Headlines

ಮುಸ್ಲಿಂ ಆಗಿದ್ದ ತಾಯಿಯ ಅಂತ್ಯಕ್ರಿಯೆ ಹಿಂದೂ ಸಂಪ್ರದಾಯದಂತೆ ಮಾಡಿದ ವಿವಾದಕ್ಕೆ ಉತ್ತರ ನೀಡಿದ ನಟ ಝಾಯೆದ್‌ ಖಾನ್‌ | Zayed Khan Responds Backlash Mother Zarine Khan Hindu Last Rites Rituals San

ಮುಸ್ಲಿಂ ಆಗಿದ್ದ ತಾಯಿಯ ಅಂತ್ಯಕ್ರಿಯೆ ಹಿಂದೂ ಸಂಪ್ರದಾಯದಂತೆ ಮಾಡಿದ ವಿವಾದಕ್ಕೆ ಉತ್ತರ ನೀಡಿದ ನಟ ಝಾಯೆದ್‌ ಖಾನ್‌ | Zayed Khan Responds Backlash Mother Zarine Khan Hindu Last Rites Rituals San



ಮುಸ್ಲಿಂ ಆಗಿದ್ದ ತಾಯಿಯ ಅಂತ್ಯಕ್ರಿಯೆ ಹಿಂದೂ ಸಂಪ್ರದಾಯದಂತೆ ಮಾಡಿದ ವಿವಾದಕ್ಕೆ ಉತ್ತರ ನೀಡಿದ ನಟ ಝಾಯೆದ್‌ ಖಾನ್‌ | Zayed Khan Responds Backlash Mother Zarine Khan Hindu Last Rites Rituals San

ನಟ ಝಾಯೆದ್ ಖಾನ್, ತಮ್ಮ ತಾಯಿ ಜರೀನ್ ಖಾನ್ ಅವರ ಅಂತ್ಯಕ್ರಿಯೆಯನ್ನು ಹಿಂದೂ ಸಂಪ್ರದಾಯದಂತೆ ನಡೆಸಿದ್ದರ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಇದು ತಮ್ಮ ತಾಯಿಯ ಕೊನೆಯ ಆಸೆಯಾಗಿತ್ತು ಎಂದಿರುವ ಅವರು, ನಮ್ಮ ಕುಟುಂಬಕ್ಕೆ ಮಾನವೀಯತೆಯೇ ದೊಡ್ಡ ಧರ್ಮ ಎಂದು ಸ್ಪಷ್ಟಪಡಿಸಿದ್ದಾರೆ.

ಮುಂಬೈ (ಮಾ.30): ಖ್ಯಾತ ನಟ ಸಂಜಯ್ ಖಾನ್ ಅವರ ಪತ್ನಿ ಹಾಗೂ ನಟ ಝಾಯೆದ್ ಖಾನ್ ಅವರ ತಾಯಿ ಜರೀನ್ ಖಾನ್ ಕಳೆದ ವರ್ಷ ನವೆಂಬರ್ 7ರಂದು ವಯೋಸಹಜ ಕಾಯಿಲೆಯಿಂದ 81ನೇ ವಯಸ್ಸಿನಲ್ಲಿ ನಿಧನರಾಗಿದ್ದರು. ಪಾರ್ಸಿ ಮೂಲದವರಾಗಿದ್ದ ಜರೀನ್ ಅವರು ಮುಸ್ಲಿಂ ಕುಟುಂಬಕ್ಕೆ ಸೊಸೆಯಾಗಿ ಬಂದಿದ್ದರು. ಆದರೆ, ಅವರ ಅಂತ್ಯಕ್ರಿಯೆಯನ್ನು ಹಿಂದೂ ಸಂಪ್ರದಾಯದಂತೆ ನಡೆಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಮತ್ತು ಟೀಕೆಗೆ ಗುರಿಯಾಗಿತ್ತು.

ಇತ್ತೀಚಿನ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ ಝಾಯೆದ್ ಖಾನ್, “ನಮ್ಮ ಕುಟುಂಬಕ್ಕೆ ‘ಮಾನವೀಯತೆಯೇ ದೊಡ್ಡ ಧರ್ಮ’. ಧರ್ಮ ಎಂಬುದು ವೈಯಕ್ತಿಕ ವಿಚಾರ. ಅದನ್ನು ಹೇಗೆ ಪಾಲಿಸಬೇಕು ಎಂಬುದು ನಮಗೆ ಬಿಟ್ಟಿದ್ದು. ನಾವು ಅತ್ಯಂತ ಜಾತ್ಯತೀತ ಕುಟುಂಬವಾಗಿದ್ದು, ನಾವು ಮಾಡುವ ಕಾರ್ಯಗಳಿಗೆ ಯಾರಿಗೂ ‘ಯಾಕೆ’ ಎಂದು ವಿವರಣೆ ನೀಡುವ ಅಗತ್ಯವಿಲ್ಲ,” ಎಂದು ಸ್ಪಷ್ಟಪಡಿಸಿದ್ದಾರೆ.

ತಾಯಿಯ ಕೊನೆಯ ಆಸೆ ಏನಿತ್ತು?

ಅಂತ್ಯಕ್ರಿಯೆಯ ವಿಧಿವಿಧಾನಗಳ ಬಗ್ಗೆ ವಿವರಿಸಿದ ಝಾಯೆದ್, ಇದು ತಮ್ಮ ತಾಯಿಯ ಕೊನೆಯ ಇಚ್ಛೆಯಾಗಿತ್ತು ಎಂದು ಬಹಿರಂಗಪಡಿಸಿದ್ದಾರೆ. “ಒಮ್ಮೆ ನದಿಯ ದಡದಲ್ಲಿ ಕುಳಿತಿದ್ದಾಗ ಅವರಿಗೆ ಒಂದು ಆಲೋಚನೆ ಬಂದಿತ್ತು. ‘ನಾನು ಮೃತಪಟ್ಟರೆ ನನ್ನ ಚಿತಾಭಸ್ಮವನ್ನು ಇದೇ ನದಿಯಲ್ಲಿ ಹರಿಸಬೇಕು, ನಾನು ಮುಕ್ತಳಾಗಬೇಕು’ ಎಂದು ಅವರು ಹೇಳಿದ್ದರು. ತಾಯಿಯ ಕೊನೆಯ ಆಸೆಯನ್ನು ಪೂರೈಸುವುದು ಮಕ್ಕಳ ಕರ್ತವ್ಯ,” ಎಂದಿದ್ದಾರೆ.

“ಜನರು ಏನು ಹೇಳುತ್ತಾರೆ ಎಂಬುದು ನಮಗೆ ಮುಖ್ಯವಲ್ಲ. ಅವರು ಎಷ್ಟು ದ್ವೇಷ ಸಾಧಿಸಿದರೂ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ನಾನು ಯಾರನ್ನೂ ದೂಷಿಸುವುದಿಲ್ಲ, ಆದರೆ ಸದ್ಯದ ಪರಿಸ್ಥಿತಿ ಹಾಗಿದೆ. ಇಂತಹ ಸಂಕುಚಿತ ಮನೋಭಾವ ಬದಲಾಗಲು ಸಮಯ ಬೇಕಾಗುತ್ತದೆ,” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಕುಟುಂಬದ ಹಿನ್ನೆಲೆ

ಜರೀನ್ ಖಾನ್ ಅವರು ಪತಿ ಸಂಜಯ್ ಖಾನ್, ಮಕ್ಕಳಾದ ಸುಸೇನ್ ಖಾನ್, ಸೀಮೋನ್ ಅರೋರಾ, ಫರಾ ಅಲಿ ಖಾನ್ ಮತ್ತು ಝಾಯೆದ್ ಖಾನ್ ಅವರನ್ನು ಅಗಲಿದ್ದಾರೆ. ಕಳೆದ ವರ್ಷ ಜುಲೈನಲ್ಲಿ ಸುಸೇನ್ ಖಾನ್ ಅವರು ತಮ್ಮ ತಾಯಿಯ 81ನೇ ಜನ್ಮದಿನವನ್ನು ಬಹಳ ಸಡಗರದಿಂದ ಆಚರಿಸಿದ್ದರು. ಆಗ ಅವರು ತಮ್ಮ ತಾಯಿಯ ಬಗ್ಗೆ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದರು.



Source link

Leave a Reply

Your email address will not be published. Required fields are marked *