
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳು ಕೇವಲ ವ್ಯಕ್ತಿಗಳ ಮೇಲೆ ಇವೆ, ಭಾರತ ಹಾಗೂ ಜಾಗತಿಕ ಮಟ್ಟದಲ್ಲಿ ಗಮನಾರ್ಹ ಬದಲಾವಣೆಗಳನ್ನು ತರಲಿವೆ. ಏಪ್ರಿಲ್ 2026 ರಲ್ಲಿ ದೇಶ ಮತ್ತು ವಿದೇಶಗಳಲ್ಲಿ ಎಂತಹ ಬದಲಾವಣೆಗಳು ಆಗಲಿವೆ ಎನ್ನುವುದನ್ನು ಸರಿಯಾಗಿ ಗಮನಿಸಬಹುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಅವಧಿಯಲ್ಲಿ ವಿಶೇಷವಾಗಿ ಮೀನ ಮತ್ತು ಮೇಷ ರಾಶಿಯಲ್ಲಿ ಸಂಭವಿಸುವ ಗ್ರಹಗಳ ಸಂಯೋಜನೆಯು ರಾಷ್ಟ್ರಗಳ ಆರ್ಥಿಕ ಮತ್ತು ರಾಜಕೀಯ ಸ್ಥಿತಿಗತಿಗಳ ಮೇಲೆ ಈ ಪ್ರಭಾವ ಬೀರಲಿದೆ.
ಭಾರತಕ್ಕೆ ಆಗುವ ಲಾಭ ಮತ್ತು ಶುಭ ಫಲಗಳು
ತಾಂತ್ರಿಕಕ್ರಾಂತಿ:
ಬುಧ ಮತ್ತು ಗುರು ಗ್ರಹಗಳ ಅನುಕೂಲಕರ ಸ್ಥಿತಿಯಿಂದಾಗಿ ಭಾರತದ ಐಟಿ, ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ಮೂಲಸೌಕರ್ಯ ಕ್ಷೇತ್ರದಲ್ಲಿ ಅಭೂತಪೂರ್ವ ಪ್ರಗತಿ ಕಂಡುಬರುತ್ತದೆ. ಹೊಸ ಸ್ಟಾರ್ಟ್‌ಅಪ್‌ಗಳಿಗೆ ಜಾಗತಿಕ ಮಟ್ಟದಲ್ಲಿ ಮಾನ್ಯತೆ ಸಿಗಲಿದೆ.
ರಕ್ಷಣಾ ಕ್ಷೇತ್ರದ ಬಲ:
ಮಂಗಳ ಗ್ರಹದ ಪ್ರಭಾವದಿಂದ ಭಾರತದ ರಕ್ಷಣಾ ಉತ್ಪಾದನೆ ಮತ್ತು ರಫ್ತು ಹೆಚ್ಚಾಗಲಿದೆ. ಸೈನ್ಯಕ್ಕೆ ಆಧುನಿಕ ಶಸ್ತ್ರಾಸ್ತ್ರಗಳ ಸೇರ್ಪಡೆಯಾಗಲಿದೆ, ಜಾಗತಿಕವಾಗಿ ಭಾರತದ ಸೈನಿಕ ಶಕ್ತಿ ಮತ್ತಷ್ಟು ಬಲಗೊಳ್ಳಲಿದೆ.
ಕೃಷಿಭೂಮಿಯ ಮೌಲ್ಯವರ್ಧನೆ:
ಭೂಮಿಗೆ ಸಂಬಂಧಿಸಿದ ಗ್ರಹಗಳ ಸಂಯೋಜನೆಯಿಂದಾಗಿ ಕೃಷಿ ಭೂಮಿ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೂಡಿಕೆ ಮಾಡುವವರಿಗೆ ಲಾಭದಾಯಕ ಸಮಯವಿದು.
ಭಾರತಕ್ಕೆ ಎದುರಾಗಬಹುದಾದ ನಷ್ಟ ಮತ್ತು ಸವಾಲುಗಳು
ಗಡಿ ಭಾಗದಲ್ಲಿ ಉದ್ವಿಗ್ನತೆ:
ಏಪ್ರಿಲ್ ಎರಡನೇ ವಾರದಲ್ಲಿ ಮಂಗಳ ಮತ್ತು ಶನಿ ಗ್ರಹಗಳ ಯುತಿಯು ಮೀನ ರಾಶಿಯಲ್ಲಿ ಸಂಭವಿಸುವುದರಿಂದ, ನೆರೆಹೊರೆಯ ರಾಷ್ಟ್ರಗಳೊಂದಿಗೆ ಗಡಿ ವಿವಾದ ಅಥವಾ ಸಣ್ಣಪುಟ್ಟ ಸಂಘರ್ಷಗಳು ಉಂಟಾಗುವ ಸಾಧ್ಯತೆಯಿದೆ.
ಆಡಳಿತಾತ್ಮಕ ಬದಲಾವಣೆ:
ಸೂರ್ಯ ಮತ್ತು ಶನಿಯ ಪ್ರಭಾವದಿಂದ ದೇಶದ ರಾಜಕೀಯದಲ್ಲಿ ದಿಢೀರ್ ಬದಲಾವಣೆಗಳು ಅಥವಾ ಸಚಿವ ಸಂಪುಟದಲ್ಲಿ ಪುನಾರಚನೆಯಂತಹ ವಿದ್ಯಮಾನಗಳು ನಡೆಯುತ್ತವೆ.
ಷೇರು ಅಸ್ಥಿರತೆ:
ಹಣಕಾಸಿನ ಅನಿರೀಕ್ಷಿತ ಏರಿಳಿತಗಳು ನಿಮಗೆ ಇರುತ್ತವೆ. ಹೂಡಿಕೆದಾರರು ಜಾಗರೂಕರಾಗಿರಬೇಕಾದ ಸಮಯವಿದು.
ಇತರ ರಾಷ್ಟ್ರಗಳು ಮತ್ತು ಜಾಗತಿಕ ಸ್ಥಿತಿ
ಆರ್ಥಿಕ ಪುನಶ್ಚೇತನ:
ಜಾಗತಿಕವಾಗಿ ಅನೇಕ ರಾಷ್ಟ್ರಗಳು ತಮ್ಮ ಹಳೆಯ ಆರ್ಥಿಕ ನೀತಿಗಳನ್ನು ಕೈಬಿಟ್ಟು ಹೊಸ ಡಿಜಿಟಲ್ ಕರೆನ್ಸಿ ಅಥವಾ ಸುಧಾರಿತ ತೆರಿಗೆ ನೀತಿಗಳತ್ತ ಮುಖ ಮಾಡಲಿವೆ. ಇದು ದೀರ್ಘಕಾಲದ ಲಾಭಕ್ಕೆ ದಾರಿ ಮಾಡಿಕೊಡಲಿದೆ.
ನೈಸರ್ಗಿಕ ವಿಕೋಪ ಭೀತಿ:
ಗ್ರಹಗಳ ಸಂಘರ್ಷದಿಂದ ಇಂಡೋನೇಷ್ಯಾ, ಜಪಾನ್ ಮತ್ತು ರಷ್ಯಾದ ಕೆಲವು ಭಾಗಗಳಲ್ಲಿ ಭೂಕಂಪ ಅಥವಾ ಸಮುದ್ರ ಮಟ್ಟದಲ್ಲಿ ಏರಿಕೆಯಂತಹ ನೈಸರ್ಗಿಕ ವಿಕೋಪಗಳ ಬಗ್ಗೆ ಎಚ್ಚರಿಕೆ ವಹಿಸಲಾಗಿದೆ.
ಸಾಂಸ್ಕೃತಿಕ ಪುನರುತ್ಥಾನ:
ಯೂರೋಪ್ ಮತ್ತು ಅಮೆರಿಕದಂತಹ ರಾಷ್ಟ್ರಗಳಲ್ಲಿ ಭಾರತೀಯ ಆಧ್ಯಾತ್ಮಿಕತೆ ಮತ್ತು ಯೋಗದಂತಹ ಪದ್ಧತಿಗಳಿಗೆ ಹೆಚ್ಚಿನ ಬೇಡಿಕೆಯಿದೆ, ಸಾಂಸ್ಕೃತಿಕ ವಿನಿಮಯದಿಂದ ಭಾರತಕ್ಕೆ ಗೌರವ ದೊರೆಯಲಿದೆ.
ಲೋಹ ಮತ್ತು ವಸ್ತುಗಳ ಬೆಲೆ ಏರಿಕೆ
ಚಿನ್ನದ ಬೆಲೆ:
ಏಪ್ರಿಲ್ ತಿಂಗಳ ಅಂತ್ಯದ ವೇಳೆಗೆ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರಿ ಏರಿಕೆಯಾಗುವ ಸಾಧ್ಯತೆಯಿದೆ. ಈ ಸಮಯದಲ್ಲಿ ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗಿದೆ.
ಇಂಧನ:
ಕಚ್ಚಾ ತೈಲದ ಬೆಲೆಯಲ್ಲಿ ಸ್ಥಿರತೆ ಇರಲಿದೆ, ಕೆಲವು ರಾಷ್ಟ್ರಗಳಿಗೆ ಸಾರಿಗೆ ವೆಚ್ಚ ಹೆಚ್ಚಾಗಿರುತ್ತದೆ.
ಒಟ್ಟಾರೆಯಾಗಿ ಏಪ್ರಿಲ್ ೨೦೨೬ರಲ್ಲಿ ಭಾರತ ತನ್ನ ಆಂತರಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಜಾಗತಿಕ ಮಟ್ಟದಲ್ಲಿ ಪ್ರಭಾವಿ ದೇಶವಾಗಿ ಕಾಣಿಸುತ್ತದೆ. ಆದಾಗ್ಯೂ, ಗಡಿ ಸುರಕ್ಷತೆ ಮತ್ತು ಆರ್ಥಿಕ ಶಿಸ್ತಿನ ಕಡೆಗೆ ಹೆಚ್ಚಿನ ಗಮನ ಹರಿಸುವುದು ಅನಿವಾರ್ಯ. ಇದಕ್ಕೆ ತಕ್ಕಂತೆ ವೈಯಕ್ತಿಕ ವ್ಯಾಪಾರ ವ್ಯವಹಾರ, ಯೋಜನೆಗಳು ಇದ್ದರೆ ಸುಖವಾದ ಜೀವನ ಸಾಧ್ಯ.
– ಲೋಹಿತ ಹೆಬ್ಬಾರ್