
ಇಂಡಿಯನ್ ಪ್ರೀಮಿಯರ್ ಲೀಗ್ನ ಎರಡನೇ ಪಂದ್ಯದ ವೇಳೆ ಟಾಸ್ ಫಿಕ್ಸಿಂಗ್ ಆರೋಪ ಕೇಳಿ ಬಂದಿದೆ. ಈ ಗಂಭೀರ ಆರೋಪ ಮಾಡಿರುವುದು ಮತ್ಯಾರೂ ಅಲ್ಲ, ಐಪಿಎಲ್ ಅಭಿಮಾನಿಗಳು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದ ವೇಳೆ ಕ್ಯಾಮೆರಾದಲ್ಲಿ ಟಾಸ್ ಕಾಯಿನ್ ತೋರಿಸದಿರುವುದೇ ಈ ಆರೋಪಕ್ಕೆ ಮುಖ್ಯ ಕಾರಣ.
ಏಕೆಂದರೆ ವಾಂಖೆಡೆ ಸ್ಟೇಡಿಯಂನಲ್ಲಿ ಟಾಸ್ ಗೆದ್ದ ತಂಡ ಗೆಲ್ಲುವುದು ವಾಡಿಕೆ. ಅಂದರೆ ಇಲ್ಲಿ ಟಾಸ್ ನಿರ್ಣಾಯಕ ಪಾತ್ರ ವಹಿಸುತ್ತದೆ. ಇತ್ತ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಕಾಯಿನ್ ಅನ್ನು ದೂರಕ್ಕೆ ಚಿಮ್ಮಿಸಿದ್ದಾರೆ. ಹೀಗೆ ದೂರಕ್ಕೆ ಹೋಗಿ ಬಿದ್ದ ನಾಣ್ಯವನ್ನು ಕ್ಯಾಮೆರಾದಲ್ಲಿ ತೋರಿಸಲಾಗಲಿಲ್ಲ.
ನಾಣ್ಯ ಕೆಳಗೆ ಬೀಳುವ ಸರಿಯಾದ ಸಮಯದಲ್ಲಿ ಕ್ಯಾಮೆರಾ ಬೇರೆಡೆಗೆ ತಿರುಗಿತು. ಟಾಸ್ ಗೆದ್ದವರು ಯಾರು ಎಂಬುದು ಸ್ಪಷ್ಟವಾಗಿ ಕಾಣಿಸುವ ಮೊದಲೇ ರೆಫರಿ ಮುಂಬೈ ಇಂಡಿಯನ್ಸ್ ಟಾಸ್ ಗೆದ್ದಿದೆ ಎಂದು ಘೋಷಿಸಿದರು.
ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ “ಟಾಸ್ ಫಿಕ್ಸಿಂಗ್” ಆರೋಪ ಕೇಳಿ ಬಂದಿದೆ. ಇದಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ವಿರುದ್ಧವೇ ಇಂತಹ ಆರೋಪ ಕೇಳಿ ಬಂದಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.
2024ರ ಐಪಿಎಲ್ನಲ್ಲಿ ಆರ್ಸಿಬಿ ವಿರುದ್ಧದ ಪಂದ್ಯದ ವೇಳೆ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಟಾಸ್ ಹಾಕಿದಾಗ, ನಾಣ್ಯವು ಸ್ವಲ್ಪ ದೂರದಲ್ಲಿ ಬಿದ್ದಿತ್ತು. ನಾಣ್ಯವನ್ನು ನೋಡಿ ಮ್ಯಾಚ್ ರೆಫರಿ ಮುಂಬೈ ಇಂಡಿಯನ್ಸ್ ಟಾಸ್ ಗೆದ್ದಿದೆ ಎಂದಿದ್ದರು. ಆದರೆ ಆ ನಾಣ್ಯವನ್ನು ವೀಕ್ಷಿಸಲು ಅಂದಿನ ಆರ್ಸಿಬಿ ತಂಡದ ನಾಯಕನ ಫಾಫ್ ಡುಪ್ಲೆಸಿಸ್ಗೆ ಅವಕಾಶ ನೀಡಲಿಲ್ಲ.
ಇದಾದ ನಂತರ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಮುಂದಿನ ಫ್ಯಾಕ್ಟ್, ಫಾಫ್ ಡು ಪ್ಲೆಸಿಸ್ ಅವರು ಎಸ್ಆರ್ಹೆಚ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಅವರಿಗೆ ಸನ್ನೆಗಳ ಮೂಲಕ ಟಾಸ್ ಘಟನೆಯನ್ನು ವಿವರಿಸುತ್ತಿರುವಾಗ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ.
ಈ ಬಳಿಕ ಐಪಿಎಲ್ನಲ್ಲಿ ಘಟನೆ ನಡೆದಿರುವುದು ಸ್ಪಷ್ಟವಾಗಿ ತೋರಿಸಲಾರಂಭಿಸಿತ್ತು. ಅಂದರೆ ಕಾಯಿನ್ ಬಿದ್ದ ಬಳಿಕ ಕ್ಯಾಮೆರಾದಲ್ಲಿ ಝೂಮ್ ಮಾಡಿ ತೋರಿಸಲಾಗಿದೆ. ಆದರೆ ಮುಂಬೈ ಇಂಡಿಯನ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ನಡುವಣ ಪಂದ್ಯದ ವೇಳೆ ಕಾಯಿನ್ ತೋರಿಸಲಾಗಲಿಲ್ಲ. ಹೀಗಾಗಿಯೇ ಇದೀಗ ಮತ್ತೊಮ್ಮೆ ಮುಂಬೈ ಇಂಡಿಯನ್ಸ್ ಸೋಷಿಯಲ್ ಮೀಡಿಯಾದಲ್ಲಿ ಟಾಸ್ ಫಿಕ್ಸಿಂಗ್ ಆರೋಪಕ್ಕೆ ಗುರಿಯಾಗಿದೆ.
ಇನ್ನು ಈ ಆಟದ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 20 ಬೆಂಗಳೂರಿನಲ್ಲಿ 220 ರನ್ ಕಲೆಹಾಕಿತು. ಈ ಗುರಿಯನ್ನು ಮುಂಬೈ ಇಂಡಿಯನ್ಸ್ ಕೇವಲ 19.1 ಭರ್ಜರಿಯಾಗಿ ಚೇಸ್ ಮಾಡಿ 6 ವಿಕೆಟ್ ಜಯ ಸಾಧಿಸಿದೆ.