
ಸಿನಿಮಾ ಶೂಟಿಂಗ್ ವೇಳೆ ಸಂಭವಿಸುವ ಅವಘಡಗಳು ಕೆಲ ಕಲಾವಿದರ ಬದುಕನ್ನೇ ಬದಲಿಸಿಬಿಡುತ್ತವೆ. ಈಗ ಧಾರಾವಾಹಿ (ಧಾರಾವಾಹಿ) ಶೂಟಿಂಗ್ ವೇಳೆ ಸಂಭವಿಸಿದ ಅವಘಡ ಎಲ್ಲರಿಗೂ ಶಾಕ್ ತರಿಸಿದೆ. ಬೆಂಗಾಲಿ ನಟ ರಾಹುಲ್ ಅರುಣೋದಯ್ ಬ್ಯಾನರ್ಜಿ ಅವರು ಭಾನುವಾರ (ಮಾರ್ಚ್ 29) ನಿಧನರಾದರು. ಸಮುದ್ರದಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾರೆ. ಇದು ಬೆಂಗಾಲಿ ಚಿತ್ರರಂಗಕ್ಕೆ ಹಾಗೂ ಅಲ್ಲಿನ ಕಿರುತೆರೆ ಲೋಕಕ್ಕೆ ಶಾಕಿಂಗ್ ಎನಿಸಿದೆ. ರಾಹುಲ್ ಅವರಿಗೆ 43 ವರ್ಷ ವಯಸ್ಸಾಗಿತ್ತು.
‘ಭೋಲೆ ಬಾಬಾ ಪರ್ ಕರೆಗಾ’ ಹೆಸರಿನ ಧಾರಾವಾಹಿ ಶೂಟಿಂಗ್ ಪಶ್ಚಿಮ ಬಂಗಾಳದ ದಿಘಾದಲ್ಲಿ ನಡೆಯುತ್ತಿದೆ. ಮಧ್ಯಾಹ್ನದ ವೇಳೆ ಶೂಟ್ ಆಗಿದೆ. ಪ್ಯಾಕಪ್ ಆದ ಬಳಿಕ ರಾಹುಲ್ ಒಂಟಿಯಾಗಿ ತಲ್ಸಾರಿ ಸಮುದ್ರದ ಕಡೆ ತೆರಳಿದ್ದಾರೆ. ಆ ಬಳಿಕ ಅವರು ಕಾಣೆಯಾದರು. ಈ ಬಗ್ಗೆ ಚರ್ಚೆ. ಅವರ ಹುಡುಕಾಟ ಆರಂಭವಾಯಿತು.
ರಾಹುಲ್ ಸಮುದ್ರದಲ್ಲಿ ಕಾಣಿಸಿದರು. ಅವರನ್ನು ಎತ್ತಲು ಅಲ್ಲಿದ್ದವರು ಪ್ರಯತ್ನಿಸಿದರು. ನಂತರ ಅವರನ್ನು ಹೊರಕ್ಕೆ ತಂದು ಆಸ್ಪತ್ರೆಗೆ ದಾಖಲು. ಸಂಜೆ ವೇಳೆ ಅವರು ನಿಧನ ಹೊಂದಿದ್ದಾಗಿ ವೈದ್ಯರು ತಿಳಿಸಿದ್ದಾರೆ. ನೀರಿನಲ್ಲಿ ಮುಳುಗಿದಾಗಲೇ ನಿಧನ ಹೊಂದಿದ್ದಾಗಿ ಪ್ರಾಥಮಿಕ ವರದಿಗಳು ಹೇಳಿವೆ.
ಇದನ್ನೂ ಓದಿ: ಒಂದೇ ಧಾರಾವಾಹಿಯಲ್ಲಿ ಅಮೃತಾ ರಾಮಮೂರ್ತಿ ಹಾಗೂ ಅಮೂಲ್ಯ ಗೌಡ
ಈ ವಿಷಯವಾಗಿ ರಾಹುಲ್ ಪತ್ನಿ ಪ್ರಿಯಾಂಕಾ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಕಷ್ಟದ ಸಂದರ್ಭದಲ್ಲಿ ಖಾಸಗಿತನಕ್ಕೆ ಗೌರವ ಕೊಡಿ ಎಂದು ಅವರು ಬೇಡಿಕೊಂಡಿದ್ದಾರೆ. 2008ರಲ್ಲಿ ಸೀರಿಯಲ್ ಸೆಟ್ ಅಲ್ಲಿಗೆ ಭೇಟಿ ಆದರು. ನಿಜ ಜೀವನದಲ್ಲಿ ಇವರ ಮಧ್ಯೆ ಪ್ರೀತಿ ಮೂಡಿತು. 2010ರಲ್ಲಿ ಇವರು ಮದುವೆ ಆದರು. 2017ರಲ್ಲಿ ಇವರು ಬೇರೆ ಆದರು. 2018ರಲ್ಲಿ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದರು. ಅಚ್ಚರಿ ಎಂದರೆ 2023ರಲ್ಲಿ ಮತ್ತೆ ಒಂದಾದರು. ಈ ದಂಪತಿಗೆ ಸೊಹೊಜ್ ಹೆಸರಿನ ಮಗ ಇದ್ದಾನೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.