Headlines

10 ಸೆಕೆಂಡ್‌ಗೊಂದು ‘ಬಟ್ಟೆ ಮಡಚುವ ಯಂತ್ರ’ ಕಂಡುಹಿಡಿದ ಹೈಸ್ಕೂಲ್ ವಿದ್ಯಾರ್ಥಿ! ವಿಡಿಯೋ ವೈರಲ್ | High School Student Invents Clothes Folding Machine Manual Device Viral Video Sat

10 ಸೆಕೆಂಡ್‌ಗೊಂದು ‘ಬಟ್ಟೆ ಮಡಚುವ ಯಂತ್ರ’ ಕಂಡುಹಿಡಿದ ಹೈಸ್ಕೂಲ್ ವಿದ್ಯಾರ್ಥಿ! ವಿಡಿಯೋ ವೈರಲ್ | High School Student Invents Clothes Folding Machine Manual Device Viral Video Sat



10 ಸೆಕೆಂಡ್‌ಗೊಂದು ‘ಬಟ್ಟೆ ಮಡಚುವ ಯಂತ್ರ’ ಕಂಡುಹಿಡಿದ ಹೈಸ್ಕೂಲ್ ವಿದ್ಯಾರ್ಥಿ! ವಿಡಿಯೋ ವೈರಲ್ | High School Student Invents Clothes Folding Machine Manual Device Viral Video Sat

ಶಾಲಾ ವಿದ್ಯಾರ್ಥಿಯೊಬ್ಬ ಕಡಿಮೆ ಖರ್ಚಿನಲ್ಲಿ ಬಟ್ಟೆ ಮಡಚುವ ಯಂತ್ರವನ್ನು ಆವಿಷ್ಕರಿಸಿದ್ದಾನೆ. ಕಾರ್ಡ್‌ಬೋರ್ಡ್‌ನಂತಹ ಸರಳ ವಸ್ತುಗಳಿಂದ ತಯಾರಿಸಿದ ಈ ಸಾಧನವು, ಕೆಲವೇ ಸೆಕೆಂಡುಗಳಲ್ಲಿ ಶರ್ಟ್ ಹಾಗೂ ಪಂಚೆಯಂತಹ ಬಟ್ಟೆಗಳನ್ನು ಅಚ್ಚುಕಟ್ಟಾಗಿ ಮಡಚುತ್ತದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇಂದಿನ ಜಮಾನಾ ಅಂದ್ರೆ ಅದು ಸ್ಟಾರ್ಟ್‌ಅಪ್‌ಗಳ ಕಾಲ. ಹೊಸ ಹೊಸ ಐಡಿಯಾಗಳೊಂದಿಗೆ ಯುವ ಉದ್ಯಮಿಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದಾರೆ. ಆದರೆ, ಇಂತಹ ಅದ್ಭುತ ಆವಿಷ್ಕಾರಗಳು ಕೇವಲ ದೊಡ್ಡ ದೊಡ್ಡ ಲ್ಯಾಬ್‌ಗಳಲ್ಲಿ ಮಾತ್ರವಲ್ಲ, ಶಾಲಾ ತರಗತಿಗಳಿಂದಲೂ ಮೂಡಿಬರಬಹುದು ಎಂಬುದಕ್ಕೆ ಈ ಶಾಲಾ ಬಾಲಕನೇ ಸಾಕ್ಷಿ. ಬಟ್ಟೆ ಒಗೆಯಲು ವಾಷಿಂಗ್ ಮಷಿನ್ ಬಂದ ಮೇಲೆ ಗೃಹಿಣಿಯರ ಕೆಲಸ ಅರ್ಧಕ್ಕರ್ಧ ಕಡಿಮೆಯಾಗಿತ್ತು. ಆದರೆ, ಒಗೆದ ಬಟ್ಟೆಗಳನ್ನು ಮಡಚಿಡುವುದು ಇಂದಿಗೂ ಒಂದು ದೊಡ್ಡ ತಲೆನೋವಿನ ಕೆಲಸವೇ. ಈಗ ಈ ಕೆಲಸವನ್ನೂ ಸುಲಭಗೊಳಿಸಲು ಪುಟ್ಟ ವಿದ್ಯಾರ್ಥಿಯೊಬ್ಬ ಮಾದರಿ ಯಂತ್ರವೊಂದನ್ನು ಸಿದ್ಧಪಡಿಸಿದ್ದಾನೆ.

ಬಟ್ಟೆ ಮಡಚುವ ಯಂತ್ರದ ವಿಶೇಷತೆ ಏನು?

ಸಾಮಾಜಿಕ ಜಾಲತಾಣಗಳಲ್ಲಿ ಈ ಬಾಲಕನ ವಿಡಿಯೋ ಭಾರಿ ಸದ್ದು ಮಾಡುತ್ತಿದೆ. ಶಾಲಾ ಸಮವಸ್ತ್ರದಲ್ಲಿರುವ ಈ ವಿದ್ಯಾರ್ಥಿ, ತಾನು ತಯಾರಿಸಿದ ಸಾಧನವನ್ನು ಬಳಸಿ ಹೇಗೆ ಅತಿ ವೇಗವಾಗಿ ಬಟ್ಟೆಗಳನ್ನು ಮಡಚಬಹುದು ಎಂಬುದನ್ನು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿದ್ದಾನೆ. ಈ ಸಾಧನವನ್ನು ತಯಾರಿಸಲು ಆತ ಬಳಸಿರುವುದು ಕೇವಲ ಸರಳ ವಸ್ತುಗಳನ್ನು ಮಾತ್ರ. ಫ್ಲಾಟ್ ಬೋರ್ಡ್‌ಗಳು (ಕಾರ್ಡ್‌ಬೋರ್ಡ್ ಅಥವಾ ಪ್ಲೈವುಡ್), ಹಿಂಜ್‌ಗಳು (ಕೀಲುಗಳು) ಮತ್ತು ಲಿವರ್ ಸಿಸ್ಟಮ್‌ನಂತಹ ಸಾಮಾನ್ಯ ವಸ್ತುಗಳಿಂದ ಈ ‘ಲೋ ಕಾಸ್ಟ್’ ಯಂತ್ರ ತಯಾರಾಗಿದೆ.

ಇದರಲ್ಲಿ ಎಡ, ಬಲ ಮತ್ತು ಕೆಳಭಾಗದಲ್ಲಿ ಮೂರು ಪ್ಯಾನೆಲ್‌ಗಳಿವೆ. ವಿಡಿಯೋದಲ್ಲಿ ಬಾಲಕ ಮೊದಲು ಒಂದು ಶರ್ಟ್ ಅನ್ನು ಈ ಸಾಧನದ ಮೇಲಿಡುತ್ತಾನೆ. ನಂತರ ಎಡ ಮತ್ತು ಬಲ ಪ್ಯಾನೆಲ್‌ಗಳನ್ನು ಮಡಚಿದಾಗ ಶರ್ಟ್‌ನ ತೋಳುಗಳು ಸರಿಯಾಗಿ ಒಳಕ್ಕೆ ಮಡಚಿಕೊಳ್ಳುತ್ತವೆ. ಕೊನೆಯಲ್ಲಿ ಕೆಳಗಿನ ಪ್ಯಾನೆಲ್ ಅನ್ನು ಮೇಲಕ್ಕೆ ತಳ್ಳಿದಾಗ ಇಡೀ ಶರ್ಟ್ ಅಚ್ಚುಕಟ್ಟಾದ ಚೌಕಾಕಾರಕ್ಕೆ ಮಡಚಲ್ಪಡುತ್ತದೆ. ಶರ್ಟ್ ಮಾತ್ರವಲ್ಲದೆ ಪಂಚೆಯನ್ನು ಕೂಡ ಈ ಸಾಧನದಲ್ಲಿ ಮಡಚಿ ತೋರಿಸುವ ಮೂಲಕ ಈತ ಎಲ್ಲರ ಹುಬ್ಬೇರಿಸಿದ್ದಾನೆ.

ಕಡಿಮೆ ಸಮಯದಲ್ಲಿ ಕೆಲಸ ಪೂರ್ಣ:

ಸಾಮಾನ್ಯವಾಗಿ ನಾವು ಕೈಯಿಂದ ಒಂದು ಶರ್ಟ್ ಮಡಚಲು ಕನಿಷ್ಠ 30 ರಿಂದ 40 ಸೆಕೆಂಡ್ ತೆಗೆದುಕೊಳ್ಳುತ್ತೇವೆ. ಆದರೆ ಈ ಸಾಧನದ ಸಹಾಯದಿಂದ ಕೇವಲ 5 ರಿಂದ 10 ಸೆಕೆಂಡುಗಳಲ್ಲಿ ಕೆಲಸ ಮುಗಿಯುತ್ತದೆ. ಮನೆಯಲ್ಲಿ ಹೆಚ್ಚು ಬಟ್ಟೆಗಳಿದ್ದಾಗ ಅಥವಾ ಸಮಯದ ಅಭಾವವಿದ್ದಾಗ ಈ ಸಾಧನ ಅತ್ಯಂತ ಉಪಯುಕ್ತವಾಗಲಿದೆ.

ನೆಟ್ಟಿಗರ ಮೆಚ್ಚುಗೆಯ ಮಹಾಪೂರ:

‘Sarcastic_Doctorrr’ ಎಂಬ ಇನ್‌ಸ್ಟಾಗ್ರಾಂ ಪುಟದಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿದೆ. ನೆಟ್ಟಿಗರು ಬಾಲಕನ ಬುದ್ಧಿವಂತಿಕೆಯನ್ನು ಕೊಂಡಾಡುತ್ತಿದ್ದಾರೆ. “ನಮ್ಮ ದೇಶದ ಪ್ರತಿಭೆಗಳಿಗೆ ಸರಿಯಾದ ಪ್ರೋತ್ಸಾಹ ಸಿಕ್ಕರೆ ಜಗತ್ತನ್ನೇ ಗೆಲ್ಲಬಹುದು” ಎಂದು ಒಬ್ಬರು ಕಾಮೆಂಟ್ ಮಾಡಿದರೆ, “ಇದು ಪ್ರತಿಯೊಂದು ಮನೆಯಲ್ಲೂ ಇರಬೇಕಾದ ಅವಶ್ಯಕ ಸಾಧನ” ಎಂದು ಇನ್ನೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ದೊಡ್ಡ ಕಂಪನಿಗಳು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕಂಡುಹಿಡಿಯುವ ಯಂತ್ರಗಳಿಗಿಂತಲೂ, ಇಂತಹ ಮಣ್ಣಿನ ಮಕ್ಕಳ ಆವಿಷ್ಕಾರಗಳು ಹೆಚ್ಚು ಪ್ರಾಯೋಗಿಕವಾಗಿರುತ್ತವೆ ಎಂಬುದು ಹಲವರ ಮಾತು. ಈ ಪುಟ್ಟ ಪ್ರತಿಭೆಯು ಮುಂದೊಂದು ದಿನ ದೊಡ್ಡ ಮಟ್ಟದ ಸ್ಟಾರ್ಟ್‌ಅಪ್ ಆರಂಭಿಸಿದರೂ ಆಶ್ಚರ್ಯವಿಲ್ಲ.



Source link

Leave a Reply

Your email address will not be published. Required fields are marked *