ಮೂರು ಕಾರಣಗಳಿಗೆ ಟಾಕ್ಸಿಕ್‌ ಚಿತ್ರಕ್ಕೆ ಕಿಯಾರಾ ಆಯ್ಕೆಯಾಗಿದ್ದು: ನಿರ್ದೇಶಕಿ ಗೀತು ಮೋಹನ್‌ ದಾಸ್‌

ಮೂರು ಕಾರಣಗಳಿಗೆ ಟಾಕ್ಸಿಕ್‌ ಚಿತ್ರಕ್ಕೆ ಕಿಯಾರಾ ಆಯ್ಕೆಯಾಗಿದ್ದು: ನಿರ್ದೇಶಕಿ ಗೀತು ಮೋಹನ್‌ ದಾಸ್‌

ಮೂರು ಕಾರಣಗಳಿಗೆ ಟಾಕ್ಸಿಕ್‌ ಚಿತ್ರಕ್ಕೆ ಕಿಯಾರಾ ಆಯ್ಕೆಯಾಗಿದ್ದು: ನಿರ್ದೇಶಕಿ ಗೀತು ಮೋಹನ್‌ ದಾಸ್‌

Bollywood Actress Kiara Advani in Toxic movie: ಯಶ್ ಅಭಿನಯದ ‘ಟಾಕ್ಸಿಕ್‌’ ಚಿತ್ರಕ್ಕೆ ನಾಯಕಿಯಾಗಿ ಕಿಯಾರಾ ಅಡ್ವಾಣಿ ಆಯ್ಕೆಯಾಗಲು ನಿರ್ದೇಶಕಿ ಗೀತು ಮೋಹನ್‌ ದಾಸ್‌ ಮೂರು ಪ್ರಮುಖ ಕಾರಣಗಳನ್ನು ಬಹಿರಂಗಪಡಿಸಿದ್ದಾರೆ.

ಯಶ್‌, ಕಿಯಾರಾ ಅಡ್ವಾಣಿ ಮುಖ್ಯಪಾತ್ರದಲ್ಲಿರುವ ‘ಟಾಕ್ಸಿಕ್‌’ ಸಿನಿಮಾ ಜೂ.4ರಂದು ಬಿಡುಗಡೆಯಾಗುತ್ತಿದೆ. ಈ ಬಿಗ್‌ ಬಜೆಟ್‌ ವರ್ಲ್ಡ್‌ ಕ್ಲಾಸ್‌ ಸಿನಿಮಾಕ್ಕೆ ನಾಯಕಿಯಾಗಿ ಕಿಯಾರಾ ಆಯ್ಕೆಯಾಗಿದ್ದು ಹೇಗೆ ಎಂದು ಮೂರು ಕಾರಣದೊಂದಿಗೆ ನಿರ್ದೇಶಕಿ ಗೀತು ಮೋಹನ್‌ ದಾಸ್‌ ವಿವರಿಸಿದ್ದಾರೆ.

ನಾಡಿಯಾ ಪಾತ್ರಕ್ಕೆ ಮೃದುತ್ವವೂ ಆವೇಶವೂ ಇದೆ. ಕಿಯಾರಾ ನಟನೆಯನ್ನು ಬಹಳ ಸೂಕ್ಷ್ಮವಾಗಿ ಗಮನಿಸಿದ ನನಗೆ ಈ ಪಾತ್ರಕ್ಕೆ ಅವರನ್ನು ಬಿಟ್ಟರೆ ಇನ್ನೊಬ್ಬರಿಲ್ಲ ಅನಿಸಿತ್ತು. ಸಿನಿಮಾದಲ್ಲಿ ತರ್ಕ ವರ್ಕೌಟ್‌ ಆಗುವುದಿಲ್ಲ. ಇಲ್ಲಿ ಎಮೋಶನ್‌ ಅಥವಾ ಭಾವನೆಯೇ ಪ್ರಬಲ ಮಾಧ್ಯಮ. ತರ್ಕಕ್ಕೂ ಮೀರಿ ಭಾವನಾತ್ಮಕವಾಗಿ ಕಿಯಾರಾ ಅವರನ್ನು ಆಯ್ಕೆ ಮಾಡಿದೆ.

ಕಿಯಾರಾ ಪಾತ್ರವನ್ನು ಜೀವಿಸುವ ಬಗೆ ಅದ್ಭುತ. ಆಕೆ ತೆರೆ ಮೇಲಿದ್ದರೆ ನಟಿಸುತ್ತಿದ್ದಾಳೆ ಅನಿಸಲ್ಲ, ಪಾತ್ರವೇ ನಮ್ಮೆದುರು ನಿಂತಂತೆ ಭಾಸವಾಗುತ್ತದೆ. ಅಬ್ಬರಕ್ಕಿಂತ ಗಾಢವಾಗಿ ತಟ್ಟುವ ಹುಡುಗಿಯವಳು. ಮೌನವಾಗಿರುತ್ತಾಳೆ, ಮನಸ್ಸಲ್ಲೇ ಪಾತ್ರದ ಬಗ್ಗೆ ಆಲೋಚಿಸುತ್ತಿರುತ್ತಾಳೆ. ಕೆಲವೊಮ್ಮೆ ಪಾತ್ರದ ಬಗ್ಗೆ ಕುತೂಹಲದಿಂದ ವಿಚಾರಿಸುತ್ತಾಳೆ. ನಿರ್ದೇಶಕರ ಚಿಂತನೆಯನ್ನು ಗ್ರಹಿಸಿ ಪಾತ್ರಕ್ಕಿಳಿಸುವ ಕಲೆ ಈಕೆಗಿದೆ.

ಈ ಹುಡುಗಿಯ ಶಿಸ್ತು, ಪ್ರಾಮಾಣಿಕತೆ, ತಾನಾಯ್ತು ತನ್ನ ಕೆಲಸ ಆಯ್ತು ಎಂಬ ಪ್ರವೃತ್ತಿ ನನಗೆ ಇಷ್ಟವಾದ ಮತ್ತೊಂದು ಅಂಶ ಎಂದು ನಿರ್ದೇಶಕಿ ತು ಮೋಹನ್‌ ದಾಸ್‌ ಕೊಂಡಾಡಿದ್ದಾರೆ.

ಇದನ್ನೂ ಓದಿ: ರಾಕಿಂಗ್​ ಸ್ಟಾರ್​ಗೆ ಡಿಪ್ರೆಷನ್ ಅಲ್ಲ, ಡೆಡಿಕೇಷನ್ – ಜೂನ್ 4ಕ್ಕೆ ಉತ್ತರ ಕೊಡ್ತಿನಿ ಅಂದ್ರು ಯಶ್

ದಳಪತಿ ವಿಜಯ್‌ ನಟನೆಯ ಬಹು ನಿರೀಕ್ಷಿತ ಚಿತ್ರ ‘ಜನ ನಾಯಗನ್‌’ ಬಿಡುಗಡೆ ಕಗ್ಗಂಟಾಗಿದೆ. ಆದರೆ ಜನ ಈ ಸಿನಿಮಾವನ್ನು ಮರೆತು ಬಿಡುವ ಮೊದಲೇ ರಿಲೀಸ್‌ ಮಾಡುವ ಪ್ಲಾನ್‌ನಲ್ಲಿ ಸಿನಿಮಾ ತಂಡವಿದೆ. ಯಶ್‌ ನಟನೆಯ ‘ಟಾಕ್ಸಿಕ್‌’ ಸಿನಿಮಾ ಜೂ.4ರಂದು ರಿಲೀಸ್‌ ಆಗುತ್ತಿದೆ. ಆ ಬಳಿಕ ಚಿತ್ರವನ್ನು ಬಿಡುಗಡೆ ಮಾಡಲು ಕೆವಿಎನ್‌ ಪ್ರೊಡಕ್ಷನ್‌ ಯೋಜಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ದಳಪತಿ ವಿಜಯ್‌ ಜನ್ಮದಿನವಾದ ಜೂನ್‌ 22 ರಂದು ಸಿನಿಮಾ ರಿಲೀಸ್‌ ಪ್ಲಾನ್‌ ಇದೆ ಎಂದು ಮೂಲಗಳು ತಿಳಿಸಿವೆ.

ಇನ್ನೊಂದೆಡೆ ಏಪ್ರಿಲ್‌ 23ರಿಂದ ತಮಿಳನಾಡಿನಲ್ಲಿ ಮತದಾನ ಆರಂಭವಾಗಲಿದ್ದು, ಈ ಬಾರಿ ಚುನಾವಣೆಯಲ್ಲಿ ನಟ ವಿಜಯ್‌ ಸ್ಪರ್ಧಿಸುತ್ತಿರುವ ಕಾರಣ ಮೇ 6ರವರೆಗೆ ಸಿನಿಮಾ ಬಿಡುಗಡೆ ಮಾಡುವಂತಿಲ್ಲ. ಆ ಬಳಿಕ ಚುನಾವಣಾ ಫಲಿತಾಂಶ ಸಿನಿಮಾ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವ ಕಾರಣ ಈ ನಿರ್ಧಾರಕ್ಕೆ ಬರಲಾಗಿದೆಯಂತೆ

Source link

Leave a Reply

Your email address will not be published. Required fields are marked *