Headlines

marriage to dead person : ಸಾವಿಗೀಡಾದ ಮಗನಿಗೆ ಪ್ರೇಯಸಿ ಜೊತೆ ಪ್ರತಿವರ್ಷವೂ ಮದುವೆ ಮಾಡ್ತಿದ್ದಾರೆ ಪೋಷಕರು | Parents Marry Off Their Late Son With Lover Who Died Of Love Failure Every Year

marriage to dead person : ಸಾವಿಗೀಡಾದ ಮಗನಿಗೆ ಪ್ರೇಯಸಿ ಜೊತೆ ಪ್ರತಿವರ್ಷವೂ ಮದುವೆ ಮಾಡ್ತಿದ್ದಾರೆ ಪೋಷಕರು | Parents Marry Off Their Late Son With Lover Who Died Of Love Failure Every Year



marriage to dead person : ಸಾವಿಗೀಡಾದ ಮಗನಿಗೆ ಪ್ರೇಯಸಿ ಜೊತೆ ಪ್ರತಿವರ್ಷವೂ ಮದುವೆ ಮಾಡ್ತಿದ್ದಾರೆ ಪೋಷಕರು | Parents Marry Off Their Late Son With Lover Who Died Of Love Failure Every Year

marriage to dead person: ತೆಲಂಗಾಣದ ಪೋಷಕರು ಪ್ರೇಮ ವೈಫಲ್ಯದಿಂದ ಮೃತಪಟ್ಟ ಮಗನ ನೆನಪಿಗಾಗಿ ದೇಗುಲ ನಿರ್ಮಿಸಿದ್ದಾರೆ. ಮಗನ ಕನಸಿನಂತೆ, ಕಳೆದ 23 ವರ್ಷಗಳಿಂದ ಆತನ ಹಾಗೂ ಆತನ ಪ್ರೇಯಸಿಯ ಪ್ರತಿಮೆಗೆ ಪ್ರತಿವರ್ಷ ಮದುವೆ ಮಾಡಿಸುತ್ತಿದ್ದಾರೆ.

ಮೃತ ಮಗನಿಗೆ ಪ್ರೇಯಸಿ ಜೊತೆ ಮದ್ವೆ ಮಾಡಿಸ್ತಿದ್ದಾರೆ ಪೋಷಕರು

ಹೈದರಾಬಾದ್: 23 ವರ್ಷಗಳ ಹಿಂದೆ ಪ್ರೇಮ ವೈಪಲ್ಯದಿಂದ ಸಾವಿಗೆ ಶರಣಾದ ತಮ್ಮ ಪುತ್ರನ ಸ್ಮರಣಾರ್ಥ ದೇಗುಲ ಕಟ್ಟಿರುವ ಪೋಷಕರು ಆತನಿಗೆ ಕಳೆದ 23 ವರ್ಷಗಳಿಂದ ಪ್ರತಿವರ್ಷವೂ ಮದುವೆ ಮಾಡುತ್ತಿದ್ದಾರೆ. ಇಂತಹದೊಂದು ವಿಶೇಷ ಘಟನೆ ತೆಲಂಗಾಣದ ಮೆಹಬೂಬಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ಲಾಲು ಹಾಗೂ ಸುಕ್ಕಮ್ಮ ಎಂಬ ದಂಪತಿ ತಮ್ಮ ಮಗ ರಾಮಕೋಟಿ ಎಂಬುವವರ ನೆನಪಿನಲ್ಲಿ ಮನೆಯೊಳಗೆ ಸಣ್ಣದೊಂದು ಗುಡಿಯನ್ನು ನಿರ್ಮಿಸಿದ್ದು, ಪ್ರತಿವರ್ಷವೂ ಆತನ ಹಾಗೂ ಆತನ ಪ್ರೇಯಸಿಯ ಪ್ರತಿಮೆಯನ್ನು ಇಟ್ಟು ಮದುವೆಯ ಜೊತೆಗೆ ಪೂಜೆ ಪುನಸ್ಕಾರಗಳನ್ನು ಮಾಡುತ್ತಿದ್ದಾರೆ. 

ಮಗನ ಸಾವಿನ ದುಃಖದ ಕ್ಷಣದಿಂದ ಆರಂಭವಾದ ಈ ಕಾರ್ಯಕ್ರಮವು ವರ್ಷಗಳು ಕಳೆದಂತೆ ಇಡೀ ಊರೇ ಸೇರಿ ಭಾಗವಹಿಸುವ ಸಂಭ್ರಮದ ಕ್ಷಣವಾಗಿ ಬದಲಾಗಿದೆ. ಇಲ್ಲಿ ಪೋಷಕರು ತಮ್ಮ ಅಗಲಿದ ಮಗನ ನೆನಪಿನಲ್ಲಿ ಆತನ ಮದುವೆಯನ್ನು ಪ್ರತಿವರ್ಷವೂ ಮಾಡುತ್ತಿದ್ದು ಪ್ರತಿಯೊಂದು ಸಂಪ್ರದಾಯವನ್ನು ಭಕ್ತಿಶ್ರದ್ಧೆಯಿಂದ ಮಾಡುತ್ತಿದ್ದಾರೆ.

ಪ್ರೇಮ ವೈಫಲ್ಯದಿಂದ ಸಾವಿಗೆ ಶರಣಾಗಿದ್ದ ರಾಮ್ ಕೋಟಿ

ರಾಮ್‌ ಕೋಟಿ ಪ್ರೀತಿಸಿದ ಹುಡುಗಿಯ ಮನೆಯವರು ಅವರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ ನಂತರ ಅವರು 2003ರಲ್ಲಿ ಸಾವಿಗೆ ಶರಣಾಗಿದ್ದರು. ಆತ ಸಾವಿಗೆ ಶರಣಾಗಿ ಒಂದು ದಿನದ ನಂತರ ಆತ ಪ್ರೀತಿಸಿದ ಹುಡುಗಿಯೂ ಸಾವಿಗೆ ಶರಣಾಗಿದ್ದಳು. ಇದು ಎರಡು ಕುಟುಂಬಕ್ಕೆ ಆಘಾತಕ್ಕೀಡು ಮಾಡಿತ್ತು. ಇತ್ತ ಮಗನ ಸಾವಿನಿಂದ ರಾಮ್‌ಕೋಟಿ ಅವರ ಪೋಷಕರು ತೀವ್ರ ಆಘಾತಕ್ಕೀಡಾಗಿದ್ದರು. ಆದರೆ ಮಗನ ನೆನಪು ಮಾಸುವುದಕ್ಕೆ ಬಿಡುವ ಬದಲು ಅವನನ್ನು ತಮ್ಮ ಹತ್ತಿರವೇ ಇಟ್ಟುಕೊಳ್ಳುವ ಮಾರ್ಗವನ್ನು ಅವರು ಆರಿಸಿಕೊಂಡರು.

ಇದನ್ನೂ ಓದಿ: ತಮಿಳುನಾಡು ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಟಿವಿಕೆ: 2 ಕ್ಷೇತ್ರದಲ್ಲಿ ದಳಪತಿ ವಿಜಯ್ ಸ್ಪರ್ಧೆ

ಸುಕ್ಕಮ್ಮನವರ ಪ್ರಕಾರ, ಮಗನ ಮರಣದ ನಂತರ ಮಗ ಕನಸಿನಲ್ಲಿ ಕಾಣಿಸಿಕೊಂಡು ತನ್ನ ಹೆತ್ತವರ ಬಳಿ ದೇವಸ್ಥಾನ ಕಟ್ಟಿ ತನ್ನ ಮದುವೆ ಮಾಡುವಂತೆ ಕೇಳಿಕೊಂಡವಂತೆ. ಇದನ್ನು ನಂಬಿದ ದಂಪತಿಗಳು ತಮ್ಮ ಮನೆಯೊಳಗೆ ಒಂದು ಸಣ್ಣ ದೇವಾಲಯವನ್ನು ನಿರ್ಮಿಸಿತಮ್ಮ ಮಗ ಮತ್ತು ಅವನು ಪ್ರೀತಿಸಿದ ಹುಡುಗಿಯ ಪ್ರತಿಮೆಯನ್ನು ಸ್ಥಾಪಿಸಿ, ಅವುಗಳನ್ನು ಒಟ್ಟಿಗೆ ಇರಿಸಿ ಪ್ರತಿವರ್ಷವೂ ಮದುವೆ ಮಾಡಿಸುತ್ತಾರೆ. ಅಂದಿನಿಂದ, ದಂಪತಿಗಳು ಪ್ರತಿ ವರ್ಷ ರಾಮ ನವಮಿಯಂದು ಇಬ್ಬರಿಗೂ ಸಾಂಪ್ರದಾಯಿಕ ವಿವಾಹ ಸಮಾರಂಭವನ್ನು ನಡೆಸುತ್ತಿದ್ದಾರೆ. ಈ ಆಚರಣೆಯನ್ನು ನಿಜವಾದ ವಿವಾಹದಂತೆಯೇ ವಿವಿಧ ಪದ್ಧತಿಗಳೊಂದಿಗೆ ನಡೆಸಲಾಗುತ್ತದೆ.

ಇದನ್ನೂ ಓದಿ: ಐಪಿಎಲ್ ಲೈವ್ ಕಾಮೆಂಟರಿಯಲ್ಲೇ ಕಿತ್ತಾಡಿಕೊಂಡ ಸೆಹ್ವಾಗ್, ಆರ್ ಅಶ್ವಿನ್: ಇಬ್ಬರ ವಿರುದ್ಧ ಬಿಸಿಸಿಐ ಕ್ರಮ ಸಾಧ್ಯತೆ

ತೆಲಂಗಾಣದಲ್ಲಿ, ಶ್ರೀ ರಾಮ ನವಮಿಯು ಶ್ರೀ ರಾಮ ಮತ್ತು ಸೀತೆಯರ ವಿವಾಹಕ್ಕೆ ಪ್ರಸಿದ್ಧಿ ಪಡೆದಿದ್ದು,ದೇವಾಲಯಗಳಲ್ಲಿ ಬಹಳ ಶ್ರದ್ಧೆಯಿಂದ ಆಚರಿಸಲಾಗುತ್ತದೆ. ಈ ಸಂಪ್ರದಾಯದಿಂದ ಪ್ರೇರಿತರಾಗಿ, ಪೋಷಕರು ತಮ್ಮ ಮಗನ ಹಾಗೂ ಆತನ ಪ್ರೇಯಸಿಯ ಪ್ರತಿಮೆಗಳನ್ನು ಇರಿಸಿ ಪೂಜೆ ಮಾಡುತ್ತಾರೆ.



Source link

Leave a Reply

Your email address will not be published. Required fields are marked *