Headlines

ಅಭಿಮಾನಿಗಳಿಗೆ ಗುಡ್​ನ್ಯೂಸ್ ಕೊಟ್ಟ Bigg Boss ಸಂಗೀತಾ ಶೃಂಗೇರಿ- ಫೋಟೋ ಹಂಚಿಕೊಂಡ ನಟಿ

ಅಭಿಮಾನಿಗಳಿಗೆ ಗುಡ್​ನ್ಯೂಸ್ ಕೊಟ್ಟ Bigg Boss ಸಂಗೀತಾ ಶೃಂಗೇರಿ- ಫೋಟೋ ಹಂಚಿಕೊಂಡ ನಟಿ

ಅಭಿಮಾನಿಗಳಿಗೆ ಗುಡ್​ನ್ಯೂಸ್ ಕೊಟ್ಟ Bigg Boss ಸಂಗೀತಾ ಶೃಂಗೇರಿ- ಫೋಟೋ ಹಂಚಿಕೊಂಡ ನಟಿ

ಬಿಗ್​ಬಾಸ್​ ಸೀಸನ್​ 10ರ ಜನಪ್ರಿಯ ಸ್ಪರ್ಧಿ ಸಂಗೀತಾ ಶೃಂಗೇರಿ, ಶೋನಿಂದ ಹೊರಬಂದ ನಂತರ ಅಭಿಮಾನಿಗಳು ಕಾಯ್ತದ್ದ ಗುಡ್​​ನ್ಯೂಸ್​ ಕೊಟ್ಟಿದ್ದಾರೆ. ಈ ಕುರಿತು ತಮ್ಮ ಸೋಷಿಯಲ್​  ಮೀಡಿಯಾದಲ್ಲಿ ಫೋಟೋಗಳನ್ನು ಶೇರ್​ ಮಾಡಿದ್ದಾರೆ ನಟಿ.

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ರಲ್ಲಿ ಬಹುತೇಕರ ಅಚ್ಚುಮೆಚ್ಚಿನ ಸ್ಪರ್ಧಿಯಾಗಿದ್ದವರು ಸಂಗೀತಾ ಶೃಂಗೇರಿ. ಬಿಗ್​​ಬಾಸ್​ನಿಂದ ಆಚೆ ಬಂದ ಬಳಿಕ ಸಂಗೀತಾ ಶೃಂಗೇರಿ ಅವರು ಯಾವುದೇ ಪ್ರಾಜೆಕ್ಟ್​ಗೆ ಕೈ ಹಾಕಿರಲಿಲ್ಲ. ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. ಜೊತೆಗೆ ಕ್ರಿಸ್ಟಲ್​ ಬಿಜಿನೆಸ್​ ಕೂಡ ಶುರು ಮಾಡಿದ್ದಾರೆ.

ಆದರೆ ಬಿಗ್​ಬಾಸ್​ನಿಂದ ಹೊರಕ್ಕೆ ಬಂದ ಮೇಲೆ ಇದೀಗ ಮೊದಲ ಬಾರಿಗೆ ಗುಡ್​ನ್ಯೂಸ್​ ಕೊಟ್ಟಿದ್ದಾರೆ ನಟಿ. ಪೂಜೆ ನೆರವೇರಿಸುತ್ತಲೇ ಈ ವಿಷಯವನ್ನು ಅವರು ಶೇರ್​ ಮಾಡಿಕೊಂಡಿದ್ದಾರೆ. ಅದು ಅವರ ಮುಂದಿನ ಚಿತ್ರ ‘ಪದ್ಮನಾಭ ಆ್ಯಂಡ್ ಫ್ಯಾಮಿಲಿ’. ಈ ಸಿನಿಮಾ ಸೆಟ್ಟೇರಿದೆ. ಇಸ್ಮಾಯಿಲ್ ಅವರು ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ.

ನಟಿ ಸಂಗೀತಾ ಶೃಂಗೇರಿ ಅವರು ಬಿಗ್​ಬಾಸ್​ನಿಂದ ಬರುತ್ತಿದ್ದಂತೆಯೇ ‘ಮಾರಿಗೋಲ್ಡ್​’ ಸಿನಿಮಾ ರಿಲೀಸ್ ಆಗಿತ್ತು. ಆದರೆ ಇದು ಶೂಟಿಂಗ್​ ಆಗಿದ್ದು, ಅವರು ಷೋಗೆ ಹೋಗುವ ಮೊದಲೇ. ಆದರೆ ಇದೀಗ ‘ಪದ್ಮನಾಭ ಆ್ಯಂಡ್ ಫ್ಯಾಮಿಲಿ’ ಮೂಲಕ ಷೋ ಬಳಿಕದ ಮೊದಲ ಚಿತ್ರವಾಗಿದೆ.

ಸದಾಶಿವ ಶೆಟ್ಟಿ ಅವರು ‘ಪದ್ಮನಾಭ ಆ್ಯಂಡ್ ಫ್ಯಾಮಿಲಿ’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ನಟಿಗೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.

ಇನ್ನು ನಟಿಯ ಬಗ್ಗೆ ಹೇಳುವುದೇ ಬೇಡ ಬಿಡಿ. 2016ರಲ್ಲಿ ಸ್ಟಾರ್ ಸುವರ್ಣ ವಾಹಿನಿಯ ‘ಹರ ಹರ ಮಹಾದೇವ’ ಕನ್ನಡ ಧಾರವಾಹಿ ಮೂಲಕ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿಕೊಟ್ಟ ಇವರು, ಪಾವರ್ತಿ ಪಾತ್ರದ ಮೂಲಕ ಖ್ಯಾತಿ ಗಳಿಸಿದರು. ಎ+ ಸಿನಿಮಾ ಮೂಲಕ ಸ್ಯಾಂಡಲ್​ವುಡ್​​ಗೆ ಎಂಟ್ರಿ ಕೊಟ್ಟರು.

ಬಳಿಕ ಸಾಲಗಾರರ ಸಹಕಾರ ಸಂಘ, 777 ಚಾರ್ಲಿ, ಲಕ್ಕಿಮ್ಯಾನ್, ಶಿವಾಜಿ ಸುರತ್ಕಲ್ 2 ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಚಾರ್ಲಿ ಚಿತ್ರದಿಂದ ಇವರಿಗೆ ದೊಡ್ಡ ಬ್ರೇಕ್​ ಸಿಕ್ಕಿತು. ಎರಡು ಸಾವಿರಕ್ಕೂ ಹೆಚ್ಚು ಜನರು ‘777 ಚಾರ್ಲಿ’ ಚಿತ್ರದ ನಾಯಕಿ ಪಾತ್ರಕ್ಕೆ ಆಡಿಷನ್ ಕೊಟ್ಟಿದ್ದರು. ಆದರೆ ಎಲ್ಲರನ್ನು ಮೀರಿ ಸಂಗೀತಾ ಗೆದ್ದಿದ್ದರು. ಒಳ್ಳೆ ಅವಕಾಶ ಪಡೆದರು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ರಿಲೀಸ್ ಆಗಿ ಸದ್ದು ಮಾಡಿದೆ ಚಿತ್ರ ಜೊತೆಗೆ ಹಲವು ಅವಾರ್ಡ್​ಗಳನ್ನು ಬಾಚಿಕೊಂಡಿದೆ.

Source link

Leave a Reply

Your email address will not be published. Required fields are marked *