ಸುಟ್ಟ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ: ಎದುರು ಮನೆಯವರಿಂದಲೇ ನಡೀತಾ ಭೀಕರ ಕೊಲೆ?

ಸುಟ್ಟ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ: ಎದುರು ಮನೆಯವರಿಂದಲೇ ನಡೀತಾ ಭೀಕರ ಕೊಲೆ?


ಸುಟ್ಟ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ: ಎದುರು ಮನೆಯವರಿಂದಲೇ ನಡೀತಾ ಭೀಕರ ಕೊಲೆ?

ಗದಗ, ಮಾರ್ಚ್ 29: ಸುತ್ತ ಸ್ಥಿತಿಯಲ್ಲಿ ಯುವಕನೊರ್ವನ ಶವ ಗದಗ ತಾಲೂಕಿನ ಹುಯಿಲಗೋಳ ಗ್ರಾಮದಲ್ಲಿ ಇದೆ. ಮೃತ ಯುವಕನನ್ನು ಚಂದ್ರು ಕುರಿ (27) ಎಂದು ಗುರುತಿಸಲಾಗಿದೆ, ಮಂಗಳವಾರ ರಾತ್ರಿ ಮನೆಯಿಂದ ಹೊರ ಹೋದ ಚಂದ್ರು ಮೃತದೇಹ ಸೇತುವೆಯೊಂದರ ಕೆಳಭಾಗದಲ್ಲಿ ಪತ್ತೆಯಾಗಿದೆ. ಕೊಲೆ ಅನುಮಾನಗೊಂಡಿದ್ದು, ಮಗನನ್ನು ಸಾಯಿಸಿ ಬಳಿಕ ದೇಹವನ್ನು ಸುಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮನೆಯ ಹೆಣ್ಣು ಮಕ್ಕಳನ್ನು ನೋಡ್ತಾನೆ ಎಂದು ಆರೋಪಿಸಿ ಎದುರಿನ ಮನೆ ಕುಟುಂಬಸ್ಥರು ಹಲವು ಬಾರಿ ಜಗಳ ತೆಗೆದಿದ್ದರು. ಮೈ ಮೇಲೆ ಬೈಕ್ ಹತ್ತಿಸಲೂ ಬಂದಿದ್ದರು. ಹೀಗಾಗಿ ಅವರೇ ಕೃತ್ಯ ಎಸಗಿರಬಹುದೆಂದು ಕುಟುಂಬಸ್ಥರು ಸಂಶಯ ವ್ಯಕ್ತಪಡಿಸಿದ್ದಾರೆ.

ತಂದೆಯ ಪ್ರತಿಜ್ಞೆ

ಇನ್ನು ಮಗ ಚಂದ್ರುವಿನ ಅನುಮಾನಾಸ್ಪದ ಸಾವಿನ ಬೆನ್ನಲ್ಲೇ ತಂದೆ ಬಸವರಾಜ್ ಪ್ರತಿಜ್ಞೆ ಮಾಡಿದ್ದಾರೆ. ಟಿವಿ9 ಜೊತೆ ಇರುವ ಅವರು, ತನಗೆ ಮೂರು ಹೊಲ ಇದೆ. ಅದನ್ನು ಕಳೆದುಕೊಂಡರೂ ಚಿಂತೆ ಇಲ್ಲ. ಸಾಲ ಮಾಡಿಯಾದರೂ ಹಣ ತರ್ತೀನಿ. ಆದರೆ ಮಗನನ್ನು ಕೊಂದ ಆರೋಪಿಗಳನ್ನು ಮಾತ್ರ ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ಚಂದ್ರು ಬಹಳ ಒಳ್ಳೆಯ ಹುಡುಗ, ಯಾರ ಜೊತೆ ತಂಟೆ-ತಕರಾರು ಮಾಡಿದವನಲ್ಲ. ತಾನಾಯ್ತು, ತನ್ನ ಕೆಲಸವಾಯ್ತು ಎಂಬಂತಿದ್ದ. ನಿತ್ಯ ಕೆಲಸಕ್ಕೆ ಹೋಗುವಾಗ 100 ರೂಪಾಯಿ ನನ್ನ ಕೇಳಿ ಪಡೆಯುತ್ತಿದ್ದ ಎಂದು ಭಾವುಕ.

ಇದನ್ನೂ ಓದಿ: ಸಾಲಗಾರರ ಕಾಟಕ್ಕೆ ಒಂದೇ ಕುಟುಂಬದ ಇಬ್ಬರು ಬಲಿ; ಮತ್ತೆರಡು ಮಂದಿ ಸ್ಥಿತಿ ಗಂಭೀರ

ಹಿರಿಯ ಪುತ್ರನಾಗಿದ್ದ ಚಂದ್ರು ಸೇರಿ ಎರಡನೇ ಮಗ ಸುರೇಶ್ ಮದುವೆಗೆ ತಂದೆ ಬಸವರಾಜ್ ತಯಾರಿ ನಡೆಸಿದ್ದರು. ಬೀರಲಿಂಗೇಶ್ವರ ಜಾತ್ರೆಯ ಬಳಿಕ ಹುಡುಗಿ ನೋಡಬೇಕೆಂದು ನಿರ್ಧರಿಸಿದ್ದರು. ಆದರೆ ಅಷ್ಟರೊಳಗಾಗಲೇ ಮಗನ ಪ್ರಾಣಪಕ್ಷಿ ಹಾರಿಹೋಗಿದೆ. ಮಗನ ಮದುವೆ ಕಣ್ತುಂಬಿಕೊಳ್ಳಬೇಕೆಂದಿದ್ದ, ಕರುಳ ಕುಡಿಯ ಅಂತ್ಯ ಸಂಸ್ಕಾರವನ್ನು ತಾವೇ ಮುಂದೆ ನಿಂತು ನೆರವೇರಿಸಬೇಕಾದ ಸ್ಥಿತಿ ಬಂದಿದೆ. ಹೀಗಾಗಿ ಮಗನ ಸಾವಿಗೆ ಸೇಡು ತೀರಿಸಿಕೊಳ್ಳೋದಾಗಿ ಬಸವರಾಜ್ ಅವರು ಹೇಳಿದ್ದಾರೆ. ಅಷ್ಟಕ್ಕೂ ಚಂದ್ರುಗೆ ಆಗಿದ್ದೇನು? ಕುಟುಂಬಸ್ಥರು ಹೇಳುವಂತೆ ಇದು ನಿಜವಾಗಿಯೂ ಕೊಲೆಯಾ? ಅಥವಾ ಘಟನೆ ಹಿಂದೆ ಬೇರೆ ಏನಾದರೂ ಕಾರಣಗಳಿವೆಯಾ? ಎಂಬುದು ಪೊಲೀಸರ ತನಿಖೆಯಿಂದಷ್ಟೇ ಬಯಲಾಗಬೇಕಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *