Right Way To Make Sambar Masala ದಕ್ಷಿಣ ಭಾರತೀಯ ಊಟ ಅಂದ್ರೆ ಮೊದಲಿಗೆ ನೆನಪಾಗೋದು ಬಿಸಿ ಬಿಸಿ ಇಡ್ಲಿ, ಘಮ ಘಮ ದೋಸೆ… ಅದರ ಜೊತೆ ಸಿಕ್ಕಾಪಟ್ಟೆ ಸುವಾಸನೆಯ ಸಾಂಬಾರ್ , ಆದ್ರೆ ಆ ಸಾಂಬಾರ್‌ನ ನಿಜವಾದ ಮಾಯೆ ಏನು ಗೊತ್ತಾ? ಮಸಾಲೆ!

ಅಂಗಡಿಯಲ್ಲಿ ಸಿಗೋ ಮಸಾಲೆಗಿಂತ ಮನೆಯಲ್ಲೇ ತಯಾರಿಸಿದ ಮಸಾಲೆಯ ರುಚಿ, ಸುವಾಸನೆ, ಶುದ್ಧತೆ—ಇವುಗಳಿಗೆ ಕಂಪಾರೇ ಇಲ್ಲ!

ಸರಿಯಾದ ಮಸಾಲೆ ಆಯ್ಕೆ = ಅರ್ಧ ಕೆಲಸ ಮುಗಿದಂತೆ!

ಮೊದಲ ಸ್ಟೆಪ್—

ಕೊತ್ತಂಬರಿ, ಜೀರಿಗೆ, ಮೆಂತ್ಯ, ಸಾಸಿವೆ, ಒಣ ಮೆಣಸಿನಕಾಯಿ—all fresh ಇರಬೇಕು

ತೇವಾಂಶ ಇರಬಾರದು, ಇಲ್ಲಾಂದ್ರೆ ಮಸಾಲೆ ಬೇಗ ಹಾಳಾಗುತ್ತೆ

ಕರಿಬೇವಿನ ಎಲೆಗಳನ್ನು ತೊಳೆದು ಸಂಪೂರ್ಣ ಒಣಗಿಸೋದು ತುಂಬಾ ಮುಖ್ಯ!

ಹುರಿಯುವ ವಿಧಾನ – ಇಲ್ಲಿ ಆಗುತ್ತೆ ಗೇಮ್ ಚೇಂಜ್!

ಕಡಿಮೆ ಉರಿಯಲ್ಲಿ:

2 ಚಮಚ ಕೊತ್ತಂಬರಿ

1.5 ಚಮಚ ಜೀರಿಗೆ

5–6 ಒಣ ಮೆಣಸಿನಕಾಯಿ

1 ಚಮಚ ಸಾಸಿವೆ

ಸ್ವಲ್ಪ ಮೆಂತ್ಯ + ಕರಿಬೇವು

ಸಣ್ಣ ಸುವಾಸನೆ ಬರುತ್ತಿದ್ದಂತೆ ಆಫ್ ಮಾಡಿ

ಹೆಚ್ಚು ಉರಿ ಬೇಡ! ಇಲ್ಲಾಂದ್ರೆ ಮಸಾಲೆ ಕಹಿಯಾಗುತ್ತೆ ಬೇಳೆ ಸೇರಿಸಿದ್ರೆ ಸಾಂಬಾರ್ ರುಚಿ ಡಬಲ್!

ಕಡಲೆ ಬೇಳೆ + ತೊಗರಿ ಬೇಳೆ + ಕರಿಮೆಣಸು ಹುರಿಯಿರಿ

ಇದರಿಂದ ಮಸಾಲೆಗೆ thick texture + rich flavour ಸಿಗುತ್ತೆ

ಮಿಕ್ಸರ್ ಸೀಕ್ರೆಟ್!

ಎಲ್ಲಾ ಮಸಾಲೆಗಳು ತಣ್ಣಗಾದ ಮೇಲೆ:

ಮಿಕ್ಸರ್‌ನಲ್ಲಿ ಹಾಕಿ

ಸ್ವಲ್ಪ ಅರಿಶಿನ + ಇಂಗು ಸೇರಿಸಿ

ನುಣ್ಣಗೆ ಪುಡಿ ಮಾಡಿದ್ರೆ… ಸಾಂಬಾರ್ ಮಸಾಲ ರೆಡಿ

ಗಾಳಿಯಾಡದ ಡಬ್ಬಿಯಲ್ಲಿ ಇಡಿ

ಒಣ ಚಮಚ ಮಾತ್ರ ಬಳಸಿ

ತೇವಾಂಶ ದೂರ ಇಡಿ

ಇದರಿಂದ ತಿಂಗಳುಗಳ ಕಾಲ ಫ್ರೆಶ್ ಆಗಿ ಇರುತ್ತೆ

Source link
ಒಮ್ಮೆ ಈ ಸಾಂಬಾರ್ ಪುಡಿ ಟ್ರೈ ಮಾಡಿದ್ರೆ… ಹೋಟೆಲ್ ರುಚಿ ನಿಮ್ಮ ಮನೆಲ್ಲೇ