Vijay vs MK Stalin: ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಟಿವಿಕೆ: 2 ಕ್ಷೇತ್ರದಲ್ಲಿ ದಳಪತಿ ವಿಜಯ್ ಸ್ಪರ್ಧೆ | Tvk Releases List Of Candidates For Tamil Nadu Assembly Elections Vijay Contest In 2 Constituencies

Vijay vs MK Stalin: ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಟಿವಿಕೆ: 2 ಕ್ಷೇತ್ರದಲ್ಲಿ ದಳಪತಿ ವಿಜಯ್ ಸ್ಪರ್ಧೆ | Tvk Releases List Of Candidates For Tamil Nadu Assembly Elections Vijay Contest In 2 Constituencies



Vijay vs MK Stalin: ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಟಿವಿಕೆ: 2 ಕ್ಷೇತ್ರದಲ್ಲಿ ದಳಪತಿ ವಿಜಯ್ ಸ್ಪರ್ಧೆ | Tvk Releases List Of Candidates For Tamil Nadu Assembly Elections Vijay Contest In 2 Constituencies

ನಟ ದಳಪತಿ ವಿಜಯ್ ಸ್ಥಾಪಿಸಿದ ಟಿವಿಕೆ ಪಕ್ಷವು 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸುತ್ತಿದೆ. ವಿಜಯ್ ಅವರು 2 ಕ್ಷೇತ್ರಗಳಿಂದ ಕಣಕ್ಕಿಳಿಯಲಿದ್ದು, ತನಗೊಂದು ಅವಕಾಶ ನೀಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.

ತಮಿಳುನಾಡು ಚುನಾವಣೆಗೆ ರಾಜಕೀಯ ಪಕ್ಷಗಳ ಭರದ ಸಿದ್ಧತೆ

2026ರ ಏಪ್ರಿಲ್ 23ರಂದು ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಎಲ್ಲಾ ರಾಜಕೀಯ ಪಕ್ಷಗಳು ಭರದ ಸಿದ್ಧತೆ ನಡೆಸುತ್ತಿದ್ದು, ಕೇತ್ರಗಳಿಗೆ ತಮ್ಮ ತಮ್ಮ ಪಕ್ಷಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತಿವೆ. ಅದರಂತೆ ಪಕ್ಷ ಸ್ಥಾಪನೆಯ ಬಳಿಕ ಇದೇ ಮೊದಲ ಬಾರಿ ಚುನಾವಣೆಗೆ ಸ್ಪರ್ಧೆ ಮಾಡುತ್ತಿರುವ ತಮಿಳುನಟ ದಳಪತಿ ವಿಜಯ್ ಅವರು ಸ್ಥಾಪಿಸಿದ ಟಿವಿಕೆ ಪಕ್ಷವೂ ಕೂಡ ತನ್ನ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಅಧ್ಯಕ್ಷ ದಳಪತಿ ವಿಜಯ್ ತಮಿಳುನಾಡಿನ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಮಾಹಿತಿ ಇದೆ. ವಿಜಯ್ ಅವರ ಟಿವಿಕೆ(Tamilaga Vettri Kazhagam) ಇದೇ ಮೊದಲ ಬಾರಿ ಚುನಾವಣೆಗೆ ಸ್ಪರ್ಧೆ ಮಾಡಲಿದೆ.

ತಮ್ಮಗೊಂದು ಅವಕಾಶ ನೀಡಿ ಎಂದ ವಿಜಯ್ ಜೋಸೆಪ್

ತಮ್ಮ ಟಿವಿಕೆ ಪಕ್ಷಕ್ಕೆ ಒಂದು ಅವಕಾಶ ನೀಡಿ ವಿಸಿಲ್‌ಗೆ ಮತ ಹಾಗೂ ಇದು ವಿಸಿಲ್ ಕ್ರಾಂತಿಯ ಚುನಾವಣೆ(whistle revolution election) ಎಂದು ಅವರು ತಮ್ಮ ಪಕ್ಷದ ಚುನಾವಣಾ ಚಿಹ್ನೆಯನ್ನು ಪ್ರದರ್ಶಿಸುತ್ತಾ ರಾಜ್ಯದ ಜನರಿಗೆ ಮನವಿ ಮಾಡಿದ್ದಾರೆ. ಮತದಾರರು ತಮ್ಮ ಮತ್ತು ಇತರ ಟಿವಿಕೆ ಅಭ್ಯರ್ಥಿಗಳ ನಡುವೆ ವ್ಯತ್ಯಾಸ ತೋರಿಸಬಾರದು ಅವರೆಲ್ಲರೂ ಒಂದೇ ಎಂದು ಒತ್ತಿ ವಿಜಯ್ ಒತ್ತಿ ಹೇಳಿದ್ದಾರೆ.

ತಮಿಳುನಾಡು ವಿಧಾನಸಭೆಯ 234 ಕ್ಷೇತ್ರಗಳಿಗೆ ಏಪ್ರಿಲ್ 23 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಅಧಿಕಾರದಲ್ಲಿರುವ ಡಿಎಂಕೆ ಐದು ಮೂಲೆಗಳಿಂದ ಸ್ಪರ್ಧೆ ಎದುರಿಸುತ್ತಿದೆ. ಹಾಗೆಯೇ ಎಐಎಡಿಎಂಕೆ ಮತ್ತು ಬಿಜೆಪಿಯ ಎನ್‌ಡಿಎ ಬಣವು ಮತ್ತೆ ಅಧಿಕಾರಕ್ಕೆ ಬರಲು ಎದುರು ನೋಡುತ್ತಿದೆ. ವಿಜಯ್ ಅವರ ಟಿವಿಕೆ ಪಕ್ಷವೂ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ರಾಜಕೀಯ ಪ್ರವೇಶಕ್ಕೆ ಸಜ್ಜಾಗಿದೆ. ಎಸ್ ರಾಮದೋಸ್ ನೇತೃತ್ವದ ಪಿಎಂಕೆ ಮತ್ತು ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ ಅವರ ಸಹಾಯಕಿ ಶಶಿಕಲಾ ಸ್ಥಾಪಿಸಿದ AIPTMMK ಪಕ್ಷದ ಮೈತ್ರಿ ನಾಲ್ಕನೇ ರಂಗವನ್ನು ತೆರೆದಿದೆ. ಮತ್ತು ಸೀಮನ್ ನೇತೃತ್ವದ ನಾಮ್ ತಮಿಳರ್ ಕಚ್ಚಿ (ಎನ್‌ಟಿಕೆ) ಏಕಾಂಗಿಯಾಗಿ ಸ್ಪರ್ಧಿಸುತ್ತಿದೆ.

ಎರಡು ಕ್ಷೇತ್ರಗಳಲ್ಲಿ ವಿಜಯ್ ಸ್ಪರ್ಧೆ:

ವಿಜಯ್ ಪೆರಂಬೂರು ಮತ್ತು ತಿರುಚ್ಚಿ ಪೂರ್ವ ಈ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು, ಪ್ರಸ್ತುತ ಇಲ್ಲಿ ಡಿಎಂಕೆ ಶಾಸಕರಿದ್ದಾರೆ ಆರ್‌ಡಿ ಶೇಖರ್ ಪೆರಾಂಬೂರು ಶಾಸಕರಾಗಿದ್ದರೆ, ಇನಿಗೋ ಎಸ್ ಇರುದಯರಾಜ್ ತಿರುಚ್ಚಿ ಪೂರ್ವದ ಶಾಸಕರಾಗಿದ್ದಾರೆ.

ಇದು ಕೇವಲ ಅಭ್ಯರ್ಥಿಗಳ ಹೆಸರುಗಳ ಘೋಷಣೆಯಲ್ಲ ಇದು ಜನರ ರಕ್ಷಕರ ಹೆಸರುಗಳನ್ನು ಘೋಷಿಸುವ ಸಭೆ. ನಮ್ಮ ಅಭ್ಯರ್ಥಿಗಳು ಸಾಮಾನ್ಯ ಹಿನ್ನೆಲೆಯಿಂದ ಬಂದವರು. ಅವರು ಭಾರೀ ಅಧಿಕಾರಿಗಳಲ್ಲ. ನಮ್ಮ ಶಾಸಕರು ಲೂಟಿ ಮತ್ತು ಅಕ್ರಮ ಗಣಿಗಾರಿಕೆ ಅಥವಾ ಅವರನ್ನು ಪ್ರಶ್ನಿಸುವ ಪತ್ರಕರ್ತರ ಮೇಲೆ ಹಲ್ಲೆ ಮಾಡಿದ ಅನುಭವ ಹೊಂದಿರಬಾರದು ಎಂದು ವಿಜಯ್ ಆಡಳಿತದಲ್ಲಿರುವ ಡಿಎಂಕೆ ಪಕ್ಷಕ್ಕೆ ಟಾಂಗ್ ನೀಡಿದ್ದಾರೆ. ಡಿಎಂಕೆ ಅಭ್ಯರ್ಥಿಯೊಬ್ಬರ ವಿರುದ್ಧ ಭ್ರಷ್ಟಾಚಾರದ ಆರೋಪಗಳಿವೆ. ಅವರು ಜೈಲಿಗೆ ಹೋಗಿ ಹಿಂತಿರುಗಿದ್ದಾರೆ. ಅವರು ಯಾರೆಂದು ನೀವೆಲ್ಲರೂ ಯೋಚಿಸಿರಬಹುದು ಎಂದು ಅವರು ಹೇಳಿದರು.

ಇದನ್ನೂ ಓದಿ: ಐಪಿಎಲ್ ಲೈವ್ ಕಾಮೆಂಟರಿಯಲ್ಲೇ ಕಿತ್ತಾಡಿಕೊಂಡ ಸೆಹ್ವಾಗ್, ಆರ್ ಅಶ್ವಿನ್: ಇಬ್ಬರ ವಿರುದ್ಧ ಬಿಸಿಸಿಐ ಕ್ರಮ ಸಾಧ್ಯತೆ

ಟಿವಿಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ತಾನು ಸ್ವತಃ ಪ್ರಯತ್ನಗಳನ್ನು ನಡೆಸಿದ್ದೇನೆ. ಈ ಚುನಾವಣೆ ನಮ್ಮ ಜನತಾ ಮೈತ್ರಿಕೂಟ ಮತ್ತು ಡಿಎಂಕೆ ಸ್ಟಾಲಿನ್ ಸರ್ ಅವರ ಮೈತ್ರಿಕೂಟದ ನಡುವಿನ ದ್ವಿಮುಖ ಹೋರಾಟವಾಗಿದೆ ಎಂದು ಅವರು ಹೇಳಿದರು. ಜೊತೆಗೆ ಮಾದಕ ವಸ್ತು ಮುಕ್ತ ತಮಿಳುನಾಡು, 29 ರ ನಂತರವೂ ಉದ್ಯೋಗ ಸಿಗದವರಿಗೆ ಮಾಸಿಕ ನೆರವು ಮತ್ತು ಸರ್ಕಾರಿ ಉದ್ಯೋಗ ನೇಮಕಾತಿಯಲ್ಲಿ ಹೊಣೆಗಾರಿಕೆ ಮತ್ತು ಪಾರದರ್ಶಕತೆಗಾಗಿ ಕಾನೂನನ್ನು ಜಾರಿಗೆ ತರುವುದಾಗಿ ವಿಜಯ್ ಭರವಸೆ ನೀಡಿದರು.

ಕೊಳತ್ತೂರಿನಲ್ಲಿ ಟಿವಿಕೆಯ ವಿಎಸ್ ಬಾಬು ಅವರು ಡಿಎಂಕೆ ನಾಯಕ ಮತ್ತು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರನ್ನು ಎದುರಿಸಲಿದ್ದಾರೆ. ಚೆಪಾಕ್‌ನಲ್ಲಿ ಉಪಮುಖ್ಯಮಂತ್ರಿ ಮತ್ತು ಎಂಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ವಿರುದ್ಧ ಸ್ಪರ್ಧಿಸಲು ಟಿವಿಕೆಗೆ ಸೇರ್ಪಡೆಗೊಂಡ ಮಾಜಿ ಕಾಂಗ್ರೆಸ್ ನಾಯಕ ಸೆಲ್ವಂ ಅವರನ್ನು ವಿಜಯ್ ಆಯ್ಕೆ ಮಾಡಿದ್ದಾರೆ. ಟಿವಿಕೆ ಪ್ರಧಾನ ಕಾರ್ಯದರ್ಶಿ ಆಧವ್ ಅರ್ಜುನ ವಿಲ್ಲಿವಕ್ಕಂನಿಂದ ಟಿವಿಕೆ ಅಭ್ಯರ್ಥಿಯಾಗಿದ್ದು, ಪಕ್ಷವು ಗೋಬಿಚೆಟ್ಟಿಪಾಳ್ಯಂನಿಂದ ಸೆಂಗೊಟ್ಟೈಯನ್ ಅವರನ್ನು ಕಣಕ್ಕಿಳಿಸಿದೆ.

ಇದನ್ನೂ ಓದಿ: ಥಾರ್ ಮಹೀಂದ್ರಾ ಡಿಕ್ಕಿ ಬೇಸಿಗೆ ರಜೆ ಕಳೆಯಲು ಅಜ್ಜನ ಮನೆಗೆ ಬಂದ ಇಬ್ಬರು ಮೊಮ್ಮಕ್ಕಳು ಹಾಗೂ ಅಜ್ಜ ಸಾವು



Source link

Leave a Reply

Your email address will not be published. Required fields are marked *