Headlines

MRI ಸ್ಕ್ಯಾನಿಂಗ್ ವೇಳೆ ಪುಟ್ಟ ಮಗನಿಗೆ ಭಯವಾಗುತ್ತೆ ಅಂತ ಜೊತೆಗೆ ಮೆಷಿನ್ ಒಳಗೆ ಹೋದ ಅಪ್ಪ | Dad Goes Into Mri Machine With His Little Son Fearing He Get Scared During Scan

MRI ಸ್ಕ್ಯಾನಿಂಗ್ ವೇಳೆ ಪುಟ್ಟ ಮಗನಿಗೆ ಭಯವಾಗುತ್ತೆ ಅಂತ ಜೊತೆಗೆ ಮೆಷಿನ್ ಒಳಗೆ ಹೋದ ಅಪ್ಪ | Dad Goes Into Mri Machine With His Little Son Fearing He Get Scared During Scan



MRI ಸ್ಕ್ಯಾನಿಂಗ್ ವೇಳೆ ಪುಟ್ಟ ಮಗನಿಗೆ ಭಯವಾಗುತ್ತೆ ಅಂತ ಜೊತೆಗೆ ಮೆಷಿನ್ ಒಳಗೆ ಹೋದ ಅಪ್ಪ | Dad Goes Into Mri Machine With His Little Son Fearing He Get Scared During Scan

viral video of father and son: ಎಂಆರ್‌ಐ ಸ್ಕ್ಯಾನಿಂಗ್‌ಗೆ ಹೆದರಿದ ಮಗುವಿಗೆ ಧೈರ್ಯ ತುಂಬಲು, ತಂದೆಯೊಬ್ಬರು ಮಗನ ಜೊತೆ ತಾವೂ ಮೆಷಿನ್ ಒಳಗೆ ಹೋಗಿದ್ದಾರೆ. ಈ ಹೃದಯಸ್ಪರ್ಶಿ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತಂದೆಯ ಪ್ರೀತಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಮಗನಿಗೆ ಭಯವಾಗುತ್ತೆ ಅಂತ ಮಗುವಿನ ಜೊತೆ ಸ್ಕ್ಯಾನಿಂಗ್ ಮೆಷಿನ್ ಒಳಗೆ ಹೋದ ಅಪ್ಪ

ಮಕ್ಕಳಿಗೆ ಏನಾದರೂ ಆದರೆ ಪೋಷಕರಿಗೆ ಸಹಿಸಲಾಗದು. ಪುಟ್ಟ ಮಕ್ಕಳು ಅದನ್ನು ಹೇಗೆ ಎದುರಿಸುತ್ತಾರೆ ಎಂಬ ಭಯ ಪೋಷಕರನ್ನು ಸದಾ ಕಾಡುತ್ತಿರುತ್ತದೆ. ಅದರಲ್ಲೂ ದೊಡ್ಡ ಮಟ್ಟಿನಲ್ಲಿ ಅನಾರೋಗ್ಯ ಕಾಣಿಸಿಕೊಂಡಾಗ ಅವರ ತಪಾಸಣೆಗೆ ಬಳಸುವ ವೈದ್ಯಕೀಯ ಯಂತ್ರೋಪಕರಣಗಳನ್ನು ನೋಡಿದರೆನೇ ಮಕ್ಕಳ ಜೊತೆಗೆ ಪೋಷಕರು ಭಯಪಡುತ್ತಾರೆ. ಮಕ್ಕಳಿಗೇ ಏನಾಗುವುದೋ ಎಂದು. ಕೆಲವು ಪೋಷಕರಂತು ತಮ್ಮ ಮಕ್ಕಳಿಗೆ ಸಾಮಾನ್ಯ ಇಂಜೆಕ್ಷನ್ ಚುಚ್ಚಿಸುವುದಕ್ಕೂ ಭಯಪಡುವುದುಂಟು. ಹೀಗಿರುವಾಗ ಮಾರಕ ಕಾಯಿಲೆಗಳು ಬಂದರೆ ಮಕ್ಕಳಿಗಿಂತ ಹೆಚ್ಚು ನೋವು ಅನುಭವಿಸೋದು ಪೋಷಕರು. ಅದೇ ರೀತಿ ಇಲ್ಲೊಂದು ಕಡೆ ಮಗುವಿನ ಎಂಆರ್‌ಐ ಸ್ಕ್ಯಾನಿಂಗ್ ವೇಳೆ ಭಯಗೊಂಡ ಮಗುವಿನ ತಂದೆಯೊಬ್ಬರು ಮಗನ ಜೊತೆ ಎಂಆರ್‌ಐ ಮೆಷಿನ್ ಜೊತೆಗೆ ತಾವು ಕೂಡ ಹೋಗಿದ್ದು, ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಎಂಆರ್‌ಐ ಸ್ಕ್ಯಾನಿಂಗ್ ಏಕೆ ಮಾಡಲಾಗುತ್ತದೆ?

MRI (ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್) ಸ್ಕ್ಯಾನ್ ಒಂದು ಆಕ್ರಮಣಶೀಲವಲ್ಲದ, ವಿಕಿರಣ ಮುಕ್ತ ವೈದ್ಯಕೀಯ ಚಿತ್ರಣ ತೆಗೆಯುವ ಪ್ರಕ್ರಿಯೆಯಾಗಿದೆ. ಇದು ಮಾನವ ದೇಹದ ಅಂಗಗಳು, ಮೃದು ಅಂಗಾಂಶಗಳು ಮತ್ತು ಮೂಳೆಗಳ ವಿವರವಾದ, ಹೆಚ್ಚಿನ ರೆಸಲ್ಯೂಶನ್, 3D ಚಿತ್ರಗಳನ್ನು ರಚಿಸಲು ಬಲವಾದ ಆಯಸ್ಕಾಂತಗಳು ಮತ್ತು ರೇಡಿಯೋ ತರಂಗಗಳನ್ನು ಬಳಸಿ ಮಾಡುವಂತಹ ಸ್ಕ್ಯಾನಿಂಗ್ ಆಗಿದ್ದು, ಎಕ್ಸ್-ರೇ ವಿಕಿರಣವನ್ನು ಬಳಸದೆ ಮೆದುಳು, ಬೆನ್ನುಹುರಿ, ಕೀಲುಗಳು ಮತ್ತು ಹೃದಯ ರಕ್ತನಾಳದ ವ್ಯವಸ್ಥೆಯಲ್ಲಿನ ಸ್ಥಿತಿಗಳನ್ನು ಪತ್ತೆಹಚ್ಚಲು ಅಥವಾ ಮೇಲ್ವಿಚಾರಣೆ ಮಾಡಲು ಇದನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ.

ಇದನ್ನೂ ಓದಿ: ದುರ್ಗಮ ಪ್ರದೇಶದಲ್ಲಿ ಸ್ಟ್ರೆಚರ್‌ನಲ್ಲಿ ಗರ್ಭಿಣಿಯನ್ನು ಇರಿಸಿ 5 ಕಿಮೀ ದೂರ ಹೊತ್ತು ಸಾಗಿದ ಯೋಧರು

ಆದರೆ ಈ ಮೆಷಿನ್ ಒಳಗೆ ಹೋಗೋದೇ ಒಂದು ರೀತಿ ಭಯ ಹುಟ್ಟಿಸುತ್ತದೆ. ಮೊದಲ ಬಾರಿಗೆ ಈ ಎಂಆರ್‌ಐ ಸ್ಕ್ಯಾನಿಂಗ್‌ಗೆ ಒಳಗಾಗುವವರಿಗೆ ಅನುಭವ ಭಯಾನಕವಾಗಿರುತ್ತೆ. ಮಕ್ಕಳು ಇದರ ಒಳಗೆ ಹೋಗುವುದಕ್ಕೆ ಭಯಪಡುತ್ತಾರೆ ಏನಾಗುವುದೋ ಏನೋ ಎಂಬ ಭಯ ಅವರಲ್ಲಿರುತ್ತದೆ. ಅದೇ ರೀತಿ ಇಲ್ಲೊಂದು ಮಗು ಭಯಪಟ್ಟಿದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಮಗುವನ್ನು ಒಳಗೆ ಒಬ್ಬನೇ ಕಳುಹಿಸುವುದಕ್ಕೆ ಅಪ್ಪ ಭಯಪಟ್ಟಿರಬೇಕು. ಹೀಗಾಗಿ ಮಗುವಿನ ಜೊತೆಗೆ ಅವರು ಕೂಡ ಎಂಆರ್‌ಐ ಮೆಷಿನ್ ಒಳಗೆ ಹೋಗಿದ್ದು, ಆ ಕ್ಷಣದ ವಿಡಿಯೋ ವೈರಲ್ ಆಗಿದೆ. ಅನೇಕರು ಈ ವೀಡಿಯೋಗೆ ತುಂಬಾ ಕಾಮೆಂಟ್ ಮಾಡ್ತಿದ್ದಾರೆ. ಬೆದರಿದ ಪುಟ್ಟ ಮಗನಿಗೆ ಸುರಕ್ಷತೆಯ ಭಾವ ನೀಡೋದಕ್ಕಾಗಿ ಇಲ್ಲೊಬ್ಬರು ತಂದೆ ಎಂಆರ್‌ಐ ಸ್ಕ್ಯಾನಿಂಗ್ ಮೆಷಿನ್ ಒಳಗೆ ಮಗನ ಜೊತೆಗೆ ತಾವು ಕೂಡ ಹೋಗಿದ್ದಾರೆ ಎಂದು ಬರೆದು ವೀಡಿಯೋ ಪೋಸ್ಟ್ ಮಾಡಲಾಗಿದೆ.

ಅಪ್ಪನ ಪ್ರೀತಿಗೆ ಫಿದಾ ಆದ ಇಂಟರ್‌ನೆಟ್

ವಿಡಿಯೋದಲ್ಲಿ ಮಗುವನ್ನು ತಬ್ಬಿ ಹಿಡಿದು ಸುರಕ್ಷತೆಯ ಭರವಸೆ ನೀಡುತ್ತಿರುವ ತಂದೆಯನ್ನು ಕಾಣಬಹುದಾಗಿದೆ. ಇದು ತಂದೆಯೊಬ್ಬನಿಗೆ ಮಗನ ಮೇಲಿರುವ ನಿಜವಾದ ಪ್ರೀತಿಯನ್ನು ತೋರಿಸುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಕೆಲವರು ತಮಗಾದ ಅನುಭವವನ್ನು ಕಾಮೆಂಟ್‌ಗಳಲ್ಲಿ ಹೇಳಿಕೊಂಡಿದ್ದಾರೆ. ಅನೇಕರು ಈ ಎಂಆರ್‌ಐ ಸ್ಕ್ಯಾನಿಂಗ್‌ನ ಅನುಭವ ಹೇಗೆ ಎಂದು ಪ್ರಶ್ನೆ ಮಾಡಿದ್ದರೆ ಮತ್ತೆ ಕೆಲವರು ಉತ್ತರ ನೀಡಿದ್ದಾರೆ. ಮತ್ತೆ ಕೆಲವರು ಇಂತಹ ಅವಕಾಶ ಇದೆಯೇ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಕೆಲವರು ಪ್ರತಿಕ್ರಿಯಿಸಿದ್ದು, ಸಾಮಾನ್ಯಾಗಿ ಇರುವುದಿಲ್ಲ, ಆದರೆ ಮಕ್ಕಳ ಸಂದರ್ಭದಲ್ಲಿ ಮಕ್ಕಳು ಭಯಗೊಂಡರೆ ಎಂಬ ಕಾರಣಕ್ಕೆ ಇಂತಹ ಅವಕಾಶ ನೀಡಬಹುದು ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: 6 ವರ್ಷದಲ್ಲಿ 6 ಲಕ್ಷದಿಂದ 68 ಲಕ್ಷಕ್ಕೆ ಏರಿಕೆಯಾಯ್ತ ವೇತನ: ಟೆಕ್ಕಿ ಪೋಸ್ಟ್ ಭಾರಿ ವೈರಲ್



Source link

Leave a Reply

Your email address will not be published. Required fields are marked *