ಬೆಂಗಳೂರು: ಭಾರತದ ದಿಗ್ಗಜ ಕ್ರಿಕೆಟಿಗರಾದ ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ 19ನೇ ಸೀಸನ್ ಐಪಿಎಲ್ ಟೂರ್ನಿಯ ಲೀಗ್ ಹಂತದಲ್ಲಿ ಮುಖಾಮುಖಿಯಾಗುವುದು ಅನುಮಾನ ಎನಿಸಿದೆ. ಈ ಕುರಿತಾದ ಇಂಟ್ರೆಸ್ಟಿಂಗ್ ಡೀಟೈಲ್ಸ್ ಇಲ್ಲಿದೆ ನೋಡಿ.

ಸ್ನಾಯುಸೆಳೆತಕ್ಕೆ ಒಳಗಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ನಾಯಕ ಎಂ.ಎಸ್.ಧೋನಿ ಅವರು ಈ ಬಾರಿ ಐಪಿಎಲ್‌ನಲ್ಲಿ ಆರಂಭಿಕ ಕೆಲ ಪಂದ್ಯಗಳಿಗೆ ಗೈರಾಗಲಿದ್ದಾರೆ. ಇದರೊಂದಿಗೆ ಅವರು ಏ.5ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ ವಿರುದ್ಧ ಪಂದ್ಯವನ್ನು ತಪ್ಪಿಸಿಕೊಳ್ಳಲಿದ್ದಾರೆ.

‘ಸ್ನಾಯುಸೆಳೆತಕ್ಕೆ ಒಳಗಾಗಿ ಧೋನಿ ಈಗ ಪುನಶ್ಚೇತನ ಶಿಬಿರದಲ್ಲಿದ್ದಾರೆ. ಹೀಗಾಗಿ ಅವರು 2026ರ ಐಪಿಎಲ್‌ನ ಆರಂಭಿಕ 2 ವಾರ ಪಂದ್ಯಗಳಿಗೆ ಲಭ್ಯವಿಲ್ಲ’ ಎಂದು ಶನಿವಾರ ಸಿಎಸ್‌ಕೆ ಫ್ರಾಂಚೈಸಿ ತಿಳಿಸಿದೆ.

44 ವರ್ಷದ ಧೋನಿ 2020ರಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿಯಾಗಿದ್ದರೂ ಐಪಿಎಲ್ ಆಡುತ್ತಿದ್ದಾರೆ. ಕಳೆದ ವರ್ಷ ಅವರು ಎಲ್ಲಾ 14 ಪಂದ್ಯಗಳಲ್ಲೂ ಕಾಣಿಸಿಕೊಂಡಿದ್ದರು.

ಈ ಬಾರಿ ಆರಂಭಿಕ ಕೆಲ ಪಂದ್ಯಗಳಿಗೆ ಚೆನ್ನೈ ಪರ ಧೋನಿ ಆಡುವುದಿಲ್ಲ. ಇದರೊಂದಿಗೆ, ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿ ಸಿಎಸ್‌ಕೆ ತಂಡ ಎಂ.ಎಸ್.ಧೋನಿ ಅಥವಾ ಸುರೇಶ್ ರೈನಾ ಇಲ್ಲದೆ ಆಡುವಂತಾಗಿದೆ.

2008ರಲ್ಲಿ ಐಪಿಎಲ್ ಆರಂಭವಾದಾಗಿನಿಂದಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಎಂ ಎಸ್ ಧೋನಿ ಅಥವಾ ಸುರೇಶ್ ರೈನಾ ಇರುತ್ತಿದ್ದರು. ರೈನಾ 2021ರವರೆಗೂ ಚೆನ್ನೈ ತಂಡದಲ್ಲಿದ್ದರು.

ಆಧುನಿಕ ಕ್ರಿಕೆಟ್‌ನ ಇಬ್ಬರು ದಿಗ್ಗಜ ಕ್ರಿಕೆಟಿಗರಾದ ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ ಲೀಗ್ ಹಂತದಲ್ಲಿ ಮುಖಾಮುಖಿಯಾಗುತ್ತಿಲ್ಲ. ಯಾಕೆಂದರೆ ಲೀಗ್ ಹಂತದಲ್ಲಿ ಒಮ್ಮೆ ಮಾತ್ರ ಸಿಎಸ್‌ಕೆ ಹಾಗೂ ಆರ್‌ಸಿಬಿ ತಂಡಗಳು ಮುಖಾಮುಖಿಯಾಗುತ್ತಿವೆ. ಒಂದು ವೇಳೆ ಉಭಯ ತಂಡಗಳು ನಾಕೌಟ್ ಹಂತಕ್ಕೇರಿದರೆ ಹಾಗೂ ಧೋನಿ ಕೂಡಾ ಫಿಟ್ ಆಗಿದ್ದರಷ್ಟೇ ಧೋನಿ-ಕೊಹ್ಲಿ ಕಾದಾಟ ನೋಡಲು ಅಭಿಮಾನಿಗಳಿಗೆ ಸಿಗಲಿದೆ.

Source link
ಆರ್‌ಸಿಬಿ ವಿರುದ್ಧ ಪಂದ್ಯಕ್ಕೆ ಎಂ.ಎಸ್.ಧೋನಿ ಅಲಭ್ಯ! ಲೀಗ್ ಹಂತದಲ್ಲಿ ಧೋನಿ-ಕೊಹ್ಲಿ ಮುಖಾಮುಖಿ ಇಲ್ಲ!