Headlines

ಐಪಿಎಲ್ ಇತಿಹಾಸದಲ್ಲಿ ಮೂವರು ಸ್ಟಾರ್ ಪ್ಲೇಯರ್ ಇಲ್ಲದೆ ಕಣಕ್ಕಿಳಿದ ಸಿಎಸ್‌ಕೆ

ಐಪಿಎಲ್ ಇತಿಹಾಸದಲ್ಲಿ ಮೂವರು ಸ್ಟಾರ್ ಪ್ಲೇಯರ್ ಇಲ್ಲದೆ ಕಣಕ್ಕಿಳಿದ ಸಿಎಸ್‌ಕೆ

ಐಪಿಎಲ್ ಇತಿಹಾಸದಲ್ಲಿ ಮೂವರು ಸ್ಟಾರ್ ಪ್ಲೇಯರ್ ಇಲ್ಲದೆ ಕಣಕ್ಕಿಳಿದ ಸಿಎಸ್‌ಕೆ

ಐಪಿಎಲ್ ಇತಿಹಾಸದಲ್ಲಿ ಮೂವರು ಸ್ಟಾರ್ ಪ್ಲೇಯರ್ ಇಲ್ಲದೆ ಕಣಕ್ಕಿಳಿದ ಸಿಎಸ್‌ಕೆ, 2008ರಿಂದ 2025ರ ವರೆಗೆ ಈ ಮೂವರು ಸ್ಟಾರ್ ಪ್ಲೇಯರ್ ಪೈಕಿ ಒಬ್ಬರಾದರೂ ಪ್ಲೇಯಿಂಗ್ 11ನಲ್ಲಿ ಇದ್ದೇ ಇರುತ್ತಿದ್ದರು. ಇದೀಗ ಮೂವರೂ ಇಲ್ಲ.

ಐಪಿಎಲ್ 2026 ಟೂರ್ನಿಯಲ್ಲಿ ಸಿಎಸ್‌ಕೆ ಹಾಗೂ ರಾಜಸ್ಥಾನ ರಾಯಲ್ಸ್ ಪಂದ್ಯದಲ್ಲಿ ಕೆಲ ಅಂಕಿ ಅಂಶಗಳು ಅಭಿಮಾನಿಗಳನ್ನು ಅಚ್ಚರಿಗೊಳಿಸಿದೆ. 2008ರಲ್ಲಿ ಐಪಿಎಲ್ ಅದ್ಧೂರಿಯಾಗಿ ಆರಂಭಗೊಂಡು ಪ್ರತಿ ವರ್ಷ ಕ್ರಿಕೆಟ್ ಅಭಿಮಾನಿಗಳನ್ನು ಆಕರ್ಷಿಸುತ್ತಾ ಹೋಗಿದೆ. ಇದರ ನಡುವೆ ಹಲವು ಬದಲಾವಣೆಗಳು ಆಗಿದೆ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ಲೇಯಿಂಗ್ 11ನಲ್ಲಿ ಮೂವರು ಸ್ಟಾರ್ ಪ್ಲೇಯರ್ಸ್ ಖಾಯಂ ಆಗಿದ್ದರು. ಆದರೆ ಮೊದಲ ಬಾರಿಗೆ ಈ ಮೂವರು ಪ್ಲೇಯರ್ಸ್ ಇಲ್ಲದೆ ಸಿಎಸ್‌ಕೆ ಮೊದಲ ಬಾರಿಗೆ ಕಣಕ್ಕಿಳಿದಿದೆ.

ಸಿಎಸ್‌ಕೆ ತಂಡದ ಈ ಮೂವರು ಸ್ಟಾರ್ ಪ್ಲೇಯರ್ ಎಂಎಸ್ ಧೋನಿ, ಸುರೇಶ್ ರೈನಾ ಹಾಗೂ ರವೀಂದ್ರ ಜಡೇಜಾ. ಈ ಮೂವರ ಪೈಕಿ ಪ್ಲೇಯಿಂಗ್ 11ನಲ್ಲಿ ಒಬ್ಬರಲ್ಲಾ ಮತ್ತೊಬ್ಬರು ಇದ್ದೇ ಇರುತ್ತಿದ್ದರು. ಆದರೆ 2026ರ ಮೊದಲ ಪಂದ್ಯದಲ್ಲಿ ಮೂವರು ಇಲ್ಲ.

ಎಂಎಸ್ ಧೋನಿ ಹಾಗೂ ಸುರೇಶ್ ರೈನಾ ಇಬ್ಬರು ಸಿಎಸ್‍ಕೆ ತಂಡದಲ್ಲಿ ಆರಂಭದಿಂದಲೂ ಭಾಗವಾಗಿದ್ದರು. ರವೀಂದ್ರ ಜಡೇಜಾ ಬಳಿಕ ಆಕ್ಷನ್ ಮೂಲಕ ತಂಡ ಸೇರಿಕೊಂಡಿದ್ದರು. 2022ರಲ್ಲಿ ಸುರೇಶ್ ರೈನಾ ವಿದಾಯ ಹೇಳಿದರೂ ಎಂಎಸ್ ಧೋನಿ ಅಥವಾ ರವೀಂದ್ರ ಜಡೇಜಾ ಸಿಎಸ್‌ಕೆ ಪ್ಲೇಯಿಂಗ್ ಇಲೆವೆನ್ ಭಾಗವಾಗಿದ್ದರು.

2026ರ ಐಪಿಎಲ್ ಟೂರ್ನಿಯಲ್ಲಿ ಸಿಎಸ್‌ಕೆ ಕಣಕ್ಕಿಳಿದಿದೆ. ಆದರೆ ಎಂಎಸ್ ಧೋನಿ ಗಾಯಗೊಂಡು ತಂಡದಿಂದ ಹೊರಗುಳಿದಿದ್ದಾರೆ. ಇತ್ತ ರವೀಂದ್ರ ಜಡೇಜಾ ಈ ಬಾರಿಯ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಸೇರಿಕೊಂಡಿದ್ದಾರೆ. ಹೀಗಾಗಿ ಈ ಬಾರಿ ಧೋನಿ ಲಭ್ಯವಿಲ್ಲ, ಜಡೇಜಾ ತಂಡದಲ್ಲಿಲ್ಲ.

ಧೋನಿ ನಾಯಕತ್ವದ ಸಿಎಸ್‌ಕೆ ತಂಡ ಒಟ್ಟು 10 ಬಾರಿ ಫೈನಲ್ ಪ್ರವೇಶಿಸಿದೆ. ಈ ಪೈಕಿ 5 ಬಾರಿ ಟ್ರೋಫಿ ಗೆದ್ದುಕೊಂಡಿದೆ. ಒಟ್ಟು 12 ಬಾರಿ ಪ್ಲೇಆಫ್ ಸುತ್ತು ಪ್ರವೇಶಿಸಿದೆ. ವಿಕೆಟ್ ಕೀಪಿಂಗ್‌ನಲ್ಲಿ 200 ಸ್ಟಂಪ್ಸ್ ದಾಖಲೆ ಬರೆದಿದ್ದರೆ, 5000 ರನ್ ಗಡಿ ದಾಟಿದ್ದಾರೆ. ಧೋನಿ ಸಿಎಸ್‌ಕೆ ನಾಯಕತ್ವ ತ್ಯಜಿಸಿದ ಬಳಿಕ ರುತುರಾಜ್ ಗಾಯಕ್ವಾಡ್ ನಾಯಕತ್ವ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಧೋನಿ ನಾಯಕತ್ವ ಸಾಧನೆ

Source link

Leave a Reply

Your email address will not be published. Required fields are marked *