ಮಿಸ್ ಗ್ರ್ಯಾಂಡ್ ವೇದಿಕೆಯಲ್ಲಿ ಅಚ್ಚರಿ ಘಟನೆ: ಜಾರಿದ ರೂಪದರ್ಶಿಯ ಹಲ್ಲಿನ ಸೆಟ್, ವಿಡಿಯೋ | Miss Grand Thailand 2026 Video Viral A Set Of Teeth That Has Slipped Off The Model Kamolwan Chanago Mrq

ಮಿಸ್ ಗ್ರ್ಯಾಂಡ್ ವೇದಿಕೆಯಲ್ಲಿ ಅಚ್ಚರಿ ಘಟನೆ: ಜಾರಿದ ರೂಪದರ್ಶಿಯ ಹಲ್ಲಿನ ಸೆಟ್, ವಿಡಿಯೋ | Miss Grand Thailand 2026 Video Viral A Set Of Teeth That Has Slipped Off The Model Kamolwan Chanago Mrq



ಮಿಸ್ ಗ್ರ್ಯಾಂಡ್ ವೇದಿಕೆಯಲ್ಲಿ ಅಚ್ಚರಿ ಘಟನೆ: ಜಾರಿದ ರೂಪದರ್ಶಿಯ ಹಲ್ಲಿನ ಸೆಟ್, ವಿಡಿಯೋ | Miss Grand Thailand 2026 Video Viral A Set Of Teeth That Has Slipped Off The Model Kamolwan Chanago Mrq

ಮಿಸ್ ಗ್ರ್ಯಾಂಡ್ ಥೈಲ್ಯಾಂಡ್ ಸ್ಪರ್ಧೆಯ ವೇದಿಕೆಯಲ್ಲಿ, ಸ್ಪರ್ಧಿ ಕಮೋಲ್ವಾನ್ ಚಾನಾಗೋ ಅವರ ಹಲ್ಲಿನ ಸೆಟ್ ಜಾರಿದ ಘಟನೆ ನಡೆಯಿತು. ಈ ಅನಿರೀಕ್ಷಿತ ಸನ್ನಿವೇಶವನ್ನು ವಿಚಲಿತರಾಗದೆ ಆತ್ಮವಿಶ್ವಾಸದಿಂದ ನಿಭಾಯಿಸಿದ ಅವರ ನಡೆಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಯಿತು.

ಬ್ಯಾಂಕಾಕ್: ವೇದಿಕೆ ಮೇಲೆ ರೂಪದರ್ಶಿಯ ಹಲ್ಲಿನ ಸೆಟ್ ಬಿದ್ದ ಅಚ್ಚರಿಯ ಘಟನೆಯ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿದೆ. ಮಿಸ್ ಗ್ರ್ಯಾಂಡ್ ಥೈಲ್ಯಾಂಡ್ ವೇದಿಕೆಯಲ್ಲಿ ಈ ಘಟನೆ ನಡೆದಿದ್ದು, ಸ್ಪರ್ಧಿ ಕಮೋಲ್ವಾನ್ ಚಾನಾಗೋ ಧರಿಸಿದ್ದ ಹಲ್ಲಿನ ಸೆಟ್ ಹೊರಗೆ ಬರುತ್ತಿರುವ ವಿಡಿಯೋ ಇದಾಗಿದೆ. ಬುಧವಾರ ಮಿಸ್ ಗ್ರ್ಯಾಂಡ್ ಥೈಲ್ಯಾಂಡ್ ಸ್ಪರ್ಧೆ ನಡೆದಿದ್ದು, ಮಿಸ್ ಗ್ರ್ಯಾಂಡ್ ಪಾತುಮ್ ಥಾನಿಯಾಗಿರುವ ಕಮೋಲ್ವಾನ್ ಚಾನಾಗೋ ವೇದಿಕೆ ತಮ್ಮನ್ನು ಪರಿಚಯ ಮಾಡಿಕೊಳ್ಳುತ್ತಿದ್ದರು. ಈ ವೇಳೆ ಕಮೋಲ್ವಾನ್ ಚಾನಾಗೋ ಧರಿಸಿದ್ದ ಹಲ್ಲಿನ ಸೆಟ್ ಜಾರಿದೆ. ಈ ವೇಳೆ ಒಂದು ಕ್ಷಣವೂ ವಿಚಲಿತರಾಗದ ಚಾನಗೋ, ನಗುಮೊಗದಿಂದಲೇ ಹಲ್ಲುಗಳನ್ನು ಸರಿ ಮಾಡಿಕೊಂಡಿದ್ದಾರೆ.

ಈ ಅನಿರೀಕ್ಷಿತ ಘಟನೆಯಿಂದಾಗಿ ಮಿಸ್ ಗ್ರ್ಯಾಂಡ್ ಥೈಲ್ಯಾಂಡ್ ಸ್ಪರ್ಧೆಯಲ್ಲಿ ಕಮೋಲ್ವಾನ್ ಚಾನಾಗೋ ಸೆಂಟರ್ ಆಫ್ ಆಟ್ರ್ಯಾಕ್ಷನ್ ಆಗಿದ್ದರು. ಮಿಸ್ ಗ್ರ್ಯಾಂಡ್ ಥೈಲ್ಯಾಂಡ್ ಸ್ಪರ್ಧೆ ನೇರಪ್ರಸಾರವಾಗುತ್ತಿರುವ ಕಾರಣ ಥೈಲ್ಯಾಂಡ್‌ನ ಜನತೆ ಈ ದೃಶ್ಯ ನೋಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

10.7 ಮಿಲಿಯನ್‌ಗೂ ಅಧಿಕ ವ್ಯೂವ್ ಪಡೆದ ವಿಡಿಯೋ

ಮಾರ್ಚ್ 27ರಂದು ದಿ ಅರ್ಬನ್ ಹೆರಾಲ್ಡ್ ಹೆಸರಿನ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಚಾನಗೋ ಅವರ ಕೃತಕ ಹಲ್ಲುಗಳು ಕಳಚಿ ಬೀಳುತ್ತಿರುವ ವಿಡಿಯೋ ಶೇರ್ ಮಾಡಿಕೊಳ್ಳಲಾಗಿತ್ತು. ಸದ್ಯ ಈ ವಿಡಿಯೋ 10.7 ಮಿಲಿಯನ್‌ಗೂ ಅಧಿಕ ವ್ಯೂವ್‌ ಪಡೆದುಕೊಂಡಿದೆ. ಹಲ್ಲಿನ ಸೆಟ್ ಹೊರಬಂದ್ರೂ ವಿಚಲಿತಗೊಳ್ಳದ ಕಮೋಲ್ವಾನ್ ಚಾನಾಗೊ ಆತ್ಮವಿಶ್ವಾಸದಿಂದ ಕ್ಯಾಮೆರಾಗೆ ಹಿಮ್ಮುಖ ಮಾಡಿ ಹಲ್ಲು ಸರಿಪಡಿಸಿಕೊಂಡಿದ್ದಾರೆ. ನಂತರ ಕ್ಯಾಮೆರಾಗೆ ಮುಖ ಮಾಡಿ ಬಟ್ಟೆ ಸರಿ ಮಾಡಿಕೊಳ್ಳುತ್ತಾ ತಮ್ಮ ಪರಿಚಯ ಮಾಡಿಕೊಂಡಿದ್ದಾರೆ. ಮುಜುಗರದಿಂದ ಓಡಿ ಹೋಗದೇ ಎದುರಾದ ಅನಿರೀಕ್ಷಿತ ಮತ್ತು ಆಘಾತಾಕಾರಿ ಘಟನೆಯನ್ನು ಧೈರ್ಯವಾಗಿ ಚಾನಾಗೋ ಎದುರಿಸಿದ್ದಾರೆ.

ಪ್ರೇಕ್ಷಕರಿಂದ ಸಿಕ್ತು ಚಪ್ಪಾಳೆಯ ಮೆಚ್ಚುಗೆ

ಕಾರ್ಯಕ್ರಮದಲ್ಲಿ ನೆರೆದಿದ್ದ ಬಹುತೇಕರಿಗೆ ಒಂದು ಕ್ಷಣ ಏನಾಯ್ತು ಅನ್ನೋ ಗೊಂದಲದಲ್ಲಿರುವಾಗಲೇ ಕಮೋಲ್ವಾನ್ ಚಾನಾಗೋ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಿದ್ದರು. ಕಮೋಲ್ವಾನ್ ಚಾನಾಗೋ ಅವರ ಈ ನಡೆಗೆ ವೀಕ್ಷಕರು ಜೋರಾದ ಚಪ್ಪಾಳೆ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಪ್ಪಾಳೆ ಬಳಿಕ ಆತ್ಮವಿಶ್ವಾಸದಿಂದ ತಮ್ಮ ರ‍್ಯಾಂಪ್‌ವಾಕ್ ಮಾಡಿ ಚಾನಾಗೋ ವೇದಿಕೆಯಿಂದ ನಿರ್ಗಮಿಸಿದ್ದಾರೆ. ವೇದಿಕೆಯಿಂದ ಹಿಂದಿರುವ ಕೊನೆಕ್ಷಣದಲ್ಲಿ ಕ್ಯಾಮೆರಾಗಳಿಗೆ ಸ್ಮೈಲ್ ಮಾಡಿ ಚಾನಾಗೋ ತೆರಳಿದ್ದಾರೆ.

ಅಂತರ್ಜಾಲದಲ್ಲಿ ಚರ್ಚೆ

ಈ ಘಟನೆ ಇಡೀ ವಿಶ್ವದಾದ್ಯಂತ ವೈರಲ್ ಆಗಿದ್ದು, ಕೋಟಿಗೂ ಅಧಿಕ ವ್ಯೂವ್ ಪಡೆದುಕೊಂಡಿದೆ. ಉನ್ನತಮಟ್ಟದ ಸ್ಪರ್ಧೆಗಳಲ್ಲಿ ಸ್ಪರ್ಧಿಗಳು ಅನುಭವಿಸುವ ಮಾನಸಿಕ ಒತ್ತಡಗಳ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ. ಮುಖದ ಮೇಲೆ ನಗು ತೋರಿಸುವ ರೂಪದರ್ಶಿಗಳು ಅತ್ಯಧಿಕ ಒತ್ತಡವನ್ನು ಹೊಂದಿರುತ್ತಾರೆ. ತಾವು ಧರಿಸಿದ್ದ ಉಡುಗೆ, ಕ್ಯಾಟ್ ವ್ಯಾಕ್ ಸೇರಿದಂತೆ ಎಲ್ಲವೂ ಪರ್ಫೆಕ್ಟ್ ಆಗಿರಬೇಕೆಂಬ ಒತ್ತಡವನ್ನು ರೂಪದರ್ಶಿಗಳು ಹೊಂದಿರುತ್ತಾರೆ ಎಂದು ಹಲವರು ಕಮೆಂಟ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸಲ್ಮಾನ್ ಖಾನ್ ತಮ್ಮ ತೋಟದ ಮನೆಯಲ್ಲಿ ಮದುವೆಯಾದರೇ?, ಫೋಟೋ ವೈರಲ್ ಆದ ನಂತ್ರ ಪ್ರಶ್ನಿಸಿದ ಜನರು

ಇನ್ನು ಕೆಲವರು ಚಾನಾಗೋ ಅವರ ವಿಡಿಯೋವನ್ನು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಹಲ್ಲುಗಳಿಗೆ ಏನಾಗಿರಬಹುದು? ಸುಂದರವಾಗಿ ಕಾಣಲು ಹಲ್ಲುಗಳನ್ನು ಹಾಕಿಸಿಕೊಂಡಿರಬಹುದು. ಇಂದು ನಟಿ, ರೂಪದರ್ಶಿಗಳು ದೈಹಿಕ ಸೌಂದರ್ಯಕ್ಕಾಗಿ ಪ್ಲಾಸ್ಟಿಕ್ ಸರ್ಜರಿಗೊಳಗಾಗುತ್ತಿರೋದು ಆಘಾತಕಾರಿ ಎಂದು ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.

ಮಿಸ್ ಗ್ರ್ಯಾಂಡ್ ಥೈಲ್ಯಾಂಡ್ 2026ರ ಮಾರ್ಚ್ 28 ರಂದು ಬ್ಯಾಂಕಾಕ್‌ನ ಬ್ರಾವೋ ಬಿಕೆಕೆ ಮಾಲ್‌ನ ಎಂಜಿಐ ಹಾಲ್‌ನಲ್ಲಿ ನಡೆಯಲಿದೆ. ವಿಜೇತರಿಗೆ ಮಿಸ್ ಗ್ರ್ಯಾಂಡ್ ಥೈಲ್ಯಾಂಡ್ 2025 ಸರುನ್ರತ್ ಗೊಟ್ಚಾಬೆಲ್ ಪುಗ್ಪಿಪತ್ ಕಿರೀಟವನ್ನು ಧರಿಸಲಿದ್ದಾರೆ. ಅಕ್ಟೋಬರ್ 2026 ರಲ್ಲಿ ಭಾರತದಲ್ಲಿ ನಡೆಯುವ ಮಿಸ್ ಗ್ರ್ಯಾಂಡ್ ಇಂಟರ್ನ್ಯಾಷನಲ್ 2026 ರಲ್ಲಿ ಸ್ಪರ್ಧಿಸಲಿದ್ದಾರೆ.

ಇದನ್ನೂ ಓದಿ: ಹೋಳಿ ಆಚರಿಸಲು ನೆಟ್ಟೆಡ್‌ ಡ್ರೆಸ್‌ ಧರಿಸಿ ಬಂದ ನಟಿ ಪೂನಂ ಪಾಂಡೆ Video Viral



Source link

Leave a Reply

Your email address will not be published. Required fields are marked *