9 ವರ್ಷ ಹಳೆಯ ‘ಬಾಹುಬಲಿ 2’ ದಾಖಲೆ ಮುರಿದ ‘ಧುರಂಧರ್ 2’

9 ವರ್ಷ ಹಳೆಯ ‘ಬಾಹುಬಲಿ 2’ ದಾಖಲೆ ಮುರಿದ ‘ಧುರಂಧರ್ 2’


‘ಧುರಂಧರ 2’ (ಧುರಂಧರ 2) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಕ್ಷರಶಃ ಅಬ್ಬರಿಸುತ್ತಿದೆ. ಬಿಡುಗಡೆ ಆದ ಎಲ್ಲ ಸೆಂಟರ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಹಿಂದಿ ಸಿನಿಮಾಗಳು ದಕ್ಷಿಣದಲ್ಲಿ ಓಡುವುದು ಕಡಿಮೆ, ಮುಖ್ಯವಾಗಿ ತಮಿಳುನಾಡು, ಆಂಧ್ರ, ಕೇರಳಗಳಲ್ಲಿ ಬಹಳ ಕಡಿಮೆ. ಆದರೆ ಅಲ್ಲಿಯೂ ಸಹ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ದೇಶದಲ್ಲಿ ಮಾತ್ರವೇ ಅಲ್ಲದೆ, ವಿದೇಶಗಳಲ್ಲಿಯೂ ದೊಡ್ಡ ಮೊತ್ತವನ್ನು ಪಡೆಯುತ್ತಿದೆ. ಹಳೆಯ ಬಾಕ್ಸ್ ಆಫೀಸ್ ದಾಖಲೆಗಳನ್ನು ಪುಡಿಗಟ್ಟುತ್ತಿದೆ ‘ಧುರಂಧರ 2’ ಸಿನಿಮಾ. ಇದೀಗ ಒಂಬತ್ತು ವರ್ಷ ಹಳೆಯ ‘ಬಾಹುಬಲಿ 2’ ದಾಖಲೆಯ ಸಿನಿಮಾ ಮುರಿದಿದ್ದು, ‘ಬಾಹುಬಲಿ 2’ ನಿರ್ಮಾಪಕ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಎಲ್ಲರಿಗೂ ಗೊತ್ತಿರುವಂತೆ ‘ಬಾಹುಬಲಿ 2’ ಸಿನಿಮಾ ಭಾರತದಲ್ಲೇ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳಲ್ಲಿ ಹಲವು ವರ್ಷಗಳಿಂದ ಎರಡನೇ ಸ್ಥಾನದಲ್ಲಿದೆ. ಇನ್ನೂ ಈ ದಾಖಲೆಯನ್ನು ‘ಧುರಂಧರ 2’ ಸಿನಿಮಾಕ್ಕೆ ಮುರಿಯಲು ಆಗಿಲ್ಲ. ಆದರೆ ಉತ್ತರ ಅಮೆರಿಕದ ಬಾಕ್ಸ್ ಆಫೀಸ್‌ನಲ್ಲಿ ಕಳೆದ 9 ವರ್ಷಗಳಿಂದ ಅಚ್ಚಳಿಯದ ದಾಖಲೆ ಬರೆದಿದ್ದ ಪ್ರಭಾಸ್ ಅಭಿನಯದ ‘ಬಾಹುಬಲಿ 2’ ಚಿತ್ರದ ದಾಖಲೆಯನ್ನು ರಣವೀರ್ ಸಿಂಗ್ ಅಭಿನಯದ ‘ಧುರಂಧರ 2: ದ ರಿವೆಂಜ್’ ಮುರಿದಿದೆ.

ಎಸ್ಎಸ್ ರಾಜಮೌಳಿ ನಿರ್ದೇಶನದ ‘ಬಾಹುಬಲಿ 2’ ಉತ್ತರ ಅಮೇರಿಕಾದಲ್ಲಿ 20.19 ಮಿಲಿಯನ್ ಡಾಲರ್ (192 ಕೋಟಿ ರೂಪಾಯಿಗಳು) ಗಳಿಸಿ ದಾಖಲೆ ನಿರ್ಮಿಸಿತ್ತು. ಈಗ ಆದಿತ್ಯ ಧರ್ ನಿರ್ದೇಶನದ ‘ಧುರಂಧರ್ 2’ 19.33 ಮಿಲಿಯನ್ ಡಾಲರ್ (183 ಕೋಟಿ ರೂಪಾಯಿಗಳು) ಗಳಿಸಿದ್ದು, ಅತಿ ಶೀಘ್ರದಲ್ಲಿ ಅಂದರೆ ಸೋಮವಾರದ ವೇಳೆಗೆ ಬಾಹುಬಲಿಯ ದಾಖಲೆಯನ್ನು ಹಿಂದಿಕ್ಕುವ ನಿರೀಕ್ಷೆಯಿದೆ. ‘ಬಾಹುಬಲಿ 2’ ಸಿನಿಮಾದ ಈ ಕಲೆಕ್ಷನ್ ದಾಖಲೆಯನ್ನು ಕಳೆದ ಹಲವು ವರ್ಷಗಳಿಂದ ಯಾರೂ ಸಹ ಮುರಿದಿರಲಿಲ್ಲ.

ಇದನ್ನೂ ಓದಿ:’ಧುರಂಧರ 2′, ‘ಕೇರಳ ಸ್ಟೋರಿ’ ಸಿನಿಮಾಗಳ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದೇನು?

ಈ ಸಾಧನೆಯ ಬಗ್ಗೆ ಟ್ವೀಟ್ ಮಾಡಿರುವ ‘ಬಾಹುಬಲಿ’ ನಿರ್ಮಾಪಕ ಶೋಭು ಯಾರ್ಲಗಡ್ಡ ಅವರು, ‘ನಿನ್ನೆ ನಾನು ‘ಧುರಂಧರ 2′ ಸಿನಿಮಾ ನೋಡಿದೆ, ಸಿನಿಮಾ ನನಗೆ ತುಂಬಾ ಇಷ್ಟವಾಯಿತು. ಈ ಚಿತ್ರವು ಭಾರತ ಮತ್ತು ವಿಶ್ವದಾದ್ಯಂತ ಹೊಸ ಬಾಕ್ಸ್ ಆಫೀಸ್ ದಾಖಲೆಗಳನ್ನು ನಿರ್ಮಿಸುತ್ತಿದೆ ಸಂತೋಷ ತಂದಿದೆ. ಇಡೀ ತಂಡಕ್ಕೆ ಅಭಿನಂದನೆಗಳು’ ಎಂದು ಬರೆದಿದ್ದಾರೆ. ಕಳೆದ ವರ್ಷ ಬಿಡುಗಡೆ ಆಗಿದ್ದ ‘ಧುರಂಧರ’ ಸಿನಿಮಾ ಇದೇ ನಾರ್ತ್ ಅಮೇರಿಕಾದಲ್ಲಿ 19.70 ಮಿಲಿಯನ್ ಡಾಲರ್ ಅಂದರೆ ಸುಮಾರು 184 ಕೋಟಿ ರೂಪಾಯಿ ಗಳಿಸಿತ್ತು. ಆದರೆ ‘ಬಾಹುಬಲಿ 2’ ದಾಖಲೆಯನ್ನು ಮುರಿಯಲು ಆಗಲಿಲ್ಲ. ಆದರೆ ಈಗ ‘ಧುರಂಧರ 2’ ಸಿನಿಮಾ ಸುಲಭವಾಗಿ ಆ ದಾಖಲೆಯನ್ನು ಮುರಿದಿದೆ.

2017 ರಲ್ಲಿ ಬಿಡುಗಡೆ ಆಗಿದ್ದ ‘ಬಾಹುಬಲಿ 2’ ಸಿನಿಮಾ ವಿಶ್ವದಾದ್ಯಂತ ಒಟ್ಟು 1800 ಕೋಟಿಗೂ ಹೆಚ್ಚು ಹಣ ಗಳಿಸಿದೆ. ‘ಧುರಂಧರ 2’ ಸಿನಿಮಾ ಈ ದಾಖಲೆಯನ್ನು ಮುರಿಯಲು ಮುನ್ನುಗ್ಗುತ್ತಿದೆ. ಸಿನಿಮಾ ರಿಲೀಸ್ ಆಗಿ 11 ದಿನಗಳಾಗಿದ್ದರೆ ಈವರೆಗೆ 1200 ಕೋಟಿಗೂ ಹೆಚ್ಚು ಮೊತ್ತ ಬಂದಿದೆ. ಸಿನಿಮಾ 1800 ಕೋಟಿ ಗಳಿಸುವ ನಿರೀಕ್ಷೆ ಇದೆ. ‘ಧುರಂಧರ 2’ ಸಿನಿಮಾ 1800 ಕೋಟಿ ಗಳಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್ ಲೆಕ್ಕದಲ್ಲಿ ಎರಡನೇ ಸ್ಥಾನಕ್ಕೇರಲಿದೆ. ಮೊದಲ ಸ್ಥಾನಕ್ಕೇರಲು ‘ದಂಗಲ್’ ಸಿನಿಮಾವನ್ನು ಹಿಂದಿಕ್ಕಬೇಕಿದೆ. ಆ ಸಿನಿಮಾ ವಿಶ್ವದಾದ್ಯಂತ 2200 ಕೋಟಿ ರೂಪಾಯಿ ಗಳಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *