Headlines

Egg Curry: ಒಂದೇ ತರ ಮೊಟ್ಟೆ ಸಾರು ತಿಂದು ಬೇಜಾರಾ? ಇಲ್ಲಿದೆ 3 ಹೊಸ ಸ್ಟೈಲ್ ರೆಸಿಪಿ! | 3 Easy And Delicious Egg Curry Recipes To Try At Home Gvd

Egg Curry: ಒಂದೇ ತರ ಮೊಟ್ಟೆ ಸಾರು ತಿಂದು ಬೇಜಾರಾ? ಇಲ್ಲಿದೆ 3 ಹೊಸ ಸ್ಟೈಲ್ ರೆಸಿಪಿ! | 3 Easy And Delicious Egg Curry Recipes To Try At Home Gvd


ಯಾವಾಗ್ಲೂ ಒಂದೇ ತರ ಮೊಟ್ಟೆ ಸಾರು ತಿಂದು ಬೇಜಾರಾಗಿದ್ರೆ, ನಿಮಗಾಗಿ ಇಲ್ಲಿದೆ 3 ಹೊಸ ಬಗೆಯ ಎಗ್ ಕರಿ ರೆಸಿಪಿಗಳು. ಈ ಮೂರೂ ರೆಸಿಪಿಗಳ ರುಚಿ ಒಂದಕ್ಕಿಂತ ಒಂದು ಭಿನ್ನವಾಗಿದ್ದು, ನಿಮ್ಮ ಊಟಕ್ಕೆ ಹೊಸ ಟೇಸ್ಟ್ ಕೊಡುತ್ತೆ.

Egg Curry Recipe: ಪ್ರತಿದಿನ ಒಂದೇ ತರ ಮೊಟ್ಟೆ ಸಾರು ತಿಂದು ಬೋರ್ ಆಗಿದ್ರೆ, ಏನಾದ್ರೂ ಹೊಸದಾಗಿ ಟ್ರೈ ಮಾಡೋಕೆ ಇದು ಸಖತ್ ಟೈಮ್. ಮೊಟ್ಟೆ ಕರಿಯನ್ನು ಬೇರೆ ಬೇರೆ ರೀತಿ ಮಾಡೋದ್ರಿಂದ, ಅದರ ರುಚಿಯನ್ನೇ ಸಂಪೂರ್ಣವಾಗಿ ಬದಲಿಸಬಹುದು. ಮಸಾಲೆ, ಗ್ರೇವಿ ಮತ್ತು ಅಡುಗೆ ಮಾಡುವ ವಿಧಾನದಲ್ಲಿ ಸ್ವಲ್ಪ ಬದಲಾವಣೆ ಮಾಡಿದರೆ ಸಾಕು, ಅದೇ ಮೊಟ್ಟೆ ಕರಿ ಯಾವುದೇ ರೆಸ್ಟೋರೆಂಟ್‌ ಊಟವನ್ನೂ ಮೀರಿಸುವ ರುಚಿ ಕೊಡುತ್ತದೆ. ಮನೆಯಲ್ಲೇ ಸುಲಭವಾಗಿ ಮಾಡಬಹುದಾದ 3 ವಿಭಿನ್ನ ಎಗ್ ಕರಿ ರೆಸಿಪಿಗಳು ಇಲ್ಲಿವೆ.

ಧಾಬಾ-ಸ್ಟೈಲ್ ಎಗ್ ಕರಿ: ದೇಸಿ ಒಗ್ಗರಣೆಯೊಂದಿಗೆ ಸ್ಪೈಸಿ ರುಚಿ

ಮೊದಲು, ಬೇಯಿಸಿದ 4 ಮೊಟ್ಟೆಗಳನ್ನು ಸ್ವಲ್ಪ ಫ್ರೈ ಮಾಡಿಕೊಳ್ಳಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಅದಕ್ಕೆ ಜೀರಿಗೆ, ಪಲಾವ್ ಎಲೆ, ಹೆಚ್ಚಿದ ಈರುಳ್ಳಿ ಮತ್ತು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹುರಿಯಿರಿ. ಈಗ, ಟೊಮೆಟೊ, ಅರಿಶಿನ, ಖಾರದ ಪುಡಿ ಮತ್ತು ಧನಿಯಾ ಪುಡಿ ಸೇರಿಸಿ, ಮಸಾಲೆ ಹಸಿ ವಾಸನೆ ಹೋಗುವವರೆಗೆ ಚೆನ್ನಾಗಿ ಫ್ರೈ ಮಾಡಿ. ಗ್ರೇವಿಗಾಗಿ ಸ್ವಲ್ಪ ನೀರು ಸೇರಿಸಿ, ನಂತರ ಫ್ರೈ ಮಾಡಿದ ಮೊಟ್ಟೆಗಳನ್ನು ಹಾಕಿ. ಮೇಲೆ ಗರಂ ಮಸಾಲಾ ಮತ್ತು ತಾಜಾ ಕೊತ್ತಂಬರಿ ಸೊಪ್ಪನ್ನು ಉದುರಿಸಿ, 5 ನಿಮಿಷ ಬೇಯಿಸಿದರೆ, ನಿಮ್ಮ ಸ್ಪೈಸಿ ಧಾಬಾ-ಸ್ಟೈಲ್ ಎಗ್ ಕರಿ ರೆಡಿ!

ತೆಂಗಿನಕಾಯಿ ಹಾಲು ಎಗ್ ಕರಿ: ಸೌತ್ ಇಂಡಿಯನ್ ಸ್ಟೈಲ್ ಟೇಸ್ಟ್

ಒಂದು ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಕರಿಬೇವು ಮತ್ತು ಒಣಮೆಣಸಿನಕಾಯಿ ಹಾಕಿ ಒಗ್ಗರಣೆ ಮಾಡಿ. ನಂತರ, ಈರುಳ್ಳಿ ಮತ್ತು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹುರಿಯಿರಿ. ಟೊಮೆಟೊ ಹಾಕಿ, ಅದು ಮೆತ್ತಗಾಗುವವರೆಗೆ ಬೇಯಿಸಿ, ನಂತರ ತೆಂಗಿನಕಾಯಿ ಹಾಲು ಸೇರಿಸಿ. ಅರಿಶಿನ, ಉಪ್ಪು ಮತ್ತು ಖಾರದ ಪುಡಿ ಹಾಕಿ. ಬೇಯಿಸಿದ ಮೊಟ್ಟೆಗಳನ್ನು ಸೇರಿಸಿ 8-10 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಕುದಿಯಲು ಬಿಡಿ. ಈ ಕರಿ ಕ್ರೀಮಿಯಾಗಿ, ಹದವಾದ ಖಾರದಿಂದ ಕೂಡಿರುತ್ತದೆ. ಬಿಸಿ ಅನ್ನದ ಜೊತೆ ಸವಿಯಲು ಇದು ಸೂಪರ್ ಕಾಂಬಿನೇಷನ್.

ಕ್ರೀಮ್ ಗೋಡಂಬಿ ಎಗ್ ಕರಿ: ರಿಚ್, ರೆಸ್ಟೋರೆಂಟ್-ಸ್ಟೈಲ್ ಕರಿ

ಮೊದಲಿಗೆ, ಸ್ವಲ್ಪ ಗೋಡಂಬಿಯನ್ನು ನೆನೆಸಿಟ್ಟು, ನುಣ್ಣಗೆ ರುಬ್ಬಿ ಪೇಸ್ಟ್ ಮಾಡಿಕೊಳ್ಳಿ. ಒಂದು ಪ್ಯಾನ್‌ನಲ್ಲಿ ಎಣ್ಣೆ ಅಥವಾ ಬೆಣ್ಣೆ ಬಿಸಿ ಮಾಡಿ, ಈರುಳ್ಳಿ ಮತ್ತು ಟೊಮೆಟೊ ಪೇಸ್ಟ್ ಹಾಕಿ ಹುರಿಯಿರಿ. ಅರಿಶಿನ, ಖಾರದ ಪುಡಿ, ಧನಿಯಾ ಪುಡಿ ಮತ್ತು ಗೋಡಂಬಿ ಪೇಸ್ಟ್ ಸೇರಿಸಿ, ಚೆನ್ನಾಗಿ ಬೇಯಿಸಿ. ಈಗ, ಗ್ರೇವಿಯನ್ನು ದಪ್ಪ ಮಾಡಲು ಸ್ವಲ್ಪ ಹಾಲು ಅಥವಾ ಕ್ರೀಮ್ ಸೇರಿಸಿ. ಬೇಯಿಸಿದ ಮೊಟ್ಟೆಗಳನ್ನು ಹಾಕಿ 5-7 ನಿಮಿಷ ಬೇಯಿಸಿ. ಈ ಕರಿ ತುಂಬಾನೇ ರಿಚ್ ಮತ್ತು ಕ್ರೀಮಿಯಾಗಿದ್ದು, ವಿಶೇಷ ಸಂದರ್ಭಗಳಿಗೆ ಹೇಳಿ ಮಾಡಿಸಿದ್ದು.



Source link

Leave a Reply

Your email address will not be published. Required fields are marked *