
ಜನ್ಮಸಂಖ್ಯೆ 1 (ಯಾವುದೇ ತಿಂಗಳ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಸಹಾಯ ಮಾಡುವ ಸಲುವಾಗಿ ನಿಮಗೆ ಚಾಲನೆಯಾಗಲಿದೆ. ನಿಮ್ಮ ಹೆಸರಿನಲ್ಲಿ ಸಾಲು, ಇತರರಿಗೆ ನೀಡುವಂತಹ ಸಾಧ್ಯತೆಗಳು ಜಾಸ್ತಿ ಇವೆ. ಮನೆಯಲ್ಲಿ ಇಟ್ಟಿರುವಂತಹ ಬೆಲೆಬಾಳುವ ವಸ್ತುಗಳ ಕಡೆಗೆ ಮಾಮೂಲಿಗಿಂತ ಜಾಸ್ತಿ ನಿಗಾ ಇರಲಿ. ಈ ದಿನ ಯಾವುದಾದರೂ ಬ್ರಾಂಡೆಡ್ ವಸ್ತುಗಳನ್ನು ಖರೀದಿ ಮಾಡುವುದನ್ನು ಸಂಪೂರ್ಣವಾಗಿ ಪರಿಶೀಲಿಸಿ, ನಂತರ ಖರೀದಿ ಮಾಡುವುದು ಉತ್ತಮ. ನಿಮಗೆ ತುಂಬಾ ಚೆನ್ನಾಗಿ ಗೊತ್ತಿರುವ ಕೆಲಸ ಹಾಗೂ ಅದನ್ನು ಸುಲಭವಾಗಿ ಮಾಡಬಹುದು ಎಂದು ಅಂದುಕೊಂಡು ಯಾವುದನ್ನೂ ಮುಂದಕ್ಕೆ ಹಾಕುತ್ತಾ ಹೋಗಬೇಡಿ. ಗಡುವಿನಲ್ಲಿ ಮುಗಿಯದ ಕೆಲಸವೊಂದರ ಹೊಣೆಯನ್ನು ನಿಮಗೆ ಕಟ್ಟುವ ಸಾಧ್ಯತೆಗಳಿವೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಕೃಷಿ ಜಮೀನು ಇರುವಂತಹವರು ಅಲ್ಲಿ ಕೆಲವು ಮುಖ್ಯವಾದ ಕೆಲಸಗಳನ್ನು ಮಾಡಿದ್ದಾರೆ. ಒಂದು ಸಲ ನಿಮ್ಮ ಹಣವನ್ನು ಹಾಕಿ ಇದನ್ನು ಮಾಡಿಸುವ ಸಾಧ್ಯತೆಯಿದ್ದರೆ ಸ್ವಲ್ಪವಾದರೂ ಈ ಕೆಲಸಕ್ಕಾಗಿ ಸಾಲ ಮಾಡಬೇಕಾದ ಪರಿಸ್ಥಿತಿ ಎದುರಾಗಲಿದೆ. ಹೇಗಿದ್ದರೂ ಸಾಲ ಮಾಡುತ್ತಿದ್ದೇನೆ ಅಥವಾ ಬಡ್ಡಿ ಕಡಿಮೆ ಇದೆ ಎಂಬ ಕಾರಣವೊಡ್ಡಿಕೊಂಡು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸಾಲವನ್ನು ಪಡೆದರೆ ಆ ನಂತರ ಪರಿತಪಿಸುವಂತೆ ಆಗುತ್ತದೆ, ಜಾಗ್ರತೆ. ಹಳೆಯ ಸ್ನೇಹಿತರ ಹಣಕಾಸಿನ ನೆರವನ್ನು ಕೇಳಿಕೊಂಡು ಬರುವ ಯೋಗ ಇದೆ. ಒಟ್ಟಿನಲ್ಲಿ ಹೇಳಬೇಕು ಅಂದರೆ, ಈ ದಿನದ ಹಣಕಾಸಿನ ವಿಚಾರದಲ್ಲಿ ನೀವು ಹೇಗೆ ನಡೆದುಕೊಳ್ಳುತ್ತೀರಿ ನಿಮ್ಮ ಆಧಾರದಲ್ಲಿ ಭವಿಷ್ಯದ ನಿಮ್ಮ ನೆಮ್ಮದಿಯು ನಿಲ್ಲುತ್ತದೆ
ಜನ್ಮಸಂಖ್ಯೆ 3 (ಯಾವುದೇ ತಿಂಗಳ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಪ್ರೀತಿ ಪ್ರೇಮದಲ್ಲಿ ಇರುವಂತಹವರು ಈ ವಿಚಾರವನ್ನು ತಮ್ಮ ಮನೆಯಲ್ಲಿ ಹೇಳಿಕೊಳ್ಳುವ ಬಗ್ಗೆ ನಿರ್ಧಾರ ಮಾಡಬೇಡಿ. ದ್ವಿಚಕ್ರವಾಹನ ಖರೀದಿಗಾಗಿ ಈ ದಿನ ನಿಮಗೆ ಅಡ್ವಾನ್ಸ್ ನೀಡುವ ಸಾಧ್ಯತೆಗಳಿವೆ. ನೀವು ಈ ಹಿಂದೆ ಯಾರಿಗೆ ಸಹಾಯ ಮಾಡಿರುತ್ತೀರೋ ಅವರು ಈ ದಿನ ನಿಮ್ಮ ನೆರವಿಗೆ ಬರಲಿದ್ದಾರೆ. ಹಳೆ ಗ್ಯಾಜೆಟ್ ಅಥವಾ ವಾಹನ ಅಥವಾ ಮಾರಾಟವನ್ನು ಖರೀದಿಸುತ್ತಿರುವವರಿಗೆ ಅದನ್ನು ಖರೀದಿಸಲು ಕೆಲವು ತಾವಾಗಿಯೇ ಮುಂದೆ ಬಂದು, ಉತ್ತಮ ಬೆಲೆಯು ನಿಮಗೆ ದೊರೆಯುವ ಸಾಧ್ಯತೆಗಳು ಕಂಡುಬರುತ್ತವೆ. ನಿಮಗಿಂತ ಸಣ್ಣವರ ವೈಯಕ್ತಿಕ ವಿಚಾರಗಳಿಗೆ ಯಾವುದೇ ಕಾರಣಕ್ಕೂ ತಲೆ ಹಾಕಲು ಹೋಗಬೇಡಿ.
ಜನ್ಮಸಂಖ್ಯೆ 4 (ಯಾವುದೇ ತಿಂಗಳ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ನೀವು ಈಗ ಇರುವಂತಹ ಸ್ಥಳದಿಂದ ಸ್ವಲ್ಪ ದೂರದಲ್ಲಿ ಅಥವಾ ನೀವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ದೂರದಲ್ಲಿ ಉದ್ಯೋಗ ದೊರೆಯುವಂತಹ ಅವಕಾಶಗಳಿವೆ. ನಿಮ್ಮ ಕೈಯಲ್ಲಿ ಹಣ ಹಾಕಿಕೊಂಡು ಮಾಡಿದಂತಹ ಕೆಲಸ ಅರ್ಧಕ್ಕೆ ನಿಂತು, ಒಂದು ಕಡೆ ಆ ಕೆಲಸವೂ ಪೂರ್ತಿಗೊಳ್ಳದೆ ಇನ್ನೊಂದು ಕಡೆ ನಿಮಗೆ ಬರಬೇಕಾದ ಹಣವು ಬಾರದೆ ಒಂದು ಬಗೆಯ ಆತಂಕ ಸೃಷ್ಟಿಯಾಗಲಿದೆ. ಮಹಿಳೆಯರಿದ್ದು, ಮನೆಯಲ್ಲೇ ಇರುವವರಿಗೆ ಕೆಲಸಕ್ಕೆ ಹೋಗುವಂತೆ ಸಂಗಾತಿ ಕಡೆಯಿಂದ ಒತ್ತಡವು ಹೆಚ್ಚಾಗಲಿದೆ. ಮಕ್ಕಳ ಸ್ವಭಾವದಲ್ಲಿ ದೊಡ್ಡ ಬದಲಾವಣೆಯನ್ನು ನೋಡುವುದಕ್ಕೆ ಸಿಗುತ್ತದೆ ಮತ್ತು ಈ ಕಾರಣಕ್ಕಾಗಿ ನೀವು ಅವರ ಮಾತಿಗೆ ಮಾತನ್ನು ಬೆಳೆಸಿ, ವಾಗ್ವಾದವನ್ನು ಮಾಡಿಕೊಳ್ಳಿ.
ಜನ್ಮಸಂಖ್ಯೆ 5 (ಯಾವುದೇ ತಿಂಗಳ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಸಿನಿಮಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವಂಥವರಿಗೆ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ನೀವು ಮಾಡಬೇಕಾದ ಕೆಲಸ ಮಾಡಿ, ನಿಮಗೆ ಬರಬೇಕಾದ ಹಣ ಬಾಕಿ ಉಳಿದುಹೋಗಿದೆ ಅಂತಾದಲ್ಲಿ ಈ ದಿನ ಪ್ರಯತ್ನವನ್ನು ಪಟ್ಟರೆ ಅದು ಬರುವಂಥ ದಿನವಾದರೂ ಗೊತ್ತಾಗುತ್ತದೆ ಅಥವಾ ಈ ದಿನ ಬಂದರೂ ಬಂದುಬಿಡಬಹುದು. ನಿಮ್ಮಲ್ಲಿ ಕೆಲವರು ಮನೆಗೆ ರೆಫ್ರಿಜರೇಟರ್ ನಂಥ ಗೃಹೋಪಯೋಗಿ ವಸ್ತುಗಳನ್ನು ತರುವಂತಹ ಯೋಗ ಇದೆ. ಈ ದಿನ ಸಣ್ಣ ಸಣ್ಣ ವಿಚಾರಕ್ಕೂ ನಿಮಗೆ ಸಿಕ್ಕಾಪಟ್ಟೆ ಸಿಟ್ಟು ಬರಲಿದೆ. ಸಾಧ್ಯವಾದಷ್ಟು ನಿಮ್ಮ ಮನಸ್ಸಿನ ಮೇಲೆ ಹತೋಟಿಯನ್ನು ಸಾಧಿಸಲು ಪ್ರಯತ್ನಿಸಿ. ಹಾಲು ಅಥವಾ ಹಾಲಿನಿಂದ ಮಾಡಿದ ಪದಾರ್ಥಗಳಿಂದ ದೂರವಿದ್ದಲ್ಲಿ ಕ್ಷೇಮ.
ಜನ್ಮಸಂಖ್ಯೆ 6 (ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಮನೆಗೆ ಬರುವ ರೀತಿಯ ಯೋಗ ಈ ದಿನ ಇದೆ. ಅವರ ಜೊತೆಗೆ ಕೆಲವು ಶುಭ ಕಾರ್ಯಗಳಲ್ಲಿ ನೀವು ಭಾಗವಹಿಸಿದ್ದೀರಿ. ನಿಮ್ಮ ತಂದೆ ಅಥವಾ ತಂದೆ ಸಮಾನರಾದವರು ಸಣ್ಣ ಮಟ್ಟಿಗಾದರೂ ನಿಮಗೆ ದುಡ್ಡು ನೀಡುವ ಸಾಧ್ಯತೆಗಳಿವೆ. ವ್ಯಾಸಂಗವೋ ಅಥವಾ ಉದ್ಯೋಗವೋ ವಿದೇಶಕ್ಕಾಗಿ ತೆರಳಬೇಕು ಎಂದು ಪ್ರಯತ್ನ ನಡೆಸುತ್ತಿರುವವರಿಗೆ ಈ ತನಕ ಇದ್ದಂತ ಅಡೆತಡೆಗಳು ನಿವಾರಣೆಯಾಗಲಿವೆ. ಯಾರು ಧಾರ್ಮಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದರೋ ಅಂತಹವರಿಗೆ ಆದಾಯದಲ್ಲಿ ಹೆಚ್ಚು ಆಗಲಿದೆ. ನೀವಾಗಿಯೇ ವಹಿಸಿಕೊಂಡ ಜವಾಬ್ದಾರಿಗಳನ್ನು ಗಡುವಿನೊಳಗೆ ಮುಗಿಸುವುದಕ್ಕೆ ಆದ್ಯತೆ ಕೊಡಿ.
ಜನ್ಮಸಂಖ್ಯೆ 7 (ಯಾವುದೇ ತಿಂಗಳ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ದೇವತಾ ಕಾರ್ಯಗಳಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಸ್ನೇಹಿತರು ಅಥವಾ ಆಹ್ವಾನವನ್ನು ನೀಡಿದಲ್ಲಿ ಹೋಗಿ ಬಂದರೆ ಉತ್ತಮ. ಬಹಳ ಸಮಯದ ಹಿಂದೆ ಹೂಡಿಕೆ ಮಾಡಿದ ಷೇರು ಅಥವಾ ಮ್ಯೂಚುವಲ್ ಫಂಡ್ ಬಹಳ ಬೆಲೆ ಕಡಿಮೆಯಾಗಿದೆ, ನಿಮಗೆ ಬೇಸರದ ಕಾರಣ ಆಗಿದ್ದಲ್ಲಿ ಈ ದಿನ ಅದರ ಬೆಲೆ ಏರುವುದಕ್ಕೆ ಅವಕಾಶಗಳಿವೆ. ಉದ್ಯೋಗ ಸ್ಥಳದಲ್ಲಿ ಪದೋನ್ನತಿ ನೀಡುವ ಮುಂಚೆಯೇ ನಿಮಗೆ ಕೆಲವು ಜವಾಬ್ದಾರಿಗಳನ್ನು ನೀಡುವುದರ ಬಗ್ಗೆ ಚರ್ಚೆಗಳು ನಡೆಯಬಹುದು. ಆದ್ದರಿಂದ ಹೊಸ ಜವಾಬ್ದಾರಿಗಳೇನಾದರೂ ನಿಮಗೆ ನೀಡಲು ಮ್ಯಾನೇಜ್ ಮೆಂಟ್ ಕಡೆಯಿಂದ ಸೂಚನೆ ಬಂದಲ್ಲಿ ಯಾವುದೇ ಕಾರಣವನ್ನು ನಿರಾಕರಿಸುವುದಕ್ಕೆ ಹೋಗಬೇಡಿ.
ಜನ್ಮಸಂಖ್ಯೆ 8 (ಯಾವುದೇ ತಿಂಗಳ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ನಿಮ್ಮಲ್ಲಿ ಕೆಲವರಿಗೆ ತೀವ್ರತರವಾದ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಕೆಲವು ವಿಚಾರಗಳನ್ನು ಯಾಕಾದರೂ ಮಾತನಾಡಿದೆನೋ ಎಂದು ಅಂದುಕೊಳ್ಳುವಂಥ ಸನ್ನಿವೇಶ ಮನೆಯಲ್ಲಿ ಸೃಷ್ಟಿಯಾಗಲಿದೆ. ನವ ವಿವಾಹಿತರಿಗೆ ಖರ್ಚಿನ ಪ್ರಮಾಣ ತುಂಬಾ ಹೆಚ್ಚಾಗಿ, ಆತಂಕಕ್ಕೆ ಅಥವಾ ಅದನ್ನು ಸಂಭಾಳಿಸಲು ಸಾಲ. ನೀವು ಒಬ್ಬರೇ ಮಾಡಿ ಮುಗಿಸಬಹುದು ಅಂದುಕೊಂಡ ಕೆಲಸವು ವ್ಯಾಪ್ತಿ ದೃಷ್ಟಿಯಿಂದ ತುಂಬಾ ದೊಡ್ಡದಾಗಿ, ಯಾಕಾದರೂ ಈ ಕೆಲಸವನ್ನು ಒಪ್ಪುತ್ತೇನೆ ಎಂದು ಅನಿಸುತ್ತದೆ. ಮುಖ್ಯ ಕೆಲಸಕ್ಕಾಗಿ ಮನೆಯಿಂದ ಹೊರಡುತ್ತಿದ್ದೀರಿ ಎಂದಾದರೆ ಮನಸಲ್ಲಿ ಶಿರಡಿ ಸಾಯಿಬಾಬಾರನ್ನು ನೆನಪಿಸಿಕೊಳ್ಳಿ.
ಜನ್ಮಸಂಖ್ಯೆ 9 (ಯಾವುದೇ ತಿಂಗಳ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಮಾತಿನಲ್ಲಿ, ನಡವಳಿಕೆಯಲ್ಲಿ ನಿಮ್ಮಲ್ಲೊಂದು ಆಕರ್ಷಣಾ ಶಕ್ತಿ ಕಾಣಿಸಿಕೊಳ್ಳುತ್ತದೆ. ನೀವು ಇಡುವ ಹೆಜ್ಜೆಗಳಿಂದ ಭವಿಷ್ಯದಲ್ಲಿ ಎಂಥ ಅನುಕೂಲ ಆಗಲಿದೆ ಎಂಬ ಬಗ್ಗೆ ಸ್ಪಷ್ಟತೆ ದೊರೆಯಲಿದೆ, ಯಾವುದೇ ನಿರ್ಧಾರ ಅಥವಾ ಕೆಲಸದಲ್ಲಿ ಗೊಂದಲ ಇರುವುದಿಲ್ಲ. ರಾಜಕಾರಣದಲ್ಲಿ ಇರುವಂತಹವರಿಗೆ ಪದೋನ್ನತಿ ಅಥವಾ ಪ್ರಮುಖ ಜವಾಬ್ದಾರಿಗಳು ಸಿಗಬಹುದು. ನಿಮ್ಮ ಸಹೋದ್ಯೋಗಿಗಳಿಗೆ ಕೆಲವು ಕೆಲಸಗಳು ಕಷ್ಟ ಎನಿಸಿ, ಪೂರೈಸಲು ನಿಮ್ಮ ಸಹಾಯವನ್ನು ಕೇಳಿಕೊಂಡು ಬರಬಹುದು. ವಿದ್ಯಾರ್ಥಿಗಳು ಐಪ್ಯಾಡ್ನಂತಹ ಗ್ಯಾಜೆಟ್ಗಳನ್ನು ಖರೀದಿಸುವ ಯೋಗ ಇದೆ. ನೀವು ಈ ತನಕ ಹುಡುಕಾಡುತ್ತಿರುವಂತಹ ಪ್ರಮುಖ ಕಾಗದ- ದೊರೆಯುವ ಅವಕಾಶಗಳು ಹೆಚ್ಚಿವೆ.
ಲೇಖನ- ಎನ್.ಕೆ.ಸ್ವಾತಿ