Headlines

ಮಗ ಸತ್ತಿದ್ದಾನೆ, ಸೊಸೆಯಿಂದ ಜೀವನಾಂಶ ಕೊಡಿಸಿ ಎಂದು ಕೋರ್ಟ್ ಮೆಟ್ಟಿಲೇರಿದ ವೃದ್ಧ ದಂಪತಿ; ನ್ಯಾಯಾಲಯ ಹೇಳಿದ್ದೇನು?

ಮಗ ಸತ್ತಿದ್ದಾನೆ, ಸೊಸೆಯಿಂದ ಜೀವನಾಂಶ ಕೊಡಿಸಿ ಎಂದು ಕೋರ್ಟ್ ಮೆಟ್ಟಿಲೇರಿದ ವೃದ್ಧ ದಂಪತಿ; ನ್ಯಾಯಾಲಯ ಹೇಳಿದ್ದೇನು?


ಮಗ ಸತ್ತಿದ್ದಾನೆ, ಸೊಸೆಯಿಂದ ಜೀವನಾಂಶ ಕೊಡಿಸಿ ಎಂದು ಕೋರ್ಟ್ ಮೆಟ್ಟಿಲೇರಿದ ವೃದ್ಧ ದಂಪತಿ; ನ್ಯಾಯಾಲಯ ಹೇಳಿದ್ದೇನು?

ಲಕ್ನೋ, ಮಾರ್ಚ್ 29: ತಮ್ಮ ಮಗ ಸತ್ತಿದ್ದಾನೆ. ಸೊಸೆಯಿಂದ ತಮಗೆ ಜೀವನಾಂಶ (ಮೈಂಟೆನೆನ್ಸ್) ಕೊಡಿಸಿ ಎಂದು ವೃದ್ಧ ದಂಪತಿಯೊಂದು ಕೋರ್ಟ್ ಮೆಟ್ಟಿಲೇರಿದ ಘಟನೆ ಬೆಳಕಿಗೆ ಬಂದಿದೆ. ಈ ವೃದ್ಧರ ಪರವಾಗಿ ತೀರ್ಪು ಕೊಡಲು ಕೋರ್ಟ್ ನಿರಾಕರಿಸಿತು. ಇದರೊಂದಿಗೆ ಎರಡು ನ್ಯಾಯಾಲಯಗಳಲ್ಲಿ ವೃದ್ಧರ ಪರವಾಗಿ ತೀರ್ಪು ಬರಲಿಲ್ಲ. ಫ್ಯಾಮಿಲಿ ಕೋರ್ಟ್ ನಲ್ಲಿ ತಮ್ಮ ಮನವಿ ತಿರಸ್ಕೃತಗೊಂಡ ಬಳಿಕ ಈ ವೃದ್ಧರು ಉತ್ತರಪ್ರದೇಶದ ಅಲಾಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲಿಯೂ ಅವರ ಪರವಾಗಿ ತೀರ್ಪು ಬರಲಿಲ್ಲ. ನೈತಿಕ ಬದ್ಧತೆಯನ್ನು ಕಾನೂನು ಬದ್ಧತೆ ಎಂದು ಪರಿಗಣಿಸಲು ಆಗುವುದಿಲ್ಲ. ಸೊಸೆಯಿಂದ ಜೀವನಾಂಶ ಕೊಡುವ ಅವಕಾಶ ಇಲ್ಲ ಎಂದು ಪೂರ್ಣ ಪೀಠ (ಅಲಹಾಬಾದ್ ಹೈಕೋರ್ಟ್) ತನ್ನ ತೀರ್ಪಿನಲ್ಲಿ ತಿಳಿಸಿತು.

ಉತ್ತರಪ್ರದೇಶ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಕಾನ್ಸ್ಟೆಬಲ್‌ಬೊಬ್ಬರು 2021 ರಲ್ಲಿ ಮೃತಪಡುತ್ತಾರೆ. 2016ರಲ್ಲಿ ಆತನ ವಿವಾಹಕ್ಕಾಗಿ. ಆತನ ಹೆಂಡತಿ ಕೂಡ ಯುಪಿ ಪೊಲೀಸ್ ಇಲಾಖೆಯಲ್ಲಿ ಕಾನ್ ಟೆಬಲ್ ಆಗಿರಬೇಕು. ತಮ್ಮ ಸೊಸೆಗೆ ಸಾಕಷ್ಟು ಸ್ವತಂತ್ರ ಆದಾಯವಿದೆ. ತಮ್ಮ ಮಗನ ನಿಧನದ ನಂತರ ಆಕೆಗೆ ಸರ್ವಿಸ್ ಬೆನಿಫಿಟ್ಸ್ ಕೂಡ ಸಿಕ್ಕಿದೆ. ಹೀಗಾಗಿ, ತಮಗೆ ಆಕೆಯಿಂದ ಜೀವನಾಂಶ ಕೊಡಿಸುವಂತೆ ಕೌಟುಂಬಿಕ ನ್ಯಾಯಾಲಯಕ್ಕೆ ಮನವಿ ಮಾಡಲಾಗಿತ್ತು. ಆದರೆ, ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಇವರ ಅರ್ಜಿಯನ್ನು ಈ ಕೆಳಗಿನ ಕೋರ್ಟ್ ತಿರಸ್ಕರಿಸಿತ್ತು.

ಇದನ್ನೂ ಓದಿ: ಚಾಕೊಲೇಟ್ ಕದ್ದಿದ್ದಾಳೆಂದು 12 ವರ್ಷದ ಮಗಳನ್ನು ದೊಣ್ಣೆಯಿಂದ ಹೊಡೆದು ಕೊಂದ ತಂದೆ

ಇದಾದ ಬಳಿಕ ಈ ವೃದ್ಧ ದಂಪತಿಯು ಅಲಹಾಬಾದ್‌ನಲ್ಲಿ ಮೇಲ್ಮನವಿ ಮಾಡಿತು. ಅರ್ಜಿದಾರರು ವೃದ್ಧರು ಮತ್ತು ಅನಕ್ಷರಸ್ಥರು. ಮಗನ ಮೇಲೆ ಅವಲಂಬಿತವಾಗಿತ್ತು. ಅವರ ನಿಧನದಿಂದ ಅವರ ಬದುಕು ನಿರ್ವಹಣೆ ಕಷ್ಟವಾಗಿದೆ. ಅಸಹಾಯಕ ಅತ್ತೆ ಮಾವನವರನ್ನು ಪಾಲನೆ ಮಾಡುವ ನೈತಿಕ ಹೊಣೆ ಸೊಸೆಗೆ ಇರುತ್ತದೆ. ಇದನ್ನು ಕಾನೂನುಬದ್ಧವಾಗಿ ಪರಿಗಣಿಸಬೇಕು ಎಂದು ವೃದ್ಧ ದಂಪತಿ ಪರ ವಕೀಲರು ನ್ಯಾಯಾಲಯದಲ್ಲಿ ವಾದಿಸಿದ್ದರು.

ಮಗನ ಸಾವಿನಿಂದ ಸೊಸೆಗೆ ಕೆಲಸ ಸಿಕ್ಕಿತು ಎಂದು ಹೇಳುವ ಯಾವ ದಾಖಲೆಯೂ ಇಲ್ಲ. ನೈತಿಕ ಬದ್ಧತೆಯನ್ನು ಕಾನೂನು ಬದ್ಧತೆ ಎಂದು ಪರಿಗಣಿಸುವುದಿಲ್ಲ ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯದ ಪೀಠದಿಂದ ತೀರ್ಪು ಬಂದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *