ಮದುವೆ ಸುದ್ದಿ ಬಿಟ್ಟು, ಸಿನಿಮಾದ ಗುಡ್ ನ್ಯೂಸ್ ನೀಡಿದ ನಟಿ ಅನುಷ್ಕಾ ಶೆಟ್ಟಿ

ಮದುವೆ ಸುದ್ದಿ ಬಿಟ್ಟು, ಸಿನಿಮಾದ ಗುಡ್ ನ್ಯೂಸ್ ನೀಡಿದ ನಟಿ ಅನುಷ್ಕಾ ಶೆಟ್ಟಿ


ಮದುವೆ ಸುದ್ದಿ ಬಿಟ್ಟು, ಸಿನಿಮಾದ ಗುಡ್ ನ್ಯೂಸ್ ನೀಡಿದ ನಟಿ ಅನುಷ್ಕಾ ಶೆಟ್ಟಿ

ನಟಿ ಅನುಷ್ಕಾ ಶೆಟ್ಟಿ (ಅನುಷ್ಕಾ ಶೆಟ್ಟಿ) ಅವರ ಸಿನಿಮಾಗಳ ಆಯ್ಕೆಯಲ್ಲಿ ಈಗ ಬಹಳ ಚ್ಯೂಸಿ ಆಗಿದ್ದಾರೆ. ಅವರ ನಡುವೆ ಅವರ ಮದುವೆಯ ಬಗ್ಗೆ ಆಗಾಗ ಗಾಸಿಪ್ ಕೇಳುತ್ತಲೇ ಇರುತ್ತದೆ. ಅವರು ಹಸೆಮಣೆ ಏರಲು ಸಜ್ಜಾಗಿದ್ದಾರೆ ಎಂದು ಇತ್ತೀಚೆಗೆ ವದಂತಿ ಹಬ್ಬಿತ್ತು. ಅದಕ್ಕೆ ಅನುಷ್ಕಾ ಶೆಟ್ಟಿ ಕಡೆಯಿಂದ ಸ್ಪಷ್ಟನೆ ಸಿಗಬಹುದು ಎಂದು ಫ್ಯಾನ್ಸ್ ಕಾದಿದ್ದಾರೆ. ಆದರೆ ಮದುವೆ ಬಿಟ್ಟು ಬೇರೊಂದು ಗುಡ್ ನ್ಯೂಸ್ ಸಿಕ್ಕಿದೆ. ಇದು ಅವರ ‘ಕಥನಾರ್’ (ಕಥನಾರ್) ಸಿನಿಮಾಗೆ ಸಂಬಂಧಿಸಿದ ಸಿಹಿ ಸುದ್ದಿ.

ಅನುಷ್ಕಾ ಶೆಟ್ಟಿ ಈಗ ಮತ್ತೊಂದು ಬಿಗ್ ಪ್ರಾಜೆಕ್ಟ್ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ‘ಘಾಟಿ’ ಚಿತ್ರದ ನಂತರ ಅನುಷ್ಕಾ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ‘ಕಥನಾರ್’ ಈಗ ಟ್ರೇಲರ್ ಬಿಡುಗಡೆಗೆ ಸಜ್ಜಾಗಿದೆ. ವಿಶೇಷವೆಂದರೆ, ಈ ಚಿತ್ರದ ಮೂಲಕ ಅನುಷ್ಕಾ ಅವರು ಮೊದಲ ಬಾರಿಗೆ ಮಲಯಾಳಂ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.

‘ಕಥನಾರ್’ ಚಿತ್ರತಂಡವು ಟ್ರೇಲರ್ ಬಿಡುಗಡೆಗೆ ಆರಿಸಿಕೊಂಡಿರುವ ಸಮಯ ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಬೆಳಗ್ಗೆ ಅಥವಾ ಟ್ರೇಲರ್ ಬಿಡುಗಡೆ ಮಾಡುವುದು ವಾಡಿಕೆ. ಆದರೆ, ‘ಕಥನಾರ್’ ಟ್ರೇಲರ್ ಮಾರ್ಚ್ 31 ರ ಮಧ್ಯಾಹ್ನ ಸರಿಯಾಗಿ 1.31ಕ್ಕೆ ಅನಾವರಣಗೊಳ್ಳಲಿದೆ. ಈ ಸಮಯವನ್ನು ಆಯ್ಕೆ ಮಾಡಿಕೊಂಡಿದ್ದರ ಹಿಂದೆ ಯಾವುದಾದರೂ ವಿಶೇಷ ಕಾರಣ ಇದೆ ಎಂದು ಸಿನಿಪ್ರಿಯರು ಚರ್ಚಿಸುತ್ತಿದ್ದಾರೆ.

ರೋಜಿನ್ ಥಾಮಸ್ ನಿರ್ದೇಶನದ ಈ ಡಾರ್ಕ್ ಫ್ಯಾಂಟಸಿ ಡ್ರಾಮಾ ಕಥೆಯುಳ್ಳ ಈ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ಅವರು ನೀಲಿ ಎಂಬ ನಿಗೂಢ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಹಳ ಶೂಟಿಂಗ್ ಹಿಂದೆಯೇ ಮುಗಿದಿದ್ದರೂ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಹೆಚ್ಚು ಸಮಯ ಹಿಡಿಯುತ್ತಿದೆ. ಈ ಟ್ರೇಲರ್ ಜೊತೆಗೆ ಸಿನಿಮಾ ಬಿಡುಗಡೆಯ ದಿನಾಂಕವೂ ಘೋಷಣೆಯಾಗುವ ಸಾಧ್ಯತೆಯಿದೆ.

ಸುಮಾರು 90 ಕೋಟಿ ರೂಪಾಯಿ ವೆಚ್ಚದಲ್ಲಿ ‘ಶ್ರೀ ಗೋಕುಲಂ ಮೂವೀಸ್’ ಈ ಚಿತ್ರವನ್ನು ನಿರ್ಮಿಸಲಾಗಿದೆ. ಚಿತ್ರದಲ್ಲಿ ಮಲಯಾಳಂ ನಟ ಜಯಸೂರ್ಯ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ವಿಶೇಷವೆಂದರೆ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಮತ್ತು ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಅತಿಥಿ ಪಾತ್ರಗಳಲ್ಲಿ ಮಿಂಚಲಿದ್ದಾರೆ. ವಿನೀತ್, ಸ್ಯಾಂಡಿ ಮತ್ತು ನಿತೀಶ್ ಭಾರದ್ವಾಜ್ ಅವರಂತಹ ಪ್ರತಿಭಾವಂತ ನಟರು ಈ ಚಿತ್ರದ ಭಾಗವಾಗಿದ್ದಾರೆ.

ಇದನ್ನೂ ಓದಿ: ಅನುಷ್ಕಾ ಶೆಟ್ಟಿ-ಪ್ರಭಾಸ್ ಕ್ಯೂಟ್ ವಿಡಿಯೋ ಇಲ್ಲಿದೆ ನೋಡಿ

ಕೇವಲ ಮಲೆಯಾಳಂ ಎಂದು ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಹಲವು ಅಂತರಾಷ್ಟ್ರೀಯ ಭಾಷೆಗಳಲ್ಲಿ ‘ಕಥನಾರ್’ ಬಿಡುಗಡೆಯಾಗಲಿದೆ. ರಾಹುಲ್ ಸುಬ್ರಮಣಿಯನ್ ಅವರು ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *