Headlines

‘ಟಾಕ್ಸಿಕ್’ ಚಿತ್ರವನ್ನು ಕಿಯಾರಾ ಒಪ್ಪಿಕೊಂಡಿದ್ದೇಕೆ? ಅಸಲಿ ಕಾರಣ ಬಯಲು

‘ಟಾಕ್ಸಿಕ್’ ಚಿತ್ರವನ್ನು ಕಿಯಾರಾ ಒಪ್ಪಿಕೊಂಡಿದ್ದೇಕೆ? ಅಸಲಿ ಕಾರಣ ಬಯಲು


'ಟಾಕ್ಸಿಕ್' ಚಿತ್ರವನ್ನು ಕಿಯಾರಾ ಒಪ್ಪಿದ್ದೇಕೆ? ಅಸಲಿ ಕಾರಣ ಬಯಲು

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಸೃಷ್ಟಿಯಾಗಿದೆ. ಈ ಸಿನಿಮಾ ಮಾರ್ಚ್ 19 ರಂದು ತೆರೆಗೆ ಬರಬೇಕಿತ್ತು. ಆದರೆ, ಕಾರಣಾಂತರಗಳಿಂದ ಸಿನಿಮಾ ವಿಳಂಬವಾಗಿದೆ. ಈಗ ಸಿನಿಮಾ ಬಗ್ಗೆ ಕಿಯಾರಾ ಅಡ್ವಾಣಿ ಮಾತನಾಡಿದ್ದಾರೆ. ಅವರು ಸಿನಿಮಾ ಒಪ್ಪಿಕೊಂಡ ಕಾರಣವನ್ನು ವಿವರಿಸಿದ್ದಾರೆ.

‘ಟಾಕ್ಸಿಕ್’ ಸಿನಿಮಾದಲ್ಲಿ ಹಲವು ಹೀರೋಯಿನ್‌ಗಳು ನಟಿಸಿದ್ದಾರೆ. ನಯನತಾರಾ, ಕಿಯಾರಾ ಅಡ್ವಾಣಿ ಮೊದಲಾದವರು ಪ್ರಮುಖರು. ಈಗ ರಿಲೀಸ್ ಆಗಿರುವ ಟೀಸರ್ ಹಾಗೂ ಗ್ಲಿಂಪ್ಸ್ ಯಶ್ ಅವರನ್ನು ಗಮನದಲ್ಲಿಟ್ಟುಕೊಂಡಿದ್ದಾರೆ. ಸಿನಿಮಾ ರಿಲೀಸ್ ಪೋಸ್ಟ್ ಆಗುವುದಕ್ಕೂ ಮೊದಲು ‘ಟಾಕ್ಸಿಕ್’ ಸಿನಿಮಾದ ಸಾಂಗ್ ರಿಲೀಸ್ ಆಗುತ್ತಿದೆ. ಕಿಯಾರಾ ಹಾಗೂ ಯಶ್ ಒಟ್ಟಾಗಿ ನಟಿಸಿದ ಹಾಡಿನ ಲಿರಿಕಲ್ ವಿಡಿಯೋ ಇದಾಗಿತ್ತು.

ಈಗ ಕಿಯಾರಾ ತಮ್ಮ ಪಾತ್ರದ ಬಗ್ಗೆ ವಿವರಣೆ. ‘ನಾನು ಈವರೆಗೆ ನೋಡಿದ ಭಿನ್ನ ಪಾತ್ರಗಳಲ್ಲಿ ನಾಡಿಯಾ ಕೂಡ ಒಂದು. ನಮ್ಮ ನಿರ್ದೇಶಕಿ ಗಿತು ಮೋಹನ್ ದಾಸ್ ಪಾತ್ರವನ್ನು ಬರೆದ ರೀತಿ ಹಾಗೂ ಪಾತ್ರವನ್ನು ಕೆತ್ತಿದ ರೀತಿ ನನಗೆ ಇಷ್ಟವಾಯಿತು. ನಾನು ಆ ಚಾಲೆಂಜ್‌ನ ಸ್ವೀಕರಿಸಬೇಕು ಎನಿಸಿತು. ಅವರ ಆಲೋಚನೆಯಲ್ಲಿ ನನ್ನ ಪಾತ್ರವನ್ನು ಹೇಗೆ ನಿರ್ವಹಿಸುತ್ತಿದ್ದೀರಿ ನೀವೇ ನೋಡಿ’ ಎಂದು ಕಿಯಾರಾ ಕೋರಿದ್ದಾರೆ.

ಇತ್ತೀಚೆಗೆ ರಿಲೀಸ್ ಆದ ‘ಟಾಕ್ಸಿಕ್’ ಚಿತ್ರದ ‘ತಬಾಹಿ’ ಹಾಡು ಎಲ್ಲರ ಮೆಚ್ಚುಗೆ ಪಡೆದಿದೆ. ಈ ಹಾಡಿನ ವಿಡಿಯೋ ಕೂಡ ರಿಲೀಸ್ ಆಗಬೇಕಿತ್ತು ಎಂದು ಅಭಿಮಾನಿಗಳು ಬಯಸಿದ್ದರು. ಶೀಘ್ರವೇ ಅದನ್ನು ರಿಲೀಸ್ ಮಾಡುವ ತಂಡಕ್ಕೆ ಇದೆ. ವಿಶಾಲ್ ಮಿಶ್ರಾ ಅವರು ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ಇದನ್ನೂ ಓದಿ: ‘ಜನ ನಾಯಕನ್’ ಮೇಲಿನ ಆಸೆ ಬಿಟ್ಟ ಕೆವಿಎನ್, ಗಮನವೆಲ್ಲ ‘ಟಾಕ್ಸಿಕ್’ ಮೇಲೆ

ಯೋಗರಾಜ್ ಭಟ್ ಅವರು ಸಾಹಿತ್ಯ ಬರೆದಿದ್ದಾರೆ. ಈ ಸಿನಿಮಾ ಜೂನ್ 4 ರಂದು ರಿಲೀಸ್ ಆಗಲಿದೆ. ಮಲೆಯಾಳನ್ನ ಗೀತು ಮೋಹನ್ ದಾಸ್ ನಿರ್ದೇಶನ ಮಾಡಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.

 



Source link

Leave a Reply

Your email address will not be published. Required fields are marked *