Headlines

ಪ್ರೇಯಸಿಯನ್ನು ಮನೆಯಲ್ಲಿ ಕೊಂದು ದೇಹವನ್ನು ಕತ್ತರಿಸಿ ಫ್ರಿಡ್ಜ್​​ನಲ್ಲಿಟ್ಟ ನೌಕಾಪಡೆ ಸಿಬ್ಬಂದಿ

ಪ್ರೇಯಸಿಯನ್ನು ಮನೆಯಲ್ಲಿ ಕೊಂದು ದೇಹವನ್ನು ಕತ್ತರಿಸಿ ಫ್ರಿಡ್ಜ್​​ನಲ್ಲಿಟ್ಟ ನೌಕಾಪಡೆ ಸಿಬ್ಬಂದಿ


ಪ್ರೇಯಸಿಯನ್ನು ಮನೆಯಲ್ಲಿ ಕೊಂದು ದೇಹವನ್ನು ಕತ್ತರಿಸಿ ಫ್ರಿಡ್ಜ್‌ನಲ್ಲಿ ನೌಕಾಪಡೆ ಸಿಬ್ಬಂದಿ

ವಿಶಾಖಪಟ್ಟಣಂ, ಮಾರ್ಚ್ 30: ನೌಕಾಪಡೆಯ ಸಿಬ್ಬಂದಿ ಪ್ರೇಯಸಿಯನ್ನು ಮನೆಯಲ್ಲಿ ಕೊಲೆ(ಕೊಲೆ) ಮಾಡಿ ದೇಹವನ್ನು ಕತ್ತರಿಸಿ ಫ್ರಿಡ್ಜ್ನಲ್ಲಿರುವ ಘಟನೆ ವಿಶಾಖಪಟ್ಟಣದಲ್ಲಿ ನಡೆದಿದೆ. ಚಿಂತಾದ ರವೀಂದ್ರ ಎಂಬಾತ ಪತ್ನಿ ತವರು ಮನೆಗೆ ಹೋಗಿದ್ದ ಸಂದರ್ಭದಲ್ಲಿ ಪ್ರೇಯಸಿಯನ್ನು ಮನೆಗೆ ಕರೆಸಿಕೊಂಡು ಆಕೆಯನ್ನು ಕೊಲೆ ಮಾಡಿದ್ದಾನೆ. ಮೌನಿಕಾ ಮತ್ತು ರವೀಂದ್ರ ತಮ್ಮ ಮನೆಯಲ್ಲಿ ಸ್ವಲ್ಪ ಸಮಯ ಕಳೆದಿದ್ದರು. ಬಳಿಕ ಇಬ್ಬರ ನಡುವೆ ವಾಗ್ವಾದ ನಡೆದಿತ್ತು ಕೋಪದಲ್ಲಿ ರವೀಂದ್ರ ಆಕೆಯನ್ನು ಕೊಂಡು ತುಂಡು ತುಂಡಾಗಿ ಕತ್ತರಿಸಿದ್ದಾನೆ.

ಭಾರತೀಯ ನೌಕಾಪಡೆಯ ಹಡಗು (ಐಎನ್‌ಎಸ್) ಡೇಗಾದಲ್ಲಿ ನಿಯೋಜಿತರಾಗಿದ್ದ 35 ವರ್ಷದ ನೌಕಾಪಡೆಯ ಅಧಿಕಾರಿ ರವೀಂದ್ರ,2021 ರಲ್ಲಿ ಡೇಟಿಂಗ್ ಆಯಪ್‌ನಲ್ಲಿ 29 ವರ್ಷದ ಮೌನಿಕಾ ಜೊತೆ ಡೇಟಿಂಗ್ ಆರಂಭಿಸಿದ್ದರು. ಇಬ್ಬರೂ ಒಟ್ಟಿಗೆ ಸುತ್ತಾಡುತ್ತಿದ್ದರು.ಕೆಲವು ವಾರಗಳ ಹಿಂದೆ, ರವೀಂದ್ರನ ಹೆಂಡತಿ ವಿಜಯನಗರದಲ್ಲಿರುವ ತನ್ನ ಹೆತ್ತವರ ಮನೆಗೆ ಹೋಗಿದ್ದಳು. ಭಾನುವಾರ ಮಧ್ಯಾಹ್ನ ತನ್ನ ಪ್ರಿಯಕರ ರವೀಂದ್ರ ಜೊತೆ ಸಮಯ ಕಳೆಯಲು ಸೂಕ್ತವಾದ ಸಂದರ್ಭವೆಂದು ಮೌನಿಕಾಳನ್ನು ಕರೆಸಿಕೊಳ್ಳಲು ರವೀಂದ್ರ ನಿರ್ಧರಿಸಿದ್ದ.

ಸಂಜೆಯ ಹೊತ್ತಿಗೆ ಇಬ್ಬರ ನಡುವೆ ಜಗಳ ಆರಂಭ, ರವೀಂದ್ರ ಮೌನಿಗಳನ್ನು ಇರಿದು ಕೊಂದಿದ್ದಾನೆ, ಅವನು ದೇಹವನ್ನು ತುಂಡುಗಳಾಗಿ ಕತ್ತರಿಸಿ, ಕೆಲವು ಭಾಗಗಳನ್ನು ಚೀಲದಲ್ಲಿ ತುಂಬಿಸಿ, ಅವುಗಳನ್ನು ವಿಲೇವಾರಿ ಮಾಡಿದ್ದಾನೆ, ಕೆಲವು ಭಾಗಗಳನ್ನು ಫ್ರಿಡ್ಜ್‌ನಲ್ಲಿಟ್ಟಿದ್ದಾನೆ.

ಮತ್ತಷ್ಟು ಓದಿ: ಭಾವನಿಂದಲೇ ಬಾಮೈದ ಕೊಲೆ ಕೇಸ್: ನನ್ನ ಮಗನನ್ನ ಅಳಿಯನೇ ಕೊಂದ ಎಂದ ರಂಜಿತ್ ತಾಯಿ

ರವೀಂದ್ರ ಪೊಲೀಸ್ ಠಾಣೆಗೆ ಹೋಗಿ ತಾನು ಮಾಡಿರುವ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಮೌನಿಕಾ ತನ್ನಿಂದ 3.5 ಲಕ್ಷ ರೂ.ಗಳನ್ನು ಪಡೆದಿದ್ದಾಳೆ ಮತ್ತು ತನ್ನ ಹೆಂಡತಿಗೆ ತನ್ನ ಸಂಬಂಧವನ್ನು ಬಹಿರಂಗಪಡಿಸಿದ್ದಾಳೆ ಎಂದು ಬೆದರಿಕೆ ಹಾಕುತ್ತಿದ್ದಳು. ಆಕೆಯನ್ನು ಕೊಲೆ ಮಾಡಿದ ದಿನ ಕೂಡ ಜಗಳ ನಡೆದಿತ್ತು ಎಂದು ರವೀಂದ್ರ ಹೇಳಿದ್ದಾನೆ.

ಅಪರಾಧ ಪ್ರಕರಣಕ್ಕೆ ಧಾವಿಸಿದಾಗ, ರೆಫ್ರಿಜರೇಟರ್ ಮತ್ತು ಮನೆಯೊಳಗೆ ಕತ್ತರಿಸಿದ ದೇಹದ ಭಾಗಗಳು ಕಂಡುಬಂದವು, ಮೌನಿಗಳ ತಲೆ ಕಾಣಲಿಲ್ಲ. ರವೀಂದ್ರ ಅದನ್ನು ಬೇರೆ ಸ್ಥಳದಲ್ಲಿ ವಿಲೇವಾರಿ ಮಾಡಿದ್ದಾನೆ ಎಂದು ಶಂಕಿಸಿದ್ದಾರೆ. ಕಾಣೆಯಾದ ದೇಹದ ಭಾಗಗಳನ್ನು ಹುಡುಕಲು ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದೆ. ಕೊಲೆ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 



Source link

Leave a Reply

Your email address will not be published. Required fields are marked *