
ವಾಷಿಂಗ್ಟನ್, (ಮಾರ್ಚ್ 29): ಅಮೆರಿಕ (ಅಮೇರಿಕಾ) ಇಸ್ರೇಲ್ (ಇಸ್ರೇಲ್) ಮತ್ತು ಇರಾನ್ (ಇರಾನ್) ಸುಮಾರು 30 ನೇ ದಿನಕ್ಕೆ ಕಾಲಿಟ್ಟಿದ್ದು, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ದಿನದಿಂದ ದಿನಕ್ಕೆ ಹೆಚ್ಚು ಅಪಾಯಕಾರಿಯಾಗುತ್ತಿದೆ. ಉಲ್ಬಣಗೊಳ್ಳುತ್ತಿರುವ ಪರಿಸ್ಥಿತಿಯ ನಡುವೆ ಅಮೆರಿಕದ ಎಚ್ಚರಿಕೆಗೂ ಇರಾನ್ ಬಗ್ಗುತ್ತಿಲ್ಲ. ಬದಲಾಗಿ ಪ್ರತಿದಾಳಿಯಲ್ಲಿದೆ. ಇದರ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಮ್ಮ ವಾಯುಸೇನೆಯ ಶಕ್ತಿಶಾಲಿ ಬಾಂಬರ್ B-52 ವಿಮಾನ (US B-52 ಬಾಂಬರ್) ಮೂಲಕ ಇರಾನ್ ಮೇಲೆ ವಿಧ್ವಂಸಕ ದಾಳಿಗೆ ಸಜ್ಜಾಗಿದ್ದಾರೆ. ಹೌದು.. ಅಮೆರಿಕ ಇರಾನ್ ವಿರುದ್ಧದ ಯುದ್ದಕ್ಕಾಗಿ ಈಗ ಮತ್ತಷ್ಟು ಯುದ್ದ ವಿಮಾನಗಳ ಮಧ್ಯಪ್ರಾಚ್ಯಕ್ಕೆ ಕಳಿಸುತ್ತಿದೆ. ಅದರಲ್ಲೂ ಬಿ-52 ಬಾಂಬರ್ ಯುದ್ದ ವಿಮಾನಗಳು ಹೆಚ್ಚು ಕಳುತ್ತಿದ್ದವು, ಇಂದು (ಮಾರ್ಚ್ 29) ಮತ್ತೆ ಎರಡು ಬಿ-52 ಯುದ್ದ ವಿಮಾನಗಳು ಬ್ರಿಟನ್ನ ವಾಯು ನೆಲೆಗೆ ಆಗಮಿಸಿವೆ. ಇದರೊಂದಿಗೆ ಇರಾನ್ ವಿರುದ್ಧದ ಯುದ್ದಕ್ಕಾಗಿ ಅಮೆರಿಕ ಕಳಿಸಿರುವ ಬಿ-52 ಯುದ್ದ ವಿಮಾನಗಳ ಸಂಖ್ಯೆ ಈಗ 23ಕ್ಕೇರಿದೆ.
ಇನ್ನು ಟ್ರಂಪ್ ಬಳಸಲು ಮುಂದಾದ ಅಮೆರಿಕ ವಾಯುಸೇನೆಯ ಶಕ್ತಿಶಾಲಿ ಬಾಂಬರ್ B-52 ವಿಮಾನದ ಸಾಮರ್ಥ್ಯ ಎಷ್ಟು ಎನ್ನುವುದನ್ನು ನೋಡುವುದಾದರೆ, 1950ರಲ್ಲಿ ಅಮೆರಿಕದ ವಾಯುಸೇನೆಯ ಶಕ್ತಿ ಬಾಂಬರ್ B-52 ವಿಮಾನವನ್ನು ಪರಿಚಯಿಸಲಾಗಿದೆ. ಅಣ್ವಸ್ತ್ರ, ಭಾರಿ ತೂಕದ ಬಾಂಬ್‌ಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ. ಪರಮಾಣು ಕ್ರೂಸ್ ಮಿಸೈಲ್ ಹೊತ್ತೊಯ್ಯಲಿದೆ. ಹಾಗೆಯೇ ಈ B-52 ವಿಮಾನ 32,000 ಕೆಜಿಗೂ ಹೆಚ್ಚು ತೂಕದ ವಸ್ತುಗಳ ಜೊತೆಗೆ 14,000 ಕಿ.ಮೀಟರ್ ಗಿಂತ ಹೆಚ್ಚು ದೂರ ಹಾರಬಲ್ಲದು.