Headlines

Kara Movie: ಧನುಷ್‌ಗೆ ನಾಯಕಿಯಾದ 'ಪ್ರೇಮಲು' ಬೆಡಗಿ! ಟೀಸರ್‌ನಲ್ಲಿ ಸೂರಜ್, ಜಯರಾಂ ಸರ್‌ಪ್ರೈಸ್

Kara Movie: ಧನುಷ್‌ಗೆ ನಾಯಕಿಯಾದ 'ಪ್ರೇಮಲು' ಬೆಡಗಿ! ಟೀಸರ್‌ನಲ್ಲಿ ಸೂರಜ್, ಜಯರಾಂ ಸರ್‌ಪ್ರೈಸ್

Kara Movie: ಧನುಷ್‌ಗೆ ನಾಯಕಿಯಾದ 'ಪ್ರೇಮಲು' ಬೆಡಗಿ! ಟೀಸರ್‌ನಲ್ಲಿ ಸೂರಜ್, ಜಯರಾಂ ಸರ್‌ಪ್ರೈಸ್

ನಟ ಧನುಷ್ ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾ ‘ಕರ’. ‘ಪೋರ್ ತೊಳಿಲ್’ ಚಿತ್ರದ ನಂತರ ವಿಘ್ನೇಶ್ ರಾಜ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಪೊಂಗಲ್ ಹಬ್ಬದಂದು ಚಿತ್ರತಂಡ ಫಸ್ಟ್ ಲುಕ್ ರಿಲೀಸ್ ಮಾಡಿತ್ತು, ಅದು ಭಾರಿ ಗಮನ ಸೆಳೆದಿತ್ತು. ಇದೀಗ ಬಂದಿರುವ ಹೊಸ ಸುದ್ದಿ ಪ್ರಕಾರ, ‘ಕರ’ ಸಿನಿಮಾದ ಥಿಯೇಟರ್ ಬಿಡುಗಡೆಯ ನಂತರದ ಒಟಿಟಿ ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಪಡೆದುಕೊಂಡಿದೆ.

ಅಂತೂ ಇಂತೂ ‘ಕರ’ ಚಿತ್ರದ ರಿಲೀಸ್ ಡೇಟ್ ಕೂಡ ಹೊರಬಿದ್ದಿದೆ. ಚಿತ್ರತಂಡವು 2026ರ ಏಪ್ರಿಲ್ 30ರಂದು ಸಿನಿಮಾ ಥಿಯೇಟರ್‌ಗೆ ಬರಲಿದೆ ಎಂದು ಘೋಷಿಸಿದೆ. ಇತ್ತೀಚೆಗೆ ಬಿಡುಗಡೆಯಾದ ಪಾತ್ರವರ್ಗ ಪರಿಚಯದ ವಿಡಿಯೋದಲ್ಲಿ ಈ ದಿನಾಂಕವನ್ನು ಬಹಿರಂಗಪಡಿಸಲಾಗಿದೆ. ಈ ವಿಡಿಯೋದಲ್ಲಿ ಮಲಯಾಳಂ ನಟ ಸೂರಜ್ ವೆಂಜರಮೂಡು ಅವರ ಪಾತ್ರದ ಝಲಕ್ ಇದ್ದು, ಅವರದ್ದು ಒಂದು ಅಚ್ಚರಿಯ ಪ್ರದರ್ಶನ ಇರಲಿದೆ ಎನ್ನುವ ಸುಳಿವು ಸಿಕ್ಕಿದೆ. ಜೊತೆಗೆ, ನಟ ಜಯರಾಂ ಕೂಡ ‘ಕರ’ದಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಧನುಷ್‌ಗೆ ನಾಯಕಿಯಾಗಿ ಮಮಿತಾ ಬೈಜು

ಈ ಚಿತ್ರದಲ್ಲಿ ಮಲಯಾಳಂ ನಟಿ ಮಮಿತಾ ಬೈಜು ಅವರು ಧನುಷ್‌ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಇತ್ತೀಚೆಗೆ ‘ಪ್ರೇಮಲು’ ಚಿತ್ರದ ಮೂಲಕ ಮಮಿತಾ ಭಾರಿ ಜನಪ್ರಿಯತೆ ಗಳಿಸಿದ್ದಾರೆ. ಅಂದಹಾಗೆ, ಮಮಿತಾ ಅವರು ವಿಜಯ್ ನಟನೆಯ ‘ಜನ ನಾಯಗನ್’ ಚಿತ್ರದಲ್ಲಿ ಅವರ ಮಗಳ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಲ್ಲದೆ, ‘ಸೂರ್ಯ 46’ ಚಿತ್ರದಲ್ಲಿ ಸೂರ್ಯಗೆ ನಾಯಕಿಯಾಗಿಯೂ ಮತ್ತು ಪ್ರದೀಪ್ ರಂಗನಾಥನ್ ಅವರ ‘ಡ್ಯೂಡ್’ ಚಿತ್ರದಲ್ಲೂ ನಾಯಕಿಯಾಗಿ ನಟಿಸಿದ್ದಾರೆ. ವೇಲ್ಸ್ ಫಿಲ್ಮ್ ಇಂಟರ್‌ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ಡಾ. ಐಶಾರಿ ಕೆ. ಗಣೇಶ್ ಅವರು ‘ಕರ’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಜಿ.ವಿ. ಪ್ರಕಾಶ್ ಕುಮಾರ್ ಸಂಗೀತ ಸಂಯೋಜನೆ ಮಾಡುತ್ತಿದ್ದು, ತೇನಿ ಈಶ್ವರ್ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ. ಧನುಷ್ ಅವರ ನಟನೆ, ರಚನೆ ಹಾಗೂ ನಿರ್ದೇಶನದಲ್ಲಿ ತೆರೆಕಂಡ ಕೊನೆಯ ತಮಿಳು ಚಿತ್ರ ‘ಇಡ್ಲಿ ಕಡೈ’. ಈ ಚಿತ್ರದಲ್ಲಿ ನಿತ್ಯಾ ಮೆನನ್ ನಾಯಕಿಯಾಗಿದ್ದರು. ‘ತಿರುಚಿತ್ರಂಬಲಂ’ ಸೂಪರ್ ಹಿಟ್ ಆದ ನಂತರ ಧನುಷ್-ನಿತ್ಯಾ ಮೆನನ್ ಜೋಡಿ ಮತ್ತೆ ಒಂದಾದ ಸಿನಿಮಾ ಇದಾಗಿತ್ತು. ಶಾಲಿನಿ ಪಾಂಡೆ ಕೂಡ ಇದರಲ್ಲಿ ಒಂದು ಮುಖ್ಯ ಪಾತ್ರ ಮಾಡಿದ್ದರು. ವಂಡರ್‌ಬಾರ್ ಫಿಲ್ಮ್ಸ್ ಮತ್ತು ಡಾನ್ ಪಿಕ್ಚರ್ಸ್ ಬ್ಯಾನರ್‌ಗಳ ಅಡಿಯಲ್ಲಿ ಆಕಾಶ್ ಭಾಸ್ಕರನ್ ಮತ್ತು ಧನುಷ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದರು.

Source link

Leave a Reply

Your email address will not be published. Required fields are marked *