Ishaq Dar falls during meeting: ಜಾರಿ ಬಿದ್ದ ಪಾಕ್ ವಿದೇಶಾಂಗ ಸಚಿವ: 4 ಇಸ್ಲಾಮಿಕ್ ದೇಶಗಳ ಸಭೆಯಲ್ಲಿ ಘಟನೆ | Pakistani Foreign Minister Slips At 4 Islamic Countries Meeting Relates To War

ಅಮೆರಿಕ-ಇರಾನ್ ಯುದ್ಧದ ಮಧ್ಯಸ್ಥಿಕೆ ಕುರಿತು ಇಸ್ಲಾಮಾಬಾದ್‌ನಲ್ಲಿ ನಡೆದ ವಿದೇಶಾಂಗ ಸಚಿವರ ಸಭೆಯಲ್ಲಿ ಪಾಕಿಸ್ತಾನದ ಉಪ ಪ್ರಧಾನಿ ಇಷಾಕ್ ದಾರ್ ಜಾರಿ ಬಿದ್ದರು. ಈ ಸಭೆಯಲ್ಲಿ ಸೌದಿ ಅರೇಬಿಯಾ, ಈಜಿಪ್ಟ್, ಮತ್ತು ಟರ್ಕಿ ದೇಶಗಳ ಸಚಿವರು ಭಾಗವಹಿಸಿದ್ದರು.

ಇಸ್ಲಾಮಾಬಾದ್: ಪಾಕಿಸ್ತಾನದ ಉಪ ಪ್ರಧಾನಿ ಮತ್ತು ವಿದೇಶಾಂಗ ಸಚಿವ ಇಷಾಕ್ ದಾರ್ ಅವರು ಅಮೆರಿಕ-ಇರಾನ್ ಯುದ್ಧದ ಮಧ್ಯಸ್ಥಿಕೆ ಸಲುವಾಗಿ ಇಸ್ಲಾಮಾಬಾದ್‌ನಲ್ಲಿ ನಡೆದ 4 ವಿದೇಶಾಂಗ ಸಚಿವರ ಮಾತುಕತೆ ವೇಳೆ ಜಾರಿ ಬಿದ್ದ ಘಟನೆ ನಡೆಯಿತು. ಕೂಡಲೇ ಸಾವರಿಸಿಕೊಂಡು ಅವರು ಮೇಲೆದ್ದರು. ಈ ಸಭೆ ಇಂದು ಸೋಮವಾರ ಕೂಡ ಮುಂದುವರಿಯುವ ನಿರೀಕ್ಷೆ ಇದೆ.

ಭೀಕರ ಯುದ್ಧ ನಡೆಸುತ್ತಿರುವ ಇರಾನ್ ಮತ್ತು ಅಮೆರಿಕ ನಡುವೆ ಖುದ್ದು ನಾವೇ ನಿಂತು ಮಾತುಕತೆ ಆಯೋಜಿಸುತ್ತೇವೆ ಎಂದು ಮಧ್ಯಪ್ರಾಚ್ಯ ಸಮರಕ್ಕೆ ಸಂಧಾನಕಾರನಾಗಿ ಕೆಲಸ ಮಾಡುತ್ತಿರುವ ಪಾಕಿಸ್ತಾನ ಸರ್ಕಾರ ಭಾನುವಾರ ಘೋಷಿಸಿತ್ತು. ಸೌದಿ ಅರೇಬಿಯಾ, ಈಜಿಪ್ಟ್, ಮತ್ತು ಟರ್ಕಿ ದೇಶಗಳ ಜೊತೆ ಸಭೆ ನಡೆಸಿದ ಬಳಿಕ ಪಾಕಿಸ್ತಾನದಿಂದ ಈ ಘೋಷಣೆ ಹೊರಬಿದ್ದಿದೆ.

ಇದನ್ನೂ ಓದಿ: ಭಾರತದಿಂದ ಶ್ರೀಲಂಕಾಕ್ಕೆ 38,000 ಮೆಟ್ರಿಕ್ ಟನ್ ಪೆಟ್ರೋಲ್, ಡೀಸೆಲ್‌: ಪೆಟ್ರೋಲ್ ಬಂಕಲ್ಲೂ ಸೀಮೆಎಣ್ಣೆ ವಿತರಣೆಗೆ ಸದ್ಯ ಅವಕಾಶ: ಕೇಂದ್ರ

ಈ ದೇಶಗಳ ವಿದೇಶಾಂಗ ಸಚಿವರ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಪಾಕಿಸ್ತಾನದ ವಿದೇಶಾಂಗ ಸಚಿವ ಇಷಾಕ್ ದಾರ್, ಅಮೆರಿಕ ಮತ್ತು ಇರಾನ್ ನಡುವೆ ಪಾಕಿಸ್ತಾನವೇ ಸಂಧಾನ ಸಭೆ ಆಯೋಜಿಸುತ್ತದೆ. ಈ ಯುದ್ಧ ಯಾರಿಗೂ ಒಳಿತು ಮಾಡುವುದಿಲ್ಲ. ಇದು ಕೇವಲ ಸಾವು ಮತ್ತು ವಿನಾಶಕ್ಕೆ ಕಾರಣವಾಗುತ್ತದೆ ಎಂದು ನಾವು ಒಪ್ಪಿಕೊಂಡಿದ್ದೇವೆ. ಈ ಸವಾಲಿನ ಸಮಯದಲ್ಲಿ ಮುಸ್ಲಿಂ ದೇಶಗಳ ಒಗ್ಗಟ್ಟು ಅತ್ಯಂತ ಮಹತ್ವದ್ದಾಗಿದೆ’ ಎಂದರು. ಸೌದಿ, ಟರ್ಕಿ ಮತ್ತು ಈಜಿಪ್ಟ್ ಸಚಿವರೂ ತಮ್ಮ ಮಾತಿಗೆ ಒಪ್ಪಿರುವುದಾಗಿ ತಿಳಿಸಿದರು.

ಇದನ್ನೂ ಓದಿ: ದೆವ್ವ ಹಿಡಿದಿದೆ ಅಂತ ಫ್ಲೈಟ್ ತುರ್ತು ದ್ವಾರ ತೆರೆಯಲೆತ್ನಿಸಿವನ ಬಂಧನ: ಬೆಂಗಳೂರು ಕಾಶಿ ವಿಮಾನದಲ್ಲಿ ಆತಂಕದ ಘಟನೆ

Source link

Leave a Reply

Your email address will not be published. Required fields are marked *