’ಕರ್ನಾಟಕ ರತ್ನ’ ಖ್ಯಾತಿಯ ʻಸಾಹಸ ಸಿಂಹʼ ಡಾ. ವಿಷ್ಣುವರ್ಧನ್ ಮೊಮ್ಮಗ ಜ್ಯೇಷ್ಠವರ್ಧನ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ವಿಷ್ಣುವರ್ಧನ್ ಅಳಿಯ ನಟ ಅನಿರುದ್ಧ್ ಜತ್ಕರ್ ಮಗನಾಗಿರುವ ಜ್ಯೇಷ್ಠ, ಕುಟುಂಬದ ಪರಂಪರೆ ಎಂಬಂತೆ ನೇರವಾಗಿ ನಟನೆಗೆ ಇಳಿಯಲಿಲ್ಲ.

’ಕರ್ನಾಟಕ ರತ್ನ’ ಖ್ಯಾತಿಯ ʻಸಾಹಸ ಸಿಂಹʼ ಡಾ. ವಿಷ್ಣುವರ್ಧನ್ (Dr Vishnuvardhan) ಅವರ ಮೊಮ್ಮಗ ಜ್ಯೇಷ್ಠವರ್ಧನ್ (Jyesta Vardhan) ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ವಿಷ್ಣುವರ್ಧನ್ ಅಳಿಯ ನಟ ಅನಿರುದ್ಧ್ ಜತ್ಕರ್ ಮಗನಾಗಿರುವ ಜ್ಯೇಷ್ಠ, ಕುಟುಂಬದ ಪರಂಪರೆ ಎಂಬಂತೆ ನೇರವಾಗಿ ನಟನೆಗೆ ಇಳಿಯದೆ ಕಳೆದ ಹಲವು ವರ್ಷಗಳಿಂದ ನೃತ್ಯ ಮತ್ತು ನಟನೆಯಲ್ಲಿ ಸಾಕಷ್ಟು ತರಬೇತಿ ಪಡೆದಿದ್ದಾರೆ.

ನಟ ಅನಿರುದ್ಧ್ ಜತ್ಕರ್ ಪುತ್ರ, ಸಾಹಸ ಸಿಂಹʼ ಡಾ. ವಿಷ್ಣುವರ್ಧನ್ – ಭಾರತಿ ವಿಷ್ಣುವರ್ಧನ್ ಅವರ ಮೊಮ್ಮಗ, ಜ್ಯೇಷ್ಠವರ್ಧನ್ ಈಗ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ವಿಷ್ಣು ಮೊಮ್ಮಗ ಕನ್ನಡ ಚಿತ್ರರಂಗಕ್ಕೆ ಪ್ರವೇಶ ನೀಡಲಿದ್ದಾರೆ ಎಂಬ ಮಾತುಗಳು ಕಳೆದ ಹಲವು ಕಾಲಗಳಿಂದ ಕೇಳಿಬರುತ್ತಿದ್ದವು. ಆದರೆ ಆ ಬಗ್ಗೆ ಹೆಚ್ಚಿನ ಮಾಹಿತಿ ಲಭಿಸಿರಲಿಲ್ಲ. ಈಗ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಕ್ಕಿದೆ. ಜ್ಯೇಷ್ಠವರ್ಧನ್ ಯಾವುದೇ ಅವಸರ ಮಾಡದೆ, ತಾಳ್ಮೆಯಿಂದಲೇ ತಮ್ಮ ಹಾದಿಯನ್ನು ರೂಪಿಸಿಕೊಳ್ಳುತ್ತಿದ್ದಾರೆ.

ನೇರವಾಗಿ ನಟನೆಗೆ ಇಳಿಯದ ಜ್ಯೇಷ್ಠವರ್ಧನ್

ಈ ಮೊದಲು ‘ರಾಜಹಂಸ’ ಚಿತ್ರದಲ್ಲಿ ಬಾಲನಟನಾಗಿ ಕ್ಯಾಮರಾ ಎದುರಿಸಿದ್ದರೂ, ಜ್ಯೇಷ್ಠವರ್ಧನ್ ತಕ್ಷಣವೇ ಪೂರ್ಣಪ್ರಮಾಣದ ನಟನಾಗಲು ಬಯಸಲಿಲ್ಲ. ಬದಲಿಗೆ, ಕಳೆದ ಹತ್ತು ವರ್ಷಗಳಿಂದ ನಟನೆಯ ಜೊತೆಗೆ ನೃತ್ಯವನ್ನು ಕಲಿಯುತ್ತಾ ಬಂದಿದ್ದಾರೆ. ‘ಆದಿ ಶಕ್ತಿ ಥಿಯೇಟರ್’ನಲ್ಲಿ ನಟನಾ ತರಬೇತಿ, ‘ರಂಗಶಂಕರ’ದಲ್ಲಿ ಕಾರ್ಯಾಗಾರಗಳು ಹಾಗೂ ಗೌರಿ ದತ್ತು ಅವರ ಮಾರ್ಗದರ್ಶನದಲ್ಲಿ ನಟನೆಯ ವಿವಿಧ ತಂತ್ರಗಳನ್ನು ಕರಗತ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಹೇಳಿಕೊಂಡಿರುವ ಜ್ಯೇಷ್ಠವರ್ಧನ್ "ನಟನೆಯ ಪ್ರಕ್ರಿಯೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ನೇರವಾಗಿ ನಟನೆಗೆ ಇಳಿಯಲು ನನಗೆ ಇಷ್ಟವಿರಲಿಲ್ಲ. ನಾನು ಕೇವಲ ಪರದೆಯ ಮೇಲೆ ಕಾಣಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ, ಸಂಪೂರ್ಣ ಸಿದ್ಧನಾಗಿ ಬರಲು ಬಯಸಿದ್ದೆ" ಎಂದಿದ್ದಾರೆ ಜ್ಯೇಷ್ಠವರ್ಧನ್.

ಬೆಳ್ಳಿತೆರೆಗೆ ನಾನು ಪ್ರಾಮಾಣಿಕ ಆಗಿರಬೇಕು

’ನಮ್ಮ ಮನೆಯಲ್ಲಿ ಪ್ರತಿದಿನವೂ ಸಿನಿಮಾ ಕುರಿತ ಚರ್ಚೆಗಳೇ ನಡೆಯುತ್ತಿದ್ದರಿಂದ ಬಣ್ಣದ ಲೋಕದೆಡೆಗೆ ಸಹಜವಾಗಿ ನಾನು ಆಕರ್ಷಿತನಾದೆ. ಸಿನಿಮಾ ಕ್ಷೇತ್ರದಲ್ಲಿ ನಾನು ಯಾವುದೇ ಹಾದಿ ಆಯ್ದುಕೊಂಡರೂ ನನ್ನ ಕುಟುಂಬದ ಬೆಂಬಲ ಸದಾ ಇರುತ್ತದೆ. ನಮ್ಮ ಮನೆಯವರು, ಬೆಳ್ಳಿತೆರೆಗೆ ಯಾವಾಗಲೂ ಪ್ರಾಮಾಣಿಕವಾಗಿರು, ಕಠಿಣ ಪರಿಶ್ರಮವೊಂದೇ ಎಂದಿಗೂ ಕೈಹಿಡಿಯುವುದು ಅಂತ ಹೇಳಿದ್ದಾರೆ. ಅದನ್ನೆ ನಾನು ಫಾಲೋ ಮಾಡುತ್ತಿದ್ದೇನೆ" ಎಂದು ಜ್ಯೇಷ್ಠವರ್ಧನ್ ತಿಳಿಸಿದ್ದಾರೆ.

ಹೊಸ ಕಥೆಗಳನ್ನ ಕೇಳುತ್ತಿರುವ ಜ್ಯೇಷ್ಠವರ್ಧನ್

ಜ್ಯೇಷ್ಠವರ್ಧನ್ ಕೇವಲ ನಟನೆ ಮಾತ್ರವಲ್ಲದೆ, ಸಿನಿಮಾ ನಿರ್ಮಾಣ ಸೇರಿದಂತೆ ಇನ್ನಿತರ ಮಗ್ಗುಲುಗಳ ಬಗ್ಗೆಯೂ ಆಸಕ್ತಿಯನ್ನು ಹೊಂದಿದ್ದಾರೆ. "ಸಿನಿಮಾ ಬರವಣಿಗೆ, ಸಿನಿಮಾಟೋಗ್ರಫಿ ಹೀಗೆ ಎಲ್ಲದರ ಬಗ್ಗೆಯೂ ನನಗೆ ಕುತೂಹಲವಿದೆ. ಓದುತ್ತಿರುವಾಗಲೇ ನಾನು ಸಿನಿಮಾರಂಗದಲ್ಲೇ ಮುಂದುವರಿಯಬೇಕು ಅಂತ ನಿರ್ಧರಿಸಿದೆ’ ಎಂದಿದ್ದಾರೆ.

ಜೊತೆಗೆ, ‘ಸದ್ಯ ಬಹಳಷ್ಟು ಮುಖ್ಯ ಅಂಶಗಳೂ ಇರುವ ಒಂದು ಉತ್ತಮ ಕಥೆಯ ಹುಡುಕಾಟದಲ್ಲಿದ್ದೇವೆ" ಎಂದು ಜ್ಯೇಷ್ಠವರ್ಧನ್ ತಿಳಿಸಿದ್ದಾರೆ. ಅಂದಹಾಗೆ, ಜ್ಯೇಷ್ಠವರ್ಧನ್ ಸದ್ಯ ಪಬ್ಲಿಕೇಶನ್ ಮತ್ತು ಅಡ್ವರ್ಟೈಸಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ. 2026ರಲ್ಲಿಯೇ ತಮ್ಮ ಮೊದಲ ಸಿನಮಾವನ್ನು ಫೈನಲ್ ಮಾಡುವ ನಿರ್ಧಾರದಲ್ಲಿದ್ದು, ಈಗಾಗಲೇ ಕಥೆಗಳನ್ನು ಕೂಡ ಕೇಳುತ್ತಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಹೇಳಿಕೆ ನೀಡಿದ ಜ್ಯೇಷ್ಠವರ್ಧನ್ "ನನ್ನ ಮೊದಲ ಸಿನಿಮಾ ಯಾವುದೇ ಒಂದು ನಿರ್ದಿಷ್ಟ ಜಾನರ್‌ಗೆ ಸೀಮಿತವಾಗಬಾರದು. ಆ ಸಿನಿಮಾ ಎಲ್ಲರಿಗೂ ಕನೆಕ್ಟ್ ಆಗುವಂತಿರಬೇಕು. ಹೆಚ್ಚಿನ ಮನೆಗಳಲ್ಲಿ ನನ್ನ ವಯಸ್ಸಿನ ಹುಡುಗರಿಗೆ ‘ಓದು’ ಎಂದು ಹೇಳಿದರೆ, ನಮ್ಮ ಮನೆಯಲ್ಲಿ ಮಾತ್ರ ‘ಸಿನಿಮಾ ನೋಡು’ ಎಂದು ಪ್ರೋತ್ಸಾಹಿಸುತ್ತಾರೆ ಮತ್ತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಅದೇ ನನ್ನ ಮೊದಲ ಕ್ಲಾಸ್‌ರೂಮ್" ಎಂದು ಜ್ಯೇಷ್ಠವರ್ಧನ್ ಹೇಳುತ್ತಾರೆ.

ಜ್ಯೇಷ್ಠವರ್ಧನ್ ಅವರಿಗೆ ವಿಷ್ಣು ಅವರ ‘ಆಪ್ತಮಿತ್ರ’ ಹಾಗೂ ಭಾರತಿ ಅವರ ‘ಬಂಗಾರದ ಮನುಷ್ಯ’ ಸಿನಿಮಾಗಳು ಇಷ್ಟವಂತೆ. ಹಾಗೆ ತಂದೆ ಅನಿರುದ್ದ್ ಅವರ ‘ನೀನೆಲ್ಲೋ ನಾನಲ್ಲೆ’ ಚಿತ್ರ ಕೂಡ ಮಗ ಜ್ಯೇಷ್ಠಗೆ ಸಖತ್ ಇಷ್ಟವಂತೆ. ಯಶ್, ತಮಿಳಿನ ಸೂರ್ಯ, ಬಾಲಿವುಡ್‌ನ ರಣಬೀರ್ ಕಪೂರ್ ಮತ್ತು ರಣವೀರ್ ಸಿಂಗ್ ಅವರ ನಟನಾ ಶೈಲಿ ಎಂದರೆ ಜ್ಯೇಷ್ಠವರ್ಧನ್‌ಗೆ ಅಚ್ಚುಮೆಚ್ಚು ಎಂಬ ವಿಷಯ ಹೊರಬಿದ್ದಿದೆ.

ಸದ್ಯಕ್ಕೆ ಕಥೆ ಕೇಳುವ, ಸಿನಿಮಾಗೆ ಸಜ್ಜಾಗುತ್ತಿರುವ ಜ್ಯೇಷ್ಠವರ್ಧನ್ ಸದ್ಯದಲ್ಲೇ ಸ್ಯಾಂಡಲ್‌ವುಡ್ ಬೆಳ್ಳಿತೆರೆಯಲ್ಲಿ ಮಿಂಚಲು ಸಜ್ಜಾಗಿದ್ದಾರೆ. ವಿಷ್ಣು ಹಾಗೂ ಅನಿರುದ್ಧ ಫ್ಯಾನ್ಸ್‌ಗಳಿಗೆ ಖುಷಿಯ ಸಮಾಚಾರ ಸದ್ಯದಲ್ಲೇ ಸಿಗಲಿದೆ ಎನ್ನಬಹುದು.

Source link
ಭರ್ಜರಿ ಎಂಟ್ರಿಗೆ ಸಿದ್ಧರಾಗಿ ನಿಂತ ಜ್ಯೇಷ್ಠವರ್ಧನ್.. ಡಾ ವಿಷ್ಣುವರ್ಧನ್ ಮೊಮ್ಮಗನ ಸಿನಿಮಾ ಜರ್ನಿ ಸದ್ಯದಲ್ಲೇ ಶುರು..!