ಬಂದ ಒಂದೇ ವಾರಕ್ಕೆ ಹೆಚ್ಚಿಗೆ ಬಾಡಿಗೆ ಕೇಳಿದ ಮನೆ ಮಾಲೀಕ: ಸೌಟು, ಚಾಕು ಹಿಡಿದು ಹೊಡೆದಾಟ

ಬಂದ ಒಂದೇ ವಾರಕ್ಕೆ ಹೆಚ್ಚಿಗೆ ಬಾಡಿಗೆ ಕೇಳಿದ ಮನೆ ಮಾಲೀಕ: ಸೌಟು, ಚಾಕು ಹಿಡಿದು ಹೊಡೆದಾಟ


ಬಂದ ಒಂದೇ ವಾರಕ್ಕೆ ಹೆಚ್ಚಿಗೆ ಬಾಡಿಗೆ ಕೇಳಿದ ಮನೆ ಮಾಲೀಕ: ಸೌಟು, ಚಾಕು ಹಿಡಿದು ಹೊಡೆದಾಟ

ಬೆಂಗಳೂರು, ಮಾರ್ಚ್ 30: ಉತ್ತರ ಪ್ರದೇಶದ ಕುಟುಂಬವೊಂದು ಬದುಕು ಕಟ್ಟಿಕೊಳ್ಳುವುದಕ್ಕೆ ಅಂತಾ ಬೆಂಗಳೂರಿಗೆ ಆಗಮಿಸಿದ್ದರು. ಸಿಲಿಕಾನ್ ಸಿಟಿಯ ಗಲ್ಲಿಗಲ್ಲಿ ವಾಸಿಸಲು ಮನೆಗಾಗಿ ಹುಡುಕಾಡಿದ್ದಾರೆ. ಸಿಕ್ಕ ಮನೆಯಲ್ಲಿ ಒಂದು ವಾರವಿದ್ದರೂ ಅಷ್ಟೇ, ಅಷ್ಟರಲ್ಲೇ ಮನೆ ಮಾಲೀಕ ಕ್ಯಾತೆ ತೆಗೆದಿದ್ದಾರೆ. ಬಾಡಿಗೆ ಜಾಸ್ತಿ ಕೊಡಿ ಎಂದು ದುಂಬಾಲು ಬಿದ್ದಿದ್ದಾರೆ. ಇದೇ ವಿಚಾರ ಪರಸ್ಪರ ಹೊಡೆದಾಡಿಕೊಳ್ಳುವ (ಘರ್ಷಣೆ) ಮಟ್ಟಕ್ಕೆ ಹೋಗಿದೆ. ಈ ಜೀವನಭೀಮಾ ನಗರದ ಕೋಡಿಹಳ್ಳಿಯಲ್ಲಿ ಮಾರ್ಚ್ 29 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ನಡೆದದ್ದೇನು?

ಉತ್ತರ ಪ್ರದೇಶದ ಸಹೋದರರಾದ ನರೇಶ್, ಸಚಿನ್ ಮತ್ತು ಹೋದರಿ ರೇಖಾ. ಬೆಂಗಳೂರಿಗೆ ಬಂದು ಸಣ್ಣಪುಟ್ಟ ಕೆಲಸ ಮಾಡ್ಕೊಂಡು ಬದುಕು ನಡೆಸಿಕೊಂಡು. ಹಾಗೆ ಬೆಂಗಳೂರಿನಲ್ಲಿರಲು ಒಂದು ಬಾಡಿಗೆ ಮನೆಯ ಹುಡುಗ್ತಿದ್ದ ಇವರಿಗೆ ಶೋಭಾ ಮತ್ತು ದೇವರಾಜ್ ಎಂಬುವವರ ಬಿಲ್ಡಿಂಗ್ ನಲ್ಲಿ 1RK ಮನೆ ಸಿಕ್ಕಿತ್ತು. ಬಾಡಿಗೆ 8 ಸಾವಿರ ರೂ ಒಪ್ಪಂದವಾಗಿತ್ತು. ಮಾರ್ಚ್ 24ರಂದು ಬಂದ ಇವರಿಗೆ ಮನೆಯಿಂದ ಕಿರುಕುಳ ಶುರುವಾಗಿದೆ. ಗ್ಯಾಸ್ ರೇಟ್ ಜಾಸ್ತಿ ಆಗಿದೆ. ವಾಟರ್ ಬಿಲ್ ಜಾಸ್ತಿ ಆಗಿದೆಯಂತೆ, ಇಲ್ಲದಿದ್ದರೆ 10 ಸಾವಿರ ರೂ ಬಾಡಿಗೆ ನೀಡುವಂತೆ ಒತ್ತಾಯಿಸಲು ಪ್ರಾರಂಭಿಸಿದೆ. ಇಲ್ಲದಿದ್ದರೆ ಮನೆ ಖಾಲಿ ಮಾಡಲು ಹೇಳಿದ್ದರಂತೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ವಿನಾ ಕಾರಣ ಬೈಕ್ ತಡೆದು ಹಣ ವಸೂಲಿ: ಮೂವರು ಪೊಲೀಸರು ಸಸ್ಪೆಂಡ್

ಇದಕ್ಕೆ ಬಾಡಿಗೆದಾರರು 15 ದಿನ ಸಮಯವಾದರೂ ನೀಡುವಂತೆ ಕೇಳಿದ್ದಾರೆ. ಒಪ್ಪದೇ ಬಾಡಿಗೆದಾರರು ಮತ್ತು ಮಧ್ಯೆ ಪರಸ್ಪರ ಮಾತುಕತೆ ಬೆಳೆದು ಗಲಾಟೆ ಆಗಿದ್ದು, ಪರಸ್ಪರ ಹಲ್ಲೆ ಕೂಡ ನಡೆದಿದೆ. ಶೋಭಾ ಹಾಗೂ ರೇಖಾ ಜುಟ್ಟು ಹಿಡಿದುಕೊಂಡು ಗುದ್ದಾಡಿ ಕೊಂಡಿದ್ದಾರೆ. ಮನೆಯಲ್ಲಿ ತಮ್ಮ ಆಪ್ತನನ್ನು ಕರೆಸಿ ಬಾಡಿದಾರರ ಮೇಲೆ ಹಲ್ಲೆ ಮಾಡಿಸಿರುವ ಆರೋಪ ಕೇಳಿ ಬಂದಿದೆ.

ಮನೆ ಎಂದರೆ ಏನು?

ಇತ್ತ ಮನೆ ಹೇಳುವುದೇ ಬೇರೆ. ಬಾಡಿಗೆಗೆ ಅಂತಾ ಬಂದವರು ಆಧಾರ್ ಕಾರ್ಡ್ ಕೊಟ್ಟಿರಲಿಲ್ಲ. ಐದು ದಿನ ಕಳೆದರೂ ಅಗ್ರಿಮೆಂಟ್ ಮಾಡಿರಲಿಲ್ಲ. ನಮಗೆ ಅನುಮಾನ ಬಂದು ಮನೆ ಖಾಲಿ ಮಾಡಲು ಹೇಳಿದ್ದೆವು. ಅಷ್ಟಕ್ಕೆ ಇಷ್ಟು ದೊಡ್ಡ ರಾದ್ಧಾಂತ ಮಾಡಿ ನಮ್ಮ ಮೇಲೆ ಹಲ್ಲೆ ಅಂತಾ ಪ್ರತ್ಯಾರೋಪ ಮಾಡಿದ್ದಾರೆ.

ಇದನ್ನೂ ಓದಿ: ಸಣ್ಣ ವೈವಾಹಿಕ ಜಗಳಗಳು ಅಪರಾಧವಲ್ಲ: ಅತ್ತೆ-ಮಾವ, ನಾದಿನಿ ವಿರುದ್ಧ ಕೇಸ್ ರದ್ದುಗೊಳಿಸಿದ ಹೈಕೋರ್ಟ್

ಘಟನೆಯಲ್ಲಿ ಚಮಚ, ಸೌಟು ಮತ್ತು ಚಾಕುವಿನಿಂದ ಬಡಿದಾಡಿಕೊಂಡಿದ್ದು, ಬಾಡಿಗೆದಾರರ ಮುಖ, ಕೈ ಸೇರಿದಂತೆ ದೇಹದ ಹಲವೆಡೆ ಗಾಯ. ಜೀವನಭೀಮಾನಗರ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರು ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *