
ದಾವಣಗೆರೆ, (ಮಾರ್ಚ್ 29): ಕಾಂಗ್ರೆಸ್‌ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನಿಧನದಿಂದ ತೆರವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ (ದಾವಣಗೆರೆ ದಕ್ಷಿಣ ಉಪಚುನಾವಣೆ) ಕಂಡುಬಂದಿದ್ದು, ಇದೇ ಏಪ್ರಿಲ್ 9 ರಂದು ಮತದಾನ. ಹೀಗಾಗಿ ಕಾಂಗ್ರೆಸ್ ಬಿಜೆಪಿ ನಾಯಕರು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಅದರಲ್ಲೂ ಮನೆಯೊಂದು ಮೂರು ಬಾಗಿಲಾಗಿದ್ದ ಬಿಜೆಪಿಯಲ್ಲಿ ಒಗ್ಗಟ್ಟು ಪ್ರದರ್ಶನವಾಗಿದೆ. ಹೌದು…ಲೋಕಸಭೆ ಚುನಾವಣೆಯಿಂದಲೇ ಸೋಲಾಗಿದೆ ಎಂದು ಜಿಎಂ ಸಿದ್ದೇಶ್ವರ್ ಬಹಿರಂಗವಾಗಿಯೇ ಬಿಎಸ್ ಯಡಿಯೂರಪ್ಪ ವಿರುದ್ಧ ಆರೋಪಿಸಿದ್ದರು. ಬಿಎಸ್ವೈ ಬಣದ ವಿರುದ್ಧವೇ ಟೀಮ್ ಕಟ್ಟಿ ಬಹಿರಂಗ ವಾಗ್ದಾಳಿ ನಡೆಸುತ್ತಲೇ ಬಂದಿದ್ದರು. ಖುದ್ದು ಬಿಜೆಪಿ ಉಸ್ತುವಾರಿ ಮನವೊಲಿಕೆಗೂ ಸಿದ್ದೇಶ್ವರ್ ಕ್ಯಾರೇ ಎಂದಿರಲಿಲ್ಲ, ಆದರೆ, ಇದೀಗ ಏಕಾಏಕಿ ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಜತೆ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಜತೆ ವೇದಿಕೆ ಹಂಚಿಕೊಂಡು ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಒಂದೆಡೆ ಎಂಪಿ ರೇಣುಕಾಸ್ವಾಮಿ ಇನ್ನೊಂದೆಡೆ ಜಿಎಂ ಸಿದ್ದೇಶ್ವರ್ ಮಧ್ಯದಲ್ಲಿ ವಿಜಯೇಂದ್ರ ನಿಂತುಕೊಂಡು ಕೈ ಎತ್ತಿ ಒಗ್ಗಟ್ಟು ಪ್ರದರ್ಶನ ಮಾಡಿರುವುದು ವಿಶೇಷವಾಗಿದೆ.