
ಕನ್ನಡ, ಹಿಂದಿ ಸೇರಿದಂತೆ ಭಾರತದ ಚಿತ್ರರಂಗದವರು ವಿದೇಶದಲ್ಲಿ ಶೂಟ್ ಮಾಡುತ್ತಾರೆ. ಅದರಲ್ಲಿ ಬಾಲ್ಡ್‌ನವರು ವಿದೇಶಿ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳುವುದು ಹೆಚ್ಚು. ಈಗ ಅಚ್ಚರಿ ಎಂಬಂತೆ ರಷ್ಯಾದ ಚಿತ್ರವೊಂದು ಭಾರತದ ಬೀದಿಗಳಲ್ಲಿ ಶೂಟ್ ಆಗಿದೆ. ಏಪ್ರಿಲ್ 1ರಂದು ಸಿನಿಮಾ ತೆರೆಗೆ ಬರುತ್ತಿದೆ. ಈ ಸಿನಿಮಾ ಸಂಪೂರ್ಣವಾಗಿ ಭಾರತದ ಸಿನಿಮಾಗಳಿಂದ ಪ್ರೇರಿತವಾಗಿದೆ.
ಭಾರತ ಹಾಗೂ ರಷ್ಯಾ ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡಿದೆ. ‘ಪರ್ಸಿಮನ್ ಆಫ್ ಲವ್’ ಎಂಬುದು ಚಿತ್ರದ ಹೆಸರು. ಪರ್ಸಿಮನ್ ಎಂದರೆ ಆರೆಂಜ್ ರೀತಿಯಲ್ಲೇ ಇರುವ ಒಂದುಹಣ್ಣು. ಭಾರತ ಹಾಗೂ ರಷ್ಯಾ ಒಟ್ಟಾಗಿ ನಿರ್ಮಿಸಿರುವ ಮೊದಲ ಸಿನಿಮಾ ಇದಾಗಿದೆ. ಈ ಸಿನಿಮಾ ಟ್ರೇಲರ್ ಮೂಲಕ ಗಮನ ಸೆಳೆದಿದೆ.
ಮಾರಿಯಸ್ ವೈಸ್ಬರ್ಗ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಬಾಲಿವುಡ್ ಶೈಲಿಯಲ್ಲಿ ಸಿನಿಮಾ ಮೂಡಿಬಂದಿದೆ. ಕಾಮಿಡಿ ಕ್ಲಬ್ ತಾರೆಯರಾದ ಡೆಮಿಸ್ ಕರಿಬಿಡಿಸ್ ಮತ್ತು ಮಿಖಾಯಿಲ್ ಗಲುಸ್ಟಿಯನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜೊತೆಗೆ ಅಡಿಲಾ ರಾಗಿಮೋವಾ ನಾಯಕಿಯಾಗಿ ಪಾದಾರ್ಪಣೆ ಮಾಡಿದ್ದಾರೆ.
ಇದನ್ನೂ ಓದಿ: 11ನೇ ದಿನವೂ ಅದ್ಭುತ ಕಲೆಕ್ಷನ್ ಮಾಡಿದ ‘ಲವ್ ಮ್ಯಾಕ್ಟೇಲ್ 3’ ಸಿನಿಮಾ; ಒಟ್ಟಾರೆ ಗಳಿಕೆ ಎಷ್ಟು?
ಒಬ್ಬ ಪೊಲೀಸ್ ಅಧಿಕಾರಿ ಆದರೆ, ಯಾರಾದರೂ ಅಪರಾಧಿ. ಅವರ ಪೈಪೋಟಿಯು ದೀರ್ಘಕಾಲದವರೆಗೆ ಸಮಾಧಿಯಾಗಿ ಉಳಿದಿರುವ ಸತ್ಯದ ಆವಿಷ್ಕಾರಕ್ಕೆ ಕಾರಣವಾಗಿದೆ. ಬಾಲ್ಯದಲ್ಲಿ ಬೇರ್ಪಟ್ಟ ಒಡಹುಟ್ಟಿದವರು ಎಂಬ ವಿಷಯದ ನಂತರ ಹೊರ ಬರುತ್ತದೆ.
ಭಾರತ, ರಷ್ಯಾ ಚಲನಚಿತ್ರ ಸಹಕಾರ.
ರಷ್ಯಾದ ಚಲನಚಿತ್ರ “ಪರ್ಸಿಮನ್ ಆಫ್ ಮೈ ಲವ್” ನ ಪೋಸ್ಟರ್. ಇದು ಸಂಪೂರ್ಣವಾಗಿ ಭಾರತದಲ್ಲಿ ಚಿತ್ರೀಕರಣಗೊಂಡ ಮೊದಲ ಪ್ರಮುಖ ರಷ್ಯಾದ ಚಲನಚಿತ್ರವಾಗಿದೆ. ಏಪ್ರಿಲ್ 1 ರಂದು ರಷ್ಯಾದಾದ್ಯಂತ ಪ್ರಥಮ ಪ್ರದರ್ಶನಕ್ಕೆ ಹೊಂದಿಸಲಾಗಿದೆ, ರಷ್ಯಾದ ಹಾಸ್ಯ ಮತ್ತು ಸಹೋದರ ನಾಟಕದೊಂದಿಗೆ ಬಾಲಿವುಡ್ ಹಾಡು ಮತ್ತು ನೃತ್ಯವನ್ನು ಸಂಯೋಜಿಸುತ್ತದೆ. pic.twitter.com/9Vo5SBFkny
– ಸಿದ್ದಾಂತ್ ಸಿಬಲ್ (@sidhant) ಮಾರ್ಚ್ 29, 2026
ರಷ್ಯಾದ ಚಲನಚಿತ್ರ “ಪರ್ಸಿಮನ್ ಆಫ್ ಮೈ ಲವ್” ನ ಪ್ರಚಾರ. ಸಿನಿಮಾವನ್ನು ಸಂಪೂರ್ಣವಾಗಿ ಭಾರತದಲ್ಲಿಯೇ ಚಿತ್ರೀಕರಿಸಲಾಗಿದೆ.
ರೋಮ್-ಕಾಮ್ ಅನ್ನು ಸಂಪೂರ್ಣವಾಗಿ ಮುಂಬೈ, ಉದಯಪುರ ಮತ್ತು ಜೋಧ್ಪುರದ ಸ್ಥಳದಲ್ಲಿ ಚಿತ್ರೀಕರಿಸಲಾಗಿದೆ. ಸೋವಿಯತ್ ನಂತರದ ಅವಧಿಯಲ್ಲಿ ಇಂತಹ ಮೊದಲ ಚಲನಚಿತ್ರ. ‘ಜಿಮ್ಮಿ ಜಿಮ್ಮಿ ಅಜಾ ಅಜಾ’ https://t.co/gTNVMRU1cg ಸೇರಿದಂತೆ ಹಿಂದಿ ಹಾಡುಗಳನ್ನು ಸಹ ಹೊಂದಿದೆ pic.twitter.com/iEmIOOeHab
– ಸಿದ್ದಾಂತ್ ಸಿಬಲ್ (@sidhant) ಮಾರ್ಚ್ 29, 2026
ಇದು ಭಾರತದಲ್ಲಿ ಶೇಟ್ ಆಗಿಲ್ಲ ಭಾರತದ ಪ್ರಮುಖ ನಗರಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರವನ್ನು ಹಿಂದಿಗೆ ಡಬ್ ಮಾಡುವ ಪ್ಲ್ಯಾನ್ ಕೂಡ ಇದೆ ಎಂಬುದು ಸದ್ಯದ ಪ್ರಶ್ನೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.