Horoscope Today 30 March: ಈ ರಾಶಿಯವರಿಗೆ ಏನಾದರೂ ಹೊಸತನ್ನು ಮಾಡುವ ಉತ್ಸಾಹ

Horoscope Today 30 March: ಈ ರಾಶಿಯವರಿಗೆ ಏನಾದರೂ ಹೊಸತನ್ನು ಮಾಡುವ ಉತ್ಸಾಹ


Horoscope Today 30 March: ಈ ರಾಶಿಯವರಿಗೆ ಏನಾದರೂ ಹೊಸತನ್ನು ಮಾಡುವ ಉತ್ಸಾಹ

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ವಾರ್ಷಿಕ : ವಸಂತ, ಚಂದ್ರಮಾಸ : ಚೈತ್ರ, ಸೌರ ಮಾಸ : ಮೀನ, ಮಹಾನಕ್ಷತ್ರ : ಉತ್ತರಾಭಾದ್ರ, ವಾರ : ಸೋಮ ಪಕ್ಷ : ಶುಕ್ಲ, ತಿಥಿ : ದ್ವಾದಶೀ, ನಿತ್ಯನಕ್ಷತ್ರ : ಆಶ್ಲೇಷ, ಯೋಗ : ಧೃತಿ, ಕರಣ – 2, ಸೂರ್ಯ – 2, ಸೂರ್ಯ – 0, 6. 35 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:54 – 09:26, ಯಮಗಂಡ ಕಾಲ 10:57 – 12:29, ಗುಳಿಕ ಕಾಲ 14:00 – 15:32

ಮೇಷ ರಾಶಿ: ಸ್ನೇಹಿತರ ಜೊತೆ ಹೆಚ್ಚಿನ ಸಮಯವನ್ನು ಕಳೆಯಬೇಕು ಎಂದಾದರೂ ಆಗದು. ಸಂಸಾರವನ್ನು ಮುನ್ನಡೆಸುವ ಚಾತುರ್ಯವನ್ನು ನೀವು ತಿಳಿದುಕೊಳ್ಳುವಿರಿ. ಸಂಗಾತಿಯ ಜೊತೆ ಮಾತು ಮೀರಬಹುದು. ನಿಮ್ಮ ಆದಾಯ ಮತ್ತು ಖರ್ಚಿಗೆ ನೀವು ಯೋಜನೆ ಸಿದ್ಧಪಡಿಸಿದರೆ ಅದು ನಿಮಗೆ ಒಳ್ಳೆಯದು. ನೀವು ಕೆಲವು ಹೊಸ ಒಪ್ಪಂದಗಳ ಲಾಭವನ್ನು ಪಡೆಯುತ್ತೀರಿ. ಅಚಾತುರ್ಯದಿಂದ ತಪ್ಪನ್ನು ಮಾಡಿ, ಪಶ್ಚಾತ್ತಾಪ ಪಡುವಿರಿ. ಆದಾಯಕ್ಕಿಂತ ಹೆಚ್ಚಾಗಿ ಆತಂಕ ಪಡುವಿರಿ. ಕುಟುಂಬದ ಸದಸ್ಯರ ಪ್ರೀತಿಯು ಸಿಕ್ಕಿ ಹರ್ಷಿಸುತ್ತದೆ.

ವೃಷಭ ರಾಶಿ: ನೀವು ಒಂದಕ್ಕಿಂತ ಹೆಚ್ಚು ಆದಾಯವನ್ನು ಸ್ವೀಕರಿಸುತ್ತೀರಿ. ವ್ಯಾಪಾರ ಯೋಜನೆಯನ್ನು ಪೂರ್ಣಗೊಳಿಸಲು ನೀವು ಹೆಚ್ಚು ಗಮನ ಹರಿಸಬೇಕು. ಆರ್ಥಿಕ ಯೋಜನೆಗಳಿಗೆ ಉತ್ತೇಜನ ದೊರೆಯಲಿದೆ. ಪರಸ್ಪರ ಸಹಕಾರದ ಭಾವನೆ ನಿಮ್ಮೊಳಗೆ ಉಳಿಯುತ್ತದೆ. ಸಾಲದ ಬಾಧೆಯು ನಿಮ್ಮ ಮನಸ್ಸನ್ನು ಚುಚ್ಚುವುದು. ನೆಮ್ಮದಿಗೆ ನಿಮ್ಮದೇ ಮಾರ್ಗವನ್ನು ಅನುಸರಿಸಿ. ಇತರರನ್ನು ಸರಿ ಮಾಡಲು ಹೋಗಿ ನೀವೇ ಹಾಳಾಗಬಹುದು.

ಮಿಥುನ ರಾಶಿ: ಜೀವನದ ಗುರಿ ಸಾಧನೆಯಾಗಲಿದೆ. ಹಳೆಯ ಕೆಲಸಗಳು ಅತಿ ವೇಗವಾಗಿ ನೆರವೇರಲಿವೆ. ಕುಟುಂಬದಲ್ಲಿ ಯಾವುದೇ ಸಮಸ್ಯೆಗಳು ಹೊರಗಿನವರಿಗೆ ಬೇಡ. ಯಾರಾದರೂ ಲಾಭ ಪಡೆಯಲು ಪ್ರಯತ್ನಿಸಬಹುದು. ನೀವು ಶುಭ ಸಮಾರಂಭಗಳಲ್ಲಿ ಭಾಗವಹಿಸಬಹುದು. ಸಂಗಾತಿಯ ಮಾತುಗಳು ನಿಮಗೆ ಕಿರಿಕಿರಿಯನ್ನು ಕೊಡುವುದು. ನಿಮಗೆ ಅಭದ್ರತೆಯು ಕಾಡಬಹುದು. ಸಂಗಾತಿಯು ನಿಮಗೆ ಬೇಕಾದ ಹಣವನ್ನು ನೀಡುತ್ತಾರೆ. ಸಂಶೋಧನೆಯು ನಿಮಗೆ ಖುಷಿ ಕೊಡುವುದು.

ಕರ್ಕಾಟಕ ರಾಶಿ: ನಿಮ್ಮ ವಿಶ್ವಾಸ ದುರುಪಯೋಗವಾಗದಂತೆ ನೋಡಿಕೊಳ್ಳಿ. ಮಾತಿನಿಂದ ಅನಾವಶ್ಯಕ ಮನಸ್ತಾಪವಾಗುವುದು. ಕೆಲವು ಪ್ರಮುಖ ಚರ್ಚೆಯಲ್ಲಿ ಭಾಗವಹಿಸಬಹುದು. ವ್ಯವಹಾರದಲ್ಲಿ ಕೆಲವು ಹಳೆಯ ಯೋಜನೆಗಳಿಂದ ನೀವು ಉತ್ತಮ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ನಿಮ್ಮ ಕುಟುಂಬದ ಸದಸ್ಯರಿಂದ ನೀವು ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ನಿಮ್ಮ ಅಭಿಪ್ರಾಯವೂ ಮುಖ್ಯವಾಗುತ್ತದೆ. ಇದ್ದ ನಿಮ್ಮ ಸ್ವಭಾವದಲ್ಲಿ ಕಾಣಿಸಿಕೊಳ್ಳುವುದು. ನಿಮ್ಮ ವಸ್ತುಗಳ ಉಪಯೋಗವನ್ನು ನೀವು ಬಹಳ ನಿರ್ಲಕ್ಷ್ಯದಿಂದ ಮಾಡುತ್ತೀರಿ.

ಸಿಂಹ ರಾಶಿ: ವ್ಯಾಪಾರ ವ್ಯವಹಾರಗಳು ಲಾಭವಾಗುತ್ತವೆ ಹಾಗೂ ಆದಾಯ ವೃದ್ಧಿಸಲಿವೆ. ನೀವು ಕೆಲಸಕ್ಕೆ ಯೋಗ್ಯವಾದ ಗೌರವವನ್ನೂ ಪಡೆಯಬಹುದು. ಸಾಮಾಜಿಕ ಸಮಸ್ಯೆಗಳು ಹೆಚ್ಚಾಗುವುದು. ನಿಮ್ಮ ವಿರೋಧಿಗಳು ನಿಮಗೆ ತೊಂದರೆ ನೀಡಲು ಪ್ರಯತ್ನಿಸುತ್ತಾರೆ. ನಿಮ್ಮ ಬುದ್ಧಿವಂತಿಕೆಯಿಂದ ಸುಲಭವಾಗಿ ಸೋಲಿಸಲು ಸಾಧ್ಯ. ಅಪರೂಪದ ವ್ಯಕ್ತಿಗಳ ಭೇಟಿಯಾಗಲಿದೆ. ನಿಮ್ಮ ಸರಳತೆಯು ನಿಮಗೆ ಧನಾತ್ಮಕ ಅಂಶಗಳಿಗೆ ಕಾರಣವಾಗುವುದು. ಯಾರ ಮೇಲಾದರೂ ಮುನಿಸು ತಾತ್ಕಾಲಿಕವಾಗಿ ಇರುವುದು.

ಕನ್ಯಾ ರಾಶಿ: ನೀವು ಚಿಂತನಶೀಲವಾಗಿ ಕೆಲಸ ಮಾಡಿದರೆ, ಅದು ನಿಮಗೆ ಉತ್ತಮವಾಗಿದೆ. ನೀವು ಕೆಲವು ಹೊಸ ಕೆಲಸವನ್ನು ಪ್ರಾರಂಭಿಸಲು ಯೋಚಿಸಿದ್ದರೆ, ನಿಮ್ಮ ಆಸೆಯೂ ಇರಬಹುದು. ನಿಮ್ಮ ಮಗುವಿಗೆ ನೀವು ಹೊಸ ವಾಹನವನ್ನು ಮನೆಗೆ ತರಬಹುದು. ನೀವು ಸ್ನೇಹಿತನ ಜೊತೆ ವಿವಾದವನ್ನು ಕೋರಿದರು, ಅವರು ನಿಮ್ಮನ್ನು ಸಮಾಧಾನಪಡಿಸಲು ಬರಬಹುದು. ನಿಮ್ಮ ಆಲೋಚನೆಯನ್ನು ಕೆಲವಷ್ಟಕ್ಕೆ ಸೀಮಿತಗೊಳಿಸಿಕೊಳ್ಳಿ. ಉತ್ತಮ ವಸ್ತುಗಳು ಸಿಕ್ಕರೂ ಅದನ್ನು ಉಳಿಸಿಕೊಳ್ಳಲು ಕಷ್ಟಪಡುವಿರಿ.

ತುಲಾ ರಾಶಿ; ಯಾವುದೇ ವ್ಯತಿರಿಕ್ತ ಸನ್ನಿವೇಶಗಳನ್ನು ನಿಭಾಯಿಸಲು ಪ್ರಯತ್ನಿಸುತ್ತದೆ. ಮನೆಯ ಅಲಂಕಾರದ ಬಗ್ಗೆಯೂ ನೀವು ಸಂಪೂರ್ಣ ಗಮನ ಹರಿಸುವಿರಿ. ಕುಟುಂಬದ ಸದಸ್ಯರಿಂದ ನೀವು ಆಶ್ಚರ್ಯಕರ ಉಡುಗೊರೆಗಳನ್ನು ಪಡೆಯಬಹುದು. ಹೆತ್ತವರ ಆಶೀರ್ವಾದವು ನಿಮಗೆ ಉತ್ಸಾಹವನ್ನು ಕೊಡಬಹುದು. ನಿಮ್ಮ ನಿರ್ಧಾರವನ್ನು ಮತ್ತೊಬ್ಬರಿಗೆ ಹೇರುವುದು ಬೇಡ. ಅನುಭವಿಗಳ ಮಾರ್ಗದರ್ಶನದಲ್ಲಿ ಮುನ್ನಡೆಯುವಿರಿ. ಆದಷ್ಟು ಸಮಾಧಾನದಿಂದ ಶತ್ರುಗಳನ್ನು ಗೆಲ್ಲಲು ಪ್ರಯತ್ನಿಸಿ.

ವೃಶ್ಚಿಕ ರಾಶಿ: ನೀವು ಕುಟುಂಬದ ಹೊರಗೆ ಯೋಜಿಸಬಹುದು. ಆದರೆ ಕುಟುಂಬದ ಸಮಸ್ಯೆಗಳನ್ನು ಪರಿಹರಿಸಲೂ ನೀವು ಪ್ರಯತ್ನಿಸಬೇಕು. ಇಲ್ಲದಿದ್ದರೆ ಅದು ನಿಮ್ಮ ಸಂಬಂಧಗಳಲ್ಲಿ ಬಿರುಕುಗಳನ್ನು ಉಂಟುಮಾಡಬಹುದು. ಯಾವುದೇ ಕೆಲಸಕ್ಕೆ ಬೇರೆಯವರ ಮೇಲೆ ಅವಲಂಬಿತರಾಗಬೇಡಿ. ನಿಮ್ಮ ಉದ್ಯಮದ ಅಭಿವೃದ್ಧಿಗೆ ತುರ್ತು ಸಭೆಯನ್ನು ಮಾಡಬೇಕಾದೀತು. ಹೊಸ ವಾಹನ ಖರೀದಿಯ ಪ್ರಸ್ತಾಪವನ್ನು ಸದ್ಯ ತಳ್ಳಿಹಾಕುವಿರಿ. ಆರ್ಥಿಕ ಬಲವನ್ನು ನೋಡಿ ಖರ್ಚಿನ ನಿರ್ಧಾರವನ್ನು ಮಾಡಿ.

ಧನು ರಾಶಿ: ನಿಮ್ಮ ಪ್ರೀತಿಪಾತ್ರರಿಗೆ ನಿಮ್ಮ ಮೇಲೆ ಸಂಪೂರ್ಣ ನಂಬಿಕೆ ಇರುತ್ತದೆ. ನಿಮ್ಮ ಕೆಲಸದಲ್ಲಿ ನೀವು ಅನಿರೀಕ್ಷಿತ ಭಡ್ತಿಯನ್ನು ಪಡೆಯುವ ಸಾಧ್ಯತೆಯಿದೆ. ನಿಮ್ಮ ಮಕ್ಕಳ ವೃತ್ತಿಜೀವನದ ಬಗ್ಗೆ ನೀವು ಪ್ರಮುಖ ನಿರ್ಧಾರವನ್ನು ಹಿರಿಯರು ವಿಚಾರಿಸುವರು. ನಿಮ್ಮ ಸಂಗಾತಿಯ ಜೊತೆ ಚರ್ಚಿಸಿದರೆ ಅದು ನಿಮಗೆ ಇನ್ನೂ ಉತ್ತಮವಾಗಿದೆ. ಅಗ್ನಿಯ ಭೀತಿಯು ನಿಮಗೆ ಅಧಿಕವಾಗಿ ಕಾಡುವುದು. ಮಕ್ಕಳನ್ನು ತಿದ್ದುವುದು ನಿಮಗೆ ಕಷ್ಟವಾದೀತು. ನಿಮ್ಮ ಸ್ವಭಾವವನ್ನು ದುರುಪಯೋಗ ಮಾಡಿಕೊಳ್ಳುವರು. ಹತ್ತಾರು ವಿಚಾರವು ನಿಮ್ಮ ತಲೆಯಲ್ಲಿ ಕಾಣಿಸಿಕೊಳ್ಳುವುದು.

ಮಕರ ರಾಶಿ: ಇಂದು ಮುಖ್ಯವಾಗಿ ಯಾವುದೇ ಕಾರ್ಯಕ್ಕೆ ಆರ್ಥಿಕ ಮುಗ್ಗಟ್ಟು ಬಂದು ಅರ್ಧಕ್ಕೆ ನಿಲ್ಲಿಸುವ ಸಾಧ್ಯತೆಯಿದೆ. ಆದರೆ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ನೀವು ಕೈಲಾದಷ್ಟು ಪ್ರಯತ್ನಿಸುತ್ತೀರಿ. ನಿಮ್ಮ ಸಹೋದರನ ಜೊತೆ ನಿಮ್ಮ ಆಪ್ತತೆಯು. ವಿದೇಶದಲ್ಲಿರುವ ಕುಟುಂಬದ ಸದಸ್ಯರಿಂದ ನೀವು ಒಳ್ಳೆಯ ಸುದ್ದಿಯನ್ನು ಕೇಳಬಹುದು. ಆಹಾರವು ಸರಿಯಾಗಿ ಸಿಗದೇ ನಿಮಗೆ ಸಂಕಟವಾಗಬಹುದು. ದುಡಿಮೆಯ ಬೆನ್ನೇರಿ ಸಂಬಂಧಗಳನ್ನು ಸಡಿಲಮಾಡಿಕೊಳ್ಳುವಿರಿ. ಒಮ್ಮನಸ್ಸು ಬರುವುದು ಕಷ್ಟವಾಗುವುದು.

ಕುಂಭ ರಾಶಿ: ಯಾರ ಹೊಗಳಿಕೆಗೂ ಮರುಳಾಗದಿರಿ. ಆತುರದಲ್ಲಿ ಯಾವುದೇ ಕೆಲಸ ಮಾಡುವುದನ್ನು ಮುಖ್ಯ ಕಾರ್ಯಗಳೇ ಮರೆತುಹೋಗಬಹುದು. ನಿಮ್ಮ ವಿಷಯಗಳ ಮೇಲಿನ ಸಂಪೂರ್ಣ ಗಮನವನ್ನು ವೈಯಕ್ತಿಕವಾಗಿ ನಿಮಗೆ ಒಳ್ಳೆಯದು. ಬಂಧುಗಳಿಂದ ಕೆಲಸವು ಹಾಳಾಗಬಹುದು. ಕಾನೂನಿಗೆ ವಿದ್ಧವಾದ ಕಾರ್ಯವನ್ನು ಸಮರ್ಥಿಸಿಕೊಳ್ಳದಿರಿ. ಸಂಗಾತಿಯ ಮಾತುಗಳು ನಿಮಗೆ ಬೇಸರ ತರಬಹುದು.

ಮೀನ ರಾಶಿ: ನೀವು ಇಂದು ಹೊರಗಿನವರಿಗೆ ಯಾವುದೇ ಆಂತರಿಕ ಮಾಹಿತಿಯನ್ನು ತಿಳಿಸಬಾರದು. ರಕ್ತ ಸಂಬಂಧಿಗಳು ಮೊದಲಿಗಿಂತ ಹೆಚ್ಚಾಗಿದ್ದಾರೆ. ನಿಮ್ಮ ಯೋಜನೆಗಳನ್ನು ನೀವು ವೇಗವಾಗಸುವಿರಿ. ಇಂದು ನೀವು ದೇವರ ಆರಾಧನೆಯಲ್ಲಿ ಮಗ್ನರಾಗುವಿರಿ. ಸಿಟ್ಟಾಗುವ ಸ್ಥಿತಿಯಲ್ಲಿಯೂ ನೀವು ಶಾಂತರಾಗುವಿರಿ. ಮನೆಯ ಕೆಲಸವೆಲ್ಲವೂ ಇರಿಸಿಕೊಂಡು ಬಂಧುಗಳ ಮನೆಗೆ ಹೋಗಿದೆ.

ಲೋಹಿತ ಹೆಬ್ಬಾರ್-8762924271 (What’s app ಮಾತ್ರ)



Source link

Leave a Reply

Your email address will not be published. Required fields are marked *