Health tips PCOD ಒಂದು ಸಾಮಾನ್ಯ ಸಮಸ್ಯೆ ಆಗಿದ್ದರೂ ಅದನ್ನು ನಿರ್ಲಕ್ಷ್ಯ ಮಾಡಿದರೆ ಅದು ಗಂಭೀರವಾಗಬಹುದು. ನಿಮ್ಮ ದೇಹ ನೀಡುವ ಸಣ್ಣ ಸೂಚನೆಗಳನ್ನೂ ಗಮನಿಸಿ—ಸಮಯಕ್ಕೆ ಚಿಕಿತ್ಸೆ ಪಡೆದರೆ ಆರೋಗ್ಯಕರ ಜೀವನ ನಡೆಸಬಹುದು.

ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ವೇಗವಾಗಿ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ PCOD (Polycystic Ovarian Disease) ಪ್ರಮುಖವಾಗಿದೆ. ಇದು ಒಂದು ಹಾರ್ಮೋನಲ್ ಸಮಸ್ಯೆಯಾಗಿದ್ದು, ಮುಖ್ಯವಾಗಿ ಅಂಡಾಶಯವನ್ನು (ovary) ಪ್ರಭಾವಿಸುತ್ತದೆ. ಈ ಸಮಸ್ಯೆಯನ್ನು ಸಮಯಕ್ಕೆ ಗುರುತಿಸದಿದ್ದರೆ, ಮುಂದಿನ ದಿನಗಳಲ್ಲಿ ಗರ್ಭಧಾರಣೆಯ ಸಮಸ್ಯೆ ಸೇರಿದಂತೆ ಹಲವು ಆರೋಗ್ಯ ತೊಂದರೆಗಳಿಗೆ ಕಾರಣವಾಗಬಹುದು.

ಈ ಲಕ್ಷಣಗಳು ಕಾಣಿಸಿದ್ರೆ ಎಚ್ಚರವಾಗಿರಿ

ಮಾಸಿಕ ಧರ್ಮ (Periods) ಅಸಮಂಜಸವಾಗುವುದು

ತೂಕ ಹೆಚ್ಚಾಗುವುದು ಅಥವಾ ತಗ್ಗಿಸಲು ಕಷ್ಟವಾಗುವುದು

ಮುಖದಲ್ಲಿ ಹೆಚ್ಚು ಮೊಡವೆ (acne)

ಮುಖ ಅಥವಾ ದೇಹದಲ್ಲಿ ಅತಿಯಾಗಿ ಕೂದಲು ಬೆಳೆಯುವುದು

ತಲೆ ಕೂದಲು ಕಡಿಮೆಯಾಗುವುದು (hair fall)

ಗರ್ಭಧಾರಣೆಯಲ್ಲಿ ತೊಂದರೆ ಕಾಣಿಸಿಕೊಳ್ಳುವುದು

ಈ ಲಕ್ಷಣಗಳನ್ನು ಲೈಟ್ ಆಗಿ ತೆಗೆದುಕೊಳ್ಳುವುದು ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆ ಆಗಬಹುದು.

ಇದು ಸಾಮಾನ್ಯವಾಗಿ ಜೀವನಶೈಲಿ ಮತ್ತು ಹಾರ್ಮೋನ್ ಅಸಮತೋಲನದಿಂದ ಉಂಟಾಗುತ್ತದೆ

ಅಸ್ವಸ್ಥ ಆಹಾರ ಪದ್ಧತಿ (junk food, oily food)

ವ್ಯಾಯಾಮದ ಕೊರತೆ

ಒತ್ತಡ (stress)

ಹಾರ್ಮೋನಲ್ ಅಸಮತೋಲನ

ತೂಕ ಹೆಚ್ಚಾಗುವುದು

ಇವುಗಳ ಪರಿಣಾಮವಾಗಿ ಅಂಡಾಶಯದಲ್ಲಿ ಸಣ್ಣ ಸಿಸ್ಟ್‌ಗಳು (cysts) ನಿರ್ಮಾಣವಾಗುತ್ತವೆ.

PCOD ಸಂಪೂರ್ಣವಾಗಿ ಗುಣವಾಗದಿದ್ದರೂ, ನಿಯಂತ್ರಣದಲ್ಲಿರಿಸಬಹುದು

ಪ್ರತಿದಿನ ವ್ಯಾಯಾಮ ಮಾಡುವುದು

ಹಣ್ಣು, ತರಕಾರಿ ಮತ್ತು ಪೌಷ್ಟಿಕ ಆಹಾರ ಸೇವಿಸುವುದು

ಜಂಕ್ ಫುಡ್ ಮತ್ತು ಎಣ್ಣೆಯ ಆಹಾರ ಕಡಿಮೆ ಮಾಡುವುದು

ತೂಕ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು

ವೈದ್ಯರ ಸಲಹೆ ಪಡೆದು ಚಿಕಿತ್ಸೆ ಪಡೆಯುವುದು

Source link
PCOD ಈ ಲಕ್ಷಣಗಳು ಕಂಡ್ರೆ ಲೈಟ್ ಆಗಿ ತೆಗೆದುಕೊಳ್ಳಬೇಡಿ… ಗರ್ಭಧಾರಣೆಯ ಸಮಸ್ಯೆ ಬರಬಹುದು