Headlines

VIDEO: ಪಾಕಿಸ್ತಾನ್ ಸೂಪರ್ ಲೀಗ್​ನ ‘ಕಳ್ಳಾಟ’ ಬಯಲು

VIDEO: ಪಾಕಿಸ್ತಾನ್ ಸೂಪರ್ ಲೀಗ್​ನ ‘ಕಳ್ಳಾಟ’ ಬಯಲು


ವಿಡಿಯೋ: ಪಾಕಿಸ್ತಾನ್ ಸೂಪರ್ ಲೀಗ್‌ನ 'ಕಳ್ಳಾಟ ಬಯಲು

PSL 2026: ಪಾಕಿಸ್ತಾನ್ ಸೂಪರ್ ಲೀಗ್‌ನ 6ನೇ ಪಂದ್ಯವು ವಿವಾದಕ್ಕೀಡಾಗಿದೆ. ಈ ವಿವಾದಕ್ಕೆ ಕಾರಣ ಪಂದ್ಯದ ವೇಳೆ ಕಂಡು ಬಂದ ಕಳ್ಳಾಟ. ಮ್ಯಾಚ್ನ ಅಂತಿಮ ದಿನದಂದು ಮೊದಲು ಪಾಕಿಸ್ತಾನದ ಸ್ಟಾರ್ ಆಟಗಾರರಾದ ಫಖರ್ ಜಮಾನ್, ಶಾಹೀನ್ ಅಫ್ರಿದಿ ಹಾಗೂ ಹಾರಿಸ್ ರೌಫ್ ಜೊತೆಗೂಡಿ ಬಾಲ್ ಟ್ಯಾಂಪರಿಂಗ್ ಮಾಡಿದ್ದಾರೆ.

ಪಂದ್ಯದ ಅಂತಿಮ ಹಂತದಲ್ಲಿ ಕರಾಚಿ ಕಿಂಗ್ಸ್ ಗೆಲುವಿಗೆ 14 ರನ್ ಆಗಬೇಕಿತ್ತು. ಆ ಸಮಯದಲ್ಲಿ ಲಾಹೋರ್ ಖಲಂದರ್ಸ್ ತಂಡದ ಆಟಗಾರ ಫಖರ್ ಝಮಾನ್ ಅವರು ಚೆಂಡಿನ ಮೇಲ್ಮೈಯನ್ನು ಉದ್ದೇಶಪೂರ್ವಕವಾಗಿ ಉಗುರಿನಿಂದ ಕೆರೆಯುತ್ತಿರುವ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದನ್ನು ಗಮನಿಸಿದ ಅಂಪೈರ್ ಫೈಸಲ್ ಅಫ್ರಿದಿ ತಕ್ಷಣವೇ ಕ್ರಮ ಕೈಗೊಂಡರು. ಜೊತೆಗೆ ಅಂತಿಮ ಪ್ರತಿಗೂ ಮುನ್ನ ಚೆಂಡನ್ನು ಬದಲಿಸಿ ಲಾಹೋರ್ ಖಲಂದರ್ಸ್ ತಂಡಕ್ಕೆ 5 ರನ್ಗಳ ದಂಡ ವಿಧಿಸಿದ್ದಾರೆ. ಇದರಿಂದ ಕರಾಚಿ ಕಿಂಗ್ಸ್ ತಂಡದ ಗುರಿ 14 ರಿಂದ 9 ರನ್‌ಗಳಿಗೆ ಇಳಿಕೆಯಾಗಿದೆ.

ಇನ್ನು ಚೆಂಡು ವಿರೂಪಗೊಳಿಸಿದ ಫಖರ್ ಜಮಾನ್ ವಿರುದ್ಧ 3ನೇ ಹಂತದ ಅಪರಾಧದ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಒಂದು ವೇಳೆ ತಪ್ಪಿತಸ್ಥರೆಂದು ಸಾಬೀತಾದರೆ, ಫಖರ್ ಅವರಿಗೆ ಕನಿಷ್ಠ ಒಂದು ಪಂದ್ಯದಿಂದ ಬ್ಯಾನ್ ಮಾಡಲಾಗಿತ್ತು. ಜೊತೆಗೆ, ನಾಯಕ ಶಾಹೀನ್ ಅಫ್ರಿದಿ ಮೇಲೂ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

ಒಟ್ಟಿನಲ್ಲಿ ಪಾಕ್ ಆಟಗಾರರ ಸದನದ ವಿರುದ್ಧ ಇದೀಗ ಪಾಕಿಸ್ತಾನ್ ಸೂಪರ್ ಲೀಗ್ ಕೂಟದ ಕಳ್ಳಾಟದ ಕಾರ್ಮೋಡ ಕವಿದಿದ್ದು, ಪಾಕಿಸ್ತಾನ ಕ್ರಿಕೆಟ್ ಪ್ರೇಮಿಗಳಿಂದಲೇ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

 



Source link

Leave a Reply

Your email address will not be published. Required fields are marked *