Headlines

ಗಲ್ಫ್ ರಾಷ್ಟ್ರಗಳಿಗೆ ಇರಾನ್ ಅಧ್ಯಕ್ಷರ ಎಚ್ಚರಿಕೆ – ಇರಾನ್‌ ಸಂಘರ್ಷ: ಇಂದು, ನಾಳೆ ಪಾಕ್‌ನಲ್ಲಿ ಸಭೆ | President Of Iran Warns Gulf Countries Amid Rising Tensions

ಗಲ್ಫ್ ರಾಷ್ಟ್ರಗಳಿಗೆ ಇರಾನ್ ಅಧ್ಯಕ್ಷರ ಎಚ್ಚರಿಕೆ – ಇರಾನ್‌ ಸಂಘರ್ಷ: ಇಂದು, ನಾಳೆ ಪಾಕ್‌ನಲ್ಲಿ ಸಭೆ | President Of Iran Warns Gulf Countries Amid Rising Tensions



ಗಲ್ಫ್ ರಾಷ್ಟ್ರಗಳಿಗೆ ಇರಾನ್ ಅಧ್ಯಕ್ಷರ ಎಚ್ಚರಿಕೆ – ಇರಾನ್‌ ಸಂಘರ್ಷ: ಇಂದು, ನಾಳೆ ಪಾಕ್‌ನಲ್ಲಿ ಸಭೆ | President Of Iran Warns Gulf Countries Amid Rising Tensions

ಅಮೆರಿಕ, ಇಸ್ರೇಲ್ ಮೈತ್ರಿಕೂಟವನ್ನು ಬೆಂಬಲಿಸುವ ಗಲ್ಫ್ ರಾಷ್ಟ್ರಗಳಿಗೆ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಎಚ್ಚರಿಕೆ ನೀಡಿದದ್ದಾರೆ. ನಿಮ್ಮ ರಾಷ್ಟ್ರದಲ್ಲಿ ಅಭಿವೃದ್ಧಿ ಭದ್ರತೆ ಇರಬೇಕು ಎಂದು ಬಯಸಿದರೆ ಅಮೆರಿಕ ಮತ್ತು ಇಸ್ರೇಲ್‌ಗೆ ನಿಮ್ಮ ಭೂಮಿ ಬಳಸಲು ಅನುಮತಿಸಬೇಡಿ ಎಂದು ಎಚ್ಚರಿಸಿದ್ದಾರೆ.

ಟೆಹ್ರಾನ್‌ : ಅಮೆರಿಕ, ಇಸ್ರೇಲ್ ಮೈತ್ರಿಕೂಟವನ್ನು ಬೆಂಬಲಿಸುವ ಗಲ್ಫ್ ರಾಷ್ಟ್ರಗಳಿಗೆ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಎಚ್ಚರಿಕೆ ನೀಡಿದದ್ದಾರೆ. ನಿಮ್ಮ ರಾಷ್ಟ್ರದಲ್ಲಿ ಅಭಿವೃದ್ಧಿ ಮತ್ತು ಭದ್ರತೆ ಇರಬೇಕು ಎಂದು ಬಯಸಿದರೆ, ಇರಾನ್ ಮೇಲೆ ದಾಳಿ ಮಾಡಲು ಅಮೆರಿಕ ಮತ್ತು ಇಸ್ರೇಲ್‌ಗೆ ನಿಮ್ಮ ಭೂಮಿಯನ್ನು ಬಳಸಲು ಅನುಮತಿಸಬೇಡಿ ಎಂದು ಎಚ್ಚರಿಸಿದ್ದಾರೆ.‘ಇರಾನ್‌ ತಾನಾಗೇ ದಾಳಿಗಳನ್ನು ನಡೆಸುವುದಿಲ್ಲ ಎಂದು ನಾವು ಹಲವು ಬಾರಿ ಹೇಳಿದ್ದೇವೆ. ಆದರೆ ನಮ್ಮ ಮೂಲಸೌಕರ್ಯ ಅಥವಾ ಆರ್ಥಿಕ ಕೇಂದ್ರಗಳನ್ನು ಗುರಿಯಾಗಿಸಿಕೊಂಡರೆ ನಾವು ಬಲವಾಗಿ ಪ್ರತೀಕಾರ ತೀರಿಸಿಕೊಳ್ಳುತ್ತೇವೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಇರಾನ್‌ ಸಂಘರ್ಷ: ಇಂದು, ನಾಳೆ ಪಾಕ್‌ನಲ್ಲಿ ಸಭೆ

ಇಸ್ಲಾಮಾಬಾದ್‌: ಇರಾನ್‌ ಸಂಘರ್ಷದ ಬಿಕ್ಕಟ್ಟು ಇತ್ಯರ್ಥಕ್ಕೆ ಮಧ್ಯಸ್ಥಿಕೆಗೆ ಯತ್ನಿಸುತ್ತಿರುವ ಪಾಕಿಸ್ತಾನ, ಈ ಕುರಿತ ಚರ್ಚೆಗಾಗಿ ಸೌದಿ ಅರೇಬಿಯಾ, ಟರ್ಕಿ ಮತ್ತು ಈಜಿಪ್ಟ್‌ನ ವಿದೇಶಾಂಗ ಸಚಿವರ ಸಭೆ ಕರೆದಿದೆ. ಭಾನುವಾರ ಹಾಗೂ ಸೋಮವಾರ 2 ದಿನ ಇಸ್ಲಾಮಾಬಾದ್‌ನಲ್ಲಿ ಸಭೆ ನಡೆಯಲಿದೆ. ಪಾಕ್‌ ವಿದೇಶಾಂಗ ಸಚಿ ಇಷಾಕ್‌ ದಾರ್‌ ಆಹ್ವಾನದ ಮೇರೆಗೆ ಸಭೆ ಆಯೋಜನೆ ಆಗಿದೆ. ಸೌದಿ ವಿದೇಶಾಂಗ ಸಚಿವರೂ ಆಗಿರುವ ಪ್ರಿನ್ಸ್‌ ಫೈಸಲ್‌ ಬಿನ್‌ ಫರ್ಹಾನ್‌ ಅಲ್‌ ಸೌದ್‌, ಟರ್ಕಿ ವಿದೇಶಾಂಗ ಸಚಿವ ಹಕಾನ್‌ ಫಿದನ್‌ ಮತ್ತು ಈಜಿಪ್ಟ್‌ ವಿದೇಶಾಂಗ ಸಚಿವ ಬರ್ದ್‌ ಅಬ್ದೆಲ್ತಿ ಪಾಲ್ಗೊಳ್ಳುತ್ತಿದ್ದಾರೆ. ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌ರನ್ನೂ ಇವರು ಭೇಟಿ ಆಗಲಿದ್ದಾರೆ.

ಪಾಕ್‌ ಕದನವಿರಾಮ ಯತ್ನಕ್ಕೆ ಇರಾನ್‌ ಅಧ್ಯಕ್ಷ ಮೆಚ್ಚುಗೆ

ಇಸ್ಲಾಮಾಬಾದ್‌: ಮಧ್ಯ ಏಷ್ಯಾ ಬಿಕ್ಕಟ್ಟು ತಿಂಗಳು 1 ತಿಂಗಳು ಪೂರ್ಣಗೊಳಿಸಿದ ಹೊತ್ತಿನಲ್ಲೇ ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್‌-ಇರಾನ್‌ ಅಧ್ಯಕ್ಷ ಅಧ್ಯಕ್ಷ ಮಸೂದ್‌ ಪೆಜೆಷ್ಕಿಯನ್‌ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಈ ವೇಳೆ ಯುದ್ಧಕ್ಕೆ ಕೊನೆಹಾಡುವ ಸಂಬಂಧ ಪಾಕಿಸ್ತಾನ ನಡೆಸುತ್ತಿರುವ ಸಂಧಾನ ಯತ್ನಕ್ಕೆ ಇರಾನ್‌ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದು ಶೆಹಬಾಜ್‌ ಷರೀಫ್‌ ತಿಳಿಸಿದ್ದಾರೆ.‘ದೂರವಾಣಿ ಮೂಲಕ ಸುಮಾರು ಒಂದು ಗಂಟೆ ಕಾಲ ನಡೆದ ಮಾತುಕತೆಯಲ್ಲಿ ಸಂಘರ್ಷದ ವಿಚಾರವಾಗಿ ನಾವು ಚರ್ಚೆ ನಡೆಸಿದ್ದೇವೆ. ಈ ವೇಳೆ ಇರಾನ್‌ ಮೇಲಿನ ಇಸ್ರೇಲ್‌ ದಾಳಿಯನ್ನು ಖಂಡಿಸಿದ್ದೇನೆ. ಜತೆಗೆ ಸಂಘರ್ಷಕ್ಕೆ ಕೊನೆ ಹಾಡುವ ವಿಚಾರದಲ್ಲಿ ಕೊಲ್ಲಿರಾಷ್ಟ್ರಗಳು ಮತ್ತು ಅಮೆರಿಕ ಜತೆಗೆ ಪಾಕಿಸ್ತಾನ ನಡೆಸುತ್ತಿರುವ ರಾಜತಾಂತ್ರಿಕ ಪ್ರಯತ್ನದ ವಿಚಾರ ಪ್ರಸ್ತಾಪಿಸಿದ್ದೇನೆ’ ಎಂದು ಶೆಹಬಾಜ್‌ ಷರೀಫ್ ತಿಳಿಸಿದ್ದಾರೆ.

‘ಸಂಘರ್ಷಕ್ಕೆ ಕೊನೆ ಹಾಡುವ ಮಾತುಕತೆಗೂ ಮೊದಲು ವಿಶ್ವಾಸ ಉಳಿಸಿಕೊಳ್ಳುವುದು ಅತ್ಯಗತ್ಯ ಎಂದು ತಿಳಿಸಿರುವ ಇರಾನ್‌ ಅಧ್ಯಕ್ಷರು, ಪಾಕಿಸ್ತಾನದ ರಾಜತಾಂತ್ರಿಕ ಪ್ರಯತ್ನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ’ ಎಂದು ಷರೀಫ್‌ ಹೇಳಿದ್ದಾರೆ.



Source link

Leave a Reply

Your email address will not be published. Required fields are marked *