ಒಂದಲ್ಲ ಎರಡು ಐಪಿಎಲ್ ಟಿಕೆಟ್ ಬೇಕು ಎಂದ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ನೀಡಿದ ಉತ್ತರವೇನು?

ಒಂದಲ್ಲ ಎರಡು ಐಪಿಎಲ್ ಟಿಕೆಟ್  ಬೇಕು ಎಂದ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ನೀಡಿದ ಉತ್ತರವೇನು?


ಒಂದಲ್ಲ ಎರಡು ಐಪಿಎಲ್ ಟಿಕೆಟ್ ಬೇಕು ಎಂದ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ನೀಡಿದ ಉತ್ತರವೇನು?

ಬೆಂಗಳೂರು, ಮಾ.28: ಐಪಿಎಲ್ ಕ್ರೇಜ್ ಈಗ ಕೇವಲ ಮೈದಾನಕ್ಕೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ವಿಧಾನಸಭೆಯಲ್ಲೂ ಪ್ರತಿಧ್ವನಿಸಿದೆ. ಐಪಿಎಲ್ ಪಂದ್ಯಗಳ ವೀಕ್ಷಣೆಗೆ ಶಾಸಕರಿಗೆ ಟಿಕೆಟ್ ನೀಡುವ ವಿಚಾರ ಸದನದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ, ಸುರೇಶ್ ಕುಮಾರ್ ಅವರಂತಹ ಕೆಲವು ಹಿರಿಯ ಶಾಸಕರು ನಮಗೆ ಟಿಕೆಟ್ ಬೇಡ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ, ಇನ್ನು ಕೆಲವು ಟಿಕೆಟ್‌ಗಾಗಿ ಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಐಪಿಎಲ್ ಪಂದ್ಯಗಳಿಗಾಗಿ ಶಾಸಕರು ಮತ್ತು ಎಂಎಲ್ಸಿಗಳಿಗೆ ನೀಡಲಾಗುತ್ತಿರುವ ಟಿಕೆಟ್ ಸಂಖ್ಯೆಯನ್ನು ಹೆಚ್ಚಿಸುವಷ್ಟು ಬೇಡಿಕೆ ಇಟ್ಟಿದ್ದರು. ಈ ಹಿಂದೆ ತಲಾ ಒಂದು ಟಿಕೆಟ್ ನೀಡಲಾಯಿತು, ಈಗ ಎರಡು ಟಿಕೆಟ್ ಎಂಬ ಚರ್ಚೆ ನಡೆದಿದೆ. ಶಾಸಕರಿಗೆ ಟಿಕೆಟ್ ನೀಡುವುದು ಮೊದಲಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ. ಈ ಬಾರಿಯೂ ಅದನ್ನು ಮುಂದುವರಿಸಲಾಗುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು. ತಮಗೂ ಕ್ರಿಕೆಟ್‌ನಲ್ಲಿ ಆಸಕ್ತಿ ಇದೆ, ಆದರೆ ಚುನಾವಣೆ ಮತ್ತು ಕೆಲಸದ ಒತ್ತಡದ ನಡುವೆ ಸಮಯ ಸಿಕ್ಕರೆ ಮಾತ್ರ ಮುಂದಿನ ಪಂದ್ಯಗಳನ್ನು ವೀಕ್ಷಿಸುವುದಾಗಿ ಅವರು ಹೇಳಿದರು. ಏಪ್ರಿಲ್ 9 ರವರೆಗೂ ಬಿಡುವಿಲ್ಲದ ಕಾರಣ ಸದ್ಯಕ್ಕೆ ಮೈದಾನಕ್ಕೆ ಹೋಗಲು ಸಾಧ್ಯವಿಲ್ಲ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *