
ನಟರಿಗಾಗಿ ಪ್ರಾಣ ಕೊಡಲು ತಯಾರು ಎನ್ನುವ ಅಭಿಮಾನಿಗಳು ಇರುತ್ತಾರೆ. ಇಲ್ಲೊಬ್ಬ ಯುವಕ, ನಟನಿಂದಲೇ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದರೆ ಅದೃಷ್ಟವಶಾತ್ ಬದುಕುಳಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ನಡೆದಿರುವುದು ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆ, ಪೂತಲಪಟ್ಟು ಎಂಬಲ್ಲಿ. ಪೂತಲಪಟ್ಟು ಬಳಿಯ ಶೇಷಾಪುರಂನ ಲೋಕೇಶ್ ಎಂಬ ಯುವಕ ಆತ್ಮಹತ್ಯೆಗೆ ಯತ್ನಿದ್ದು ‘ಜೆಟ್ಟಿ’ ಸಿನಿಮಾ ಖ್ಯಾತಿಯ ನಟ ಮಾನ್ಯಂ ಮುರಳಿ ಕೃಷ್ಣ ತನ್ನ ಈ ಸ್ಥಿತಿಗೆ ಕಾರಣ ಎಂದು ಲೋಕೇಶ್ ಬರೆದಿರುವ ಡೆತ್ ನೋಟ್ ಈಗ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ.
ಚಿತ್ತೂರು ಜಿಲ್ಲೆಯ ಶೇಷಾಪುರಂ ಗ್ರಾಮದ ಮಾನ್ಯ ಲೋಕ ಎಂಬ ಯುವಕ, ನಟಂ ಮುರಳಿ ಕೃಷ್ಣ ತನಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ರೈಲ್ವೇ ಕಾಂಟ್ರಾಕ್ಟ್ ಕೊಡಿಸುವುದಾಗಿ ನಂಬಿಸಿ ತನ್ನ ಆದಾಯ ಮತ್ತು ಸ್ನೇಹಿತರ ಮೂಲಕ ಸುಮಾರು 3.15 ಕೋಟಿ ರೂಪಾಯಿಗಳನ್ನು ನಟನಿಗೆ ಕೊಡಿಸಿದ್ದಾನೆ ಲೋಕೇಶ್. ಈಗ ಆ ಹಣವನ್ನು ವಾಪಸ್ ಕೇಳಿದರೆ ನಟ ಕಿರುಕುಳ ನೀಡುತ್ತಿದ್ದಾರೆ ಎಂದು ಮನನೊಂದು ಲೋಕೇಶ್ ನಿದ್ರೆ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಇದನ್ನೂ ಓದಿ:ಟಾಲಿವುಡ್ ಗೂ ಮಾದರಿ ಆಯ್ತು ವಿಜಯಲಕ್ಷ್ಮೀ, ರಮ್ಯಾ ನಿರ್ಧಾರ
ಅಪ್ರಜ್ಞಾವಸ್ಥೆಯಲ್ಲಿದ್ದ ಲೋಕೇಶ್ ಅವರನ್ನು ಚಿತ್ತೂರಿನ ಬಂಗಾರುಪಾಳ್ಯಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಲೋಕೇಶ್ ಸಹ ಚಿಕಿತ್ಸೆಗೆ ಸ್ಪಂದಿಸಿದ್ದಾರೆ, ಪ್ರಾಣಪಾಯ ಇಲ್ಲವೆಂದು ಹೇಳಲಾಗುತ್ತಿದೆ.
ಲೋಕೇಶ್ ಬರೆದಿರುವ ಆತ್ಮಹತ್ಯೆ ಪತ್ರ ಇದೀಗ ವೈರಲ್ ಆಗುತ್ತಿದೆ, ‘ನನಗೆ ಇಂತಹ ಪರಿಸ್ಥಿತಿ ಬರುತ್ತದೆ ಎಂದು ಕನಸು ಕಾಣಲಿಲ್ಲ. ನನ್ನ ತಂದೆ ಮತ್ತು ಹೆಂಡತಿ ಮಕ್ಕಳನ್ನು ಬೀದಿಗೆ ತಂದಿದ್ದೇನೆ. ಸಾಲಗಾರನಾಗಿ ತಲೆ ಎತ್ತಿ ಬದುಕಲು ಸಾಧ್ಯವಾಗುತ್ತಿಲ್ಲ. ನನ್ನ ಸಾವಿಗೆ ನಟ ಮಾನ್ಯಂ ಮುರಳಿ ಕೃಷ್ಣನೇ ಕಾರಣ. ರೈಲ್ವೇ ಕಾಂಟ್ರಾಕ್ಟ್ ಕೊಡಿಸುತ್ತೇನೆ ಎಂದು ಹೇಳಿ 3.15 ಕೋಟಿ ರೂಪಾಯಿ ಹಣ ಪಡೆದು ಮೋಸ ಮಾಡಿದ್ದಾನೆ. ಇದರಲ್ಲಿ ನನ್ನ ಅಣ್ಣ-ತಮ್ಮಂದಿರ ಮತ್ತು ಹಣವೂ ಇದೆ. ಮುರಳಿ ಕೃಷ್ಣ ಮತ್ತು ಆತನ ತಮ್ಮ ಸೇರಿ ನಮ್ಮನ್ನು ವಂಚಿಸಿದ್ದಾರೆ. ಹಣ ಕೇಳಿದರೆ ಕೊಡುತ್ತಿಲ್ಲ. ಅಸಹಾಯಕನಾಗಿ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ, ದಯವಿಟ್ಟು ನನ್ನನ್ನು ಕ್ಷಮಿಸಿ’ ಎಂದು ಬರೆದಿದ್ದಾರೆ.
ಸದ್ಯ ಈ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ನಟ ಮಾನ್ಯ ಮುರಳಿ ಕೃಷ್ಣಗೂ ನೋಟಿಸ್ ನೀಡುವ ಸಾಧ್ಯತೆ ಇದೆ. ಮಾನ್ಯ ಮುರಳಿ ಕೃಷ್ಣ ‘ಜೆಟ್ಟಿ’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದು, ಹಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕ, ಎಡಿಟರ್, ಸಹಾಯಕ ಎಡಿಟರ್ ಆಗಿ ಕೆಲಸ ಮಾಡಿದ್ದಾರೆ. ಇದೀಗ ವಂಚನೆ ಪ್ರಕರಣದಲ್ಲಿ ಆರೋಪಿ ಆಗಿದ್ದಾನೆ.
ಸಹಾಯವಾಣಿ
ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ. ನಿಮಗೆ ಅಥವಾ ನಿಮ್ಮ ಪರಿಚಯದವರಿಗೆ ಮಾನಸಿಕ ಒತ್ತಡ, ಖಿನ್ನತೆ ಅಥವಾ ಆತ್ಮಹತ್ಯೆಯ ಆಲೋಚನೆಗಳಿದ್ದರೆ, ದಯವಿಟ್ಟು ಈ ಕೆಳಗಿನ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ. ಪರಿಣಿತರು ನಿಮಗೆ ಉಚಿತವಾಗಿ ಮತ್ತು ಗೌಪ್ಯವಾಗಿ ಸಮಾಲೋಚನೆ ಇದ್ದಾರೆ.
Tele MANAS (ಸರ್ಕಾರಿ ಸಹಾಯವಾಣಿ): 14416 ಅಥವಾ 1800-891-4416 (24×7 ಲಭ್ಯ)
ಕಿರಣ್ (ಕೇಂದ್ರ ಸರ್ಕಾರ): 1800-599-0019
ಆಸ್ರಾ (AASRA): 9820466728
ಸಹಾಯ (SAHAI): 080-25497777
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ