀರಲ್ಲ’ ಎಂದು ನಿರೂಪಿಸುತ್ತಿದೆ. ಇದೀಗ, ನಿನ್ನೆ ‘ರಾಮ ನವಮಿ’ ಪ್ರಯುಕ್ತ ಹೊಸಬರ ಸಿನಿಮಾವೊಂದು ತನ್ನ ವಿಶಿಷ್ಠ ಹಾಗೂ ವಿಭಿನ್ನ ಪೋಸ್ಟರ್ ಮೂಲಕ ಸಾಕಷ್ಟು ಗಮನಸೆಳೆಯುತ್ತಿದೆ. ಅದು ‘ಊರಿನ ಗ್ರಾಮಸ್ಥರಲ್ಲಿ ವಿನಂತಿ’ ಹೆಸರಿನ ಸಿನಿಮಾ.
ಟಾಕ್ ಕ್ರಿಯೇಟ್
ಹೌದು, ನಿನ್ನೆ ‘ಊರಿನ ಗ್ರಾಮಸ್ಥರಲ್ಲಿ ವಿನಂತಿ’ ಪೋಸ್ಟರ್ ಬಿಡುಗಡೆಯಾಗಿ ಒಂದಷ್ಟು ಟಾಕ್ ಕ್ರಿಯೇಟ್ ಮಾಡಿದೆ. ವಿಭಿನ್ನ ವಿನ್ಯಾಸದ ಈ ಪೋಸ್ಟರ್ ಇದು ವಿಶೇಷ ಕಥಾಹಂದರದ ಸಿನಿಮಾ ಎನ್ನಬಹುದಾದ ಸುಳಿವು ನೀಡಿದೆ. ‘ಊರಿನ ಗ್ರಾಮಸ್ಥರಲ್ಲಿ ವಿನಂತಿ’ ಸಿನಿಮಾದ ದೃಶ್ಯ ಸಂಯೋಜನೆ ವಿಶೇಷವಾಗಿ ಗಮನ ಸೆಳೆಯುತ್ತದೆ. ದೇವಿಯ ಭವ್ಯರೂಪ, ಜಾತ್ರೆಯ ಸಂಭ್ರಮ, ಸೈಕಲ್, ಹಳೆಯ ಕಟ್ಟಡಗಳು, ಜನಪದ ದೃಶ್ಯ ವೈಭವ, ಹಳ್ಳಿಯ ಸೊಗಡಿನ ಹಿನ್ನೆಲೆ ಇವೆಲ್ಲವೂ ಈ ಪೋಸ್ಟರ್‌ನಲ್ಲಿ ಅಡಕವಾಗಿವೆ. ಈ ಹಿನ್ನೆಲೆಯ ಪೋಸ್ಟರ್ ಈ ಸಿನಿಮಾದ ಕಥೆಯ ಹಿನ್ನಲೆಯನ್ನು ಬಿಟ್ಟುಕೊಡುತ್ತಿದೆ ಎನ್ನಬಹುದಾದರೂ ಅದನ್ನು ಈಗಲೇ ಸ್ಪಷ್ಟವಾಗಿ ಹೇಳಲಾಗದು, ಹೇಳಬಾರದು.
ಸೂಚ್ಯವಾಗಿ ಹೇಳಬೇಕು ಎಂದರೆ, ಈ ಸಿನಿಮಾ ಕಥೆಯಲ್ಲಿ ಗ್ರಾಮೀಣ ಬದುಕಿನ ನಂಬಿಕೆಗಳು, ಗ್ರಾಮೀಣ ಸಂಸ್ಕೃತಿ ಮತ್ತು ಮಾನವ ಸಂಬಂಧಗಳ ಸುತ್ತಕಥೆ ಹೆಣೆದಿರುವ ಸುಳಿವು ಸಿಗುತ್ತದೆ. ಚಿತ್ರದ ಕಥೆಯನ್ನು ಎಂವೈ. ಕೃಷ್ಣ ಬರೆಯುವುದರ ಜೊತೆಗೆ ನಿರ್ದೇಶನವನ್ನೂ ಅವರೇ ಮಾಡುತ್ತಿದ್ದಾರೆ. ‘ಊರಿನ ಗ್ರಾಮಸ್ಥರಲ್ಲಿ ವಿನಂತಿ’ ಚಿತ್ರದ ನಿರ್ಮಾಪಕರು ಕುಮಾರ್ ಎಸ್. ಭದ್ರಾವತಿ.
80-90ರ ದಶಕದ ಹಿನ್ನೆಲೆಯನ್ನೊಳಗೊಂಡ ಕಥೆ
ಈ ಚಿತ್ರದ ನಿರ್ದೇಶಕರು ಹಾಗೂ ನಿರ್ಮಾಪಕರು ಮತ್ತೊಮ್ಮೆ ವಿಭಿನ್ನ ವಿಷಯ ಆಯ್ಕೆಮಾಡಿ ಸಿನಿರಂಗದಲ್ಲಿ ತಮ್ಮದೇ ಅದ ಗುರುತಾದಮೂಡಿಸಲು 80-90ರ ದಶಕದ ಹಿನ್ನೆಲೆಯನ್ನೊಳಗೊಂಡ ಕಥೆ ಸೃಷ್ಟಿಸಿರಬಹದು. ಈ ಮೂಲಕ ಹಳ್ಳಿಯ ಸಿಗಡಿನ ಕಥೆಯನ್ನು ತೆರೆಯೆ ಮೇಲೆ ತರಲು ಸಜ್ಜಾಗಿ ನಿಂತಿದ್ದಾರೆ ಎನ್ನಬಹುದು. ಪೋಸ್ಟರ್ ನೋಡಿ ಹೇಳುವುದಾದರೆ, ಈ ಚಿತ್ರದ ಪ್ರತಿಯೊಂದು ಪಾತ್ರವೂ ಕಥೆಯಲ್ಲಿ ಮಹತ್ವ ಹೊಂದಿರಬಹುದು ಎನ್ನಬಹುದು.
ಕುಟುಂಬ ಸಂಬಂಧಗಳು, ಗ್ರಾಮೀಣ ರಾಜಕೀಯ, ಭಕ್ತಿ, ಕಲಾ ಸಂಸ್ಕೃತಿ ಮತ್ತು ಮಾನವೀಯ ಸಂಘರ್ಷ ಇವೆಲ್ಲವೂ ಸೇರಿ ಒಂದು ಭಾವನಾತ್ಮಕ ಹಾಗೂ ಮನರಂಜನಾತ್ಮಕ ಅನುಭವವನ್ನು ನೀಡಲಿದೆ ಈ ಸಿನಿಮಾ ಎನ್ನಲಾಗುತ್ತಿದೆ. ಜಾತ್ರೆ, ನೃತ್ಯ, ಸಂಗೀತ, ನಾಟಕ ಹಿನ್ನೆಲೆಯಲ್ಲಿ ಆಗಿ ಒಂದು ಜೀವಂತ ಗ್ರಾಮೀಣ ಪ್ರಪಂಚವನ್ನು ತೆರೆಗೆ ತರುವ ಪ್ರಯತ್ನವನ್ನು ಮಾಡಲಿದ್ದಾರೆ ಈ ಸಿನಿಮಾ ನಿರ್ಮಾಪಕರಾದ ಕುಮಾರ್. ಎನ್. ಭದ್ರಾವತಿ. ಈ ಸಿನಿಮಾದಲ್ಲಿ ಶಿವರಾಜ್ ಕೆಆರ್ ಪೇಟೆ, ಬಾಲಾಜಿ ಮನೋಹರ್ ಹಾಗೂ ಕಾಂತಾರ ಸಿನಿಮಾದಲ್ಲಿ ನಟಿಸಿರುವ ಹಲವು ನಟನಟಿಯರು ಈ ಚಿತ್ರದಲ್ಲಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸದ್ಯಕ್ಕೆ ಪೋಸ್ಟರ್ ಮೂಲಕ ವಿಭಿನ್ನ ಗುರುತು ಮೂಡಿಸಿರುವ ‘ಊರಿನ ಗ್ರಾಮಸ್ಥರಲ್ಲಿ ವಿನಂತಿ’ಪೋಸ್ಟರ್, ಮುಂದಿನ ದಿನಗಳಲ್ಲಿ ಟೀಸರ್ ಮತ್ತು ಟ್ರೈಲರ್ ಮೂಲಕ ಇನ್ನಷ್ಟು ಕುತೂಹಲ ಹೆಚ್ಚಿಸುವ ಸಾಧ್ಯತೆ ಇದೆ. ಸದಸ್ಯೆ. ಊರಿನ ಗ್ರಾಮಸ್ಥರಲ್ಲಿ ವಿನಂತಿ’ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಸಹಜ ನಿರೀಕ್ಷೆ ಮೂಡಿಸಿದೆ. ಮುಂದಿನ ಅಪ್‌ಡೇಟ್‌ಗೆ ಕಾಯಬೇಕಾಗಿದೆ. ಈ ವರ್ಷದೊಳಗೆ ಶೂಟಿಂಗ್ ಹಾಗೂ ಸೆನ್ಸಾರ್ ಮಗಿಸಿ ಚಿತ್ರವು ತೆರೆಗೆ ಬರಲು ಸಿದ್ದವಾಗುತ್ತಿದೆ ಎನ್ನಲಾಗಿದೆ.