Headlines

ವಾಹನ ಸವಾರರೇ ಎಚ್ಚರ: ಏಪ್ರಿಲ್ 1 ರಿಂದ ಟೋಲ್‌ನಲ್ಲಿ ನಗದು ಪಾವತಿ ಬಂದ್; ಫಾಸ್ಟ್​ಟ್ಯಾಗ್ ಇಲ್ಲಾಂದ್ರೆ ನೋ ಎಂಟ್ರಿ!

ವಾಹನ ಸವಾರರೇ ಎಚ್ಚರ: ಏಪ್ರಿಲ್ 1 ರಿಂದ ಟೋಲ್‌ನಲ್ಲಿ ನಗದು ಪಾವತಿ ಬಂದ್; ಫಾಸ್ಟ್​ಟ್ಯಾಗ್ ಇಲ್ಲಾಂದ್ರೆ ನೋ ಎಂಟ್ರಿ!


ವಾಹನ ಸವಾರರೇ ಎಚ್ಚರ: ಏಪ್ರಿಲ್ 1 ರಿಂದ ಟೋಲ್‌ನಲ್ಲಿ ನಗದು ಪಾವತಿ ಬಂದ್; ಫಾಸ್ಟ್ಯಾಗ್ ಇಲ್ಲಾಂದ್ರೆ ನೋ ಎಂಟ್ರಿ!

ಬೆಂಗಳೂರು, ನೆಲಮಂಗಲ, ಮಾರ್ಚ್ 30: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವ ವಾಹನ ಸವಾರರಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮಹತ್ವದ ಸೂಚನೆ ನೀಡಿದೆ. ಏಪ್ರಿಲ್ 1, 2026 ರಿಂದ ಜಾರಿಗೆ ಬರುವಂತೆ ಎಲ್ಲಾ ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಗಳಲ್ಲಿ (ಟೋಲ್ ಪ್ಲಾಜಾಗಳು) ನಗದು ಪಾವತಿಯನ್ನು (ನಗದು ಪಾವತಿ) ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ನೆಲಮಂಗಲ ಟೋಲ್ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಾರ್ವಜನಿಕ ಪ್ರಕಟಣೆಯ ಫಲಕಗಳನ್ನು ಹಾಕಲಾಗಿದೆ.

ಏನೇನು ಬದಲಾವಣೆ?

ಹೊಸ ನಿಯಮದ ಪ್ರಕಾರ, ಟೋಲ್ ಬೂಟ್‌ಗಳಲ್ಲಿ ನಗದು ಪಡೆಯಲಾಗುವುದಿಲ್ಲ. ಸುಗಮ ಪ್ರಯಾಣಕ್ಕಾಗಿ ಕಡ್ಡಾಯವಾಗಿ ಫಾಸ್ಟಾಗ್ ಅಥವಾ ಯುಪಿಐ ಮೂಲಕವೇ ಪಾವತಿ ಮಾಡಬೇಕಾಗಿದೆ. ಏಪ್ರಿಲ್ 15 ರಿಂದ ಫಾಸ್ಟಾಗ್ ಸ್ಕ್ಯಾನ್ ಆಗದಿದ್ದರೆ ಸಿಬ್ಬಂದಿ ಮ್ಯಾನುಯಲ್ ಆಗಿ ವಾಹನ ಸಂಖ್ಯೆಯನ್ನು ನಮೂದಿಸಿ ಟೋಲ್ ಪಡೆಯುವುದನ್ನು ರದ್ದುಗೊಳಿಸಲಾಗಿದೆ. ಕೇವಲ ಆಟೋಮ್ಯಾಟಿಕ್ ಫಾಸ್ಟ್‌ಟ್ಯಾಗ್ ರೀಡರ್ ಮೂಲಕ ಮಾತ್ರ ಪಾವತಿಗೆ ಅವಕಾಶವಿದೆ. ನೆಲಮಂಗಲ-ಹಾಸನ ಹಾಗೂ ಬೆಂಗಳೂರು-ತುಮಕೂರು-ಪುಣೆ ರಸ್ತೆಯ ಟೋಲ್ ಪ್ಲಾಜಾಗಳಲ್ಲಿ ಹೊಸ ನಿಯಮದ ಬಗ್ಗೆ ದೊಡ್ಡ ಫಲಕಗಳಲ್ಲಿ ಮಾಹಿತಿ ನೀಡಲಾಗುತ್ತದೆ.

ಹೀಗಾಗಿ ವಾಹನ ಸವಾರರು ತಮ್ಮ ಫಾಸ್ಟ್‌ಟ್ಯಾಗ್ ಸಕ್ರಿಯವಾಗಿದೆ ಮತ್ತು ಅದಕ್ಕೆ ಪೂರಕವಾದ ಬ್ಯಾಲೆನ್ಸ್ ಇದೆಯೇ ಎಂದು ಖಚಿತಪಡಿಸಿಕೊಳ್ಳಲು ರಸ್ತೆಗಿಳಿಯುವುದು ಉತ್ತಮ.

ವರದಿ: ಮಂಜುನಾಥ್, ಟಿವಿ9 ನೆಲಮಂಗಲ

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *