Headlines

Sri Raghavendra Mahathme: 23ರ ವಯಸ್ಸಲ್ಲಿ 85ರ ಅಜ್ಜಿ- ನಟಿ ಭವಾನಿಯ ರೋಚಕ ಸ್ಟೋರಿ ಕೇಳಿ

Sri Raghavendra Mahathme: 23ರ ವಯಸ್ಸಲ್ಲಿ 85ರ ಅಜ್ಜಿ- ನಟಿ ಭವಾನಿಯ ರೋಚಕ ಸ್ಟೋರಿ ಕೇಳಿ

Sri Raghavendra Mahathme: 23ರ ವಯಸ್ಸಲ್ಲಿ 85ರ ಅಜ್ಜಿ- ನಟಿ ಭವಾನಿಯ ರೋಚಕ ಸ್ಟೋರಿ ಕೇಳಿ
‘ಶ್ರೀ ರಾಘವೇಂದ್ರ ಮಹಾತ್ಮೆ’ ಧಾರಾವಾಹಿಯಲ್ಲಿ 85 ವರ್ಷದ ಸೀತಾಬಾಯಿ ಪಾತ್ರದಲ್ಲಿ ಮಿಂಚುತ್ತಿರುವವರು 23ರ ಯುವ ನಟಿ ಭವಾನಿ ಪುರೋಹಿತ್. ರಂಗಭೂಮಿ ಹಿನ್ನೆಲೆಯುಳ್ಳ ಇವರು, ಎಂಬಿಎ ಪದವೀಧರೆಯಾಗಿದ್ದು, ಈ ಸವಾಲಿನ ಪಾತ್ರವನ್ನು ನಿಭಾಯಿಸಿದ ತಮ್ಮ ಜರ್ನಿ ಮತ್ತು ಆರಂಭಿಕ ತೊಂದರೆಗಳ ಬಗ್ಗೆ ಹಂಚಿಕೊಂಡಿದ್ದಾರೆ.
ಕಲಾವಿದರು ಎಂದರೆ ಸವಾಲಿನ ಪಾತ್ರಗಳನ್ನು ಕೊಟ್ಟರೂ ಮಾಡುವ, ಅದನ್ನು ನಿಭಾಯಿಸುವ ತಾಕತ್ತು ಇರಬೇಕು. ಆದರೆ, ಅಂಥ ಕಲಾವಿದರು ಅಪರೂಪ ಎಂದೇ ಹೇಳಬಹುದು. ಅಂಥ ಅಪರೂಪದ ಕಲಾವಿದರಲ್ಲಿ ಒಬ್ಬರಾದವರು ನಟಿ ಭವಾನಿ ಪುರೋಹಿತ್​. ಶ್ರೀ ರಾಘವೇಂದ್ರ ಮಹಾತ್ಮೆ ಸೀರಿಯಲ್​ನಲ್ಲಿ 85ರ ಅಜ್ಜಿ ಸೀತಾಬಾಯಿ ಪಾತ್ರವನ್ನು ಇವರು ನಿಭಾಯಿಸುತ್ತಿದ್ದಾರೆ.

ಇದೀಗ ಅವರು ಈ ಕುತೂಹಲದ ಜರ್ನಿಯನ್ನು ಆತ್ಮೀಯ ಕನ್ನಡಿಗ ಚಾನೆಲ್​ ಜೊತೆ ಹಂಚಿಕೊಂಡಿದ್ದಾರೆ. ನಾನು ಜಸ್ಟ್​ ಎಂಬಿಎ ಪದವೀಧರೆ. ನನಗೀಗ 23 ವರ್ಷ ವಯಸ್ಸು. ಆದರೆ ಈ ಸೀರಿಯಲ್​ನಲ್ಲಿ 85 ವರ್ಷದ ಅಜ್ಜಿಯ ಪಾತ್ರವನ್ನು ನಿಭಾಯಿಸುತ್ತಿದ್ದೇನೆ ಎನ್ನುವ ಮೂಲಕ, ತಮ್ಮ ಪಾತ್ರ ಪರಿಚಯವನ್ನು ಮಾಡಿದ್ದಾರೆ ಭವಾನಿ.

ಅಂದಹಾಗೆ ಭವಾನಿ ಅವರು ರಂಗಭೂಮಿ ಹಿನ್ನೆಲೆಯವರು. ಕಳೆದ ಆರು ವರ್ಷಗಳಿಂದ ಅದರಲ್ಲಿ ಸಕ್ರಿಯರಾಗಿದ್ದಾರೆ. ನಾನು ಕಾಲೇಜಿಗೆ ಹೋದಾಗಲೆಲ್ಲಾ ಡಾನ್ಸ್​, ಡ್ರಾಮಾ ಅಂತನೇ ಇದ್ದವಳು. ಕ್ಲಾಸ್​ಗೆ ಹೋಗಿದ್ದೇ ಕಮ್ಮಿ. ಅಮ್ಮ ಕಾನೂನು ಪದವೀಧರೆಯಾದರೂ ಮುಂದೆ ಹೋಗಲು ಆಗಲಿಲ್ಲ. ಅದ್ದರಿಂದ ಮಗಳು ಏನಾದರೂ ದೊಡ್ಡ ಸಾಧನೆ ಮಾಡಬೇಕು ಎಂದು ಕನಸು ಕಂಡವರು. ಜೊತೆಗೆ ಅಪ್ಪ ಮತ್ತು ತಮ್ಮನ ಸಹಕಾರದಿಂದ ಈ ಮಟ್ಟಿಗೆ ಬಂದೆ ಎಂದಿದ್ದಾರೆ ನಟಿ.

ನಾನು ಬೆಳೆದ ಪರಿಸರದಲ್ಲಿ ಸೀರಿಯಲ್, ಸಿನಿಮಾ ಅಂತೆಲ್ಲಾ ಹೋಗುವವರನ್ನು ನೋಡುವುದೇ ಬೇರೆಯ ರೀತಿ. ಮೊದಲಿಗೆ ಮಾಡೆಲಿಂಗ್​ ಮಾಡುತ್ತಿದ್ದೆ. ಆಗ ಪಿಕಪ್​, ಡ್ರಾಪ್​ ಅಂತ ಮನೆಗೆ ಬರೋರು, ಟೈಮ್​ ಕೂಡ ಹೇಗೇಗೋ ಇರ್ತಿತ್ತು. ಆಗ ಅಕ್ಕಪಕ್ಕದಮನೆಯವರೆಲ್ಲಾ ಆಡಿಕೊಳ್ಳುವವರು. ಇದರ ಹೊರತಾಗಿಯೂ ಅಪ್ಪ- ಅಮ್ಮನ ಪ್ರೋತ್ಸಾಹದಿಂದ ನನ್ನ ಕನಸು ಈಡೇರಿತು ಎಂದಿದ್ದಾರೆ.

ಇಂದಿಗೂ ನನ್ನ ಅಮ್ಮ ಹೇಳುವುದು ಒಂದೇ, ನಿನ್ನ ಬುದ್ಧಿ ನಿನ್ನ ಕೈಯಲ್ಲಿ ಇರಬೇಕು ಎನ್ನುವುದು. ಅದನ್ನು ನಾನು ಪಾಲಿಸುತ್ತಿದ್ದೇನೆ ಎಂದಿದ್ದಾರೆ ಭವಾನಿ. ಇನ್ನು ಹತ್ತು ವರ್ಷ ಬಿಟ್ಟು ನೋಡಿದ್ರೂ ಇದು ಒಳ್ಳೆಯ ಕ್ಯಾರೆಕ್ಟರ್​ ಎನ್ನಿಸುವಂಥ ಪಾತ್ರ ಮಾಡು. ಮುಂದೊಂದು ದಿನ ಅಯ್ಯೋ ನಾನು ಇದನ್ನು ಮಾಡಬಾರದಿತ್ತು ಎಂದು ಪಶ್ಚಾತ್ತಾಪ ಪಡುವ ಕ್ಯಾರೆಕ್ಟರ್​ ಮಾಡಬೇಡ ಎನ್ನುವುದು ಅಮ್ಮನ ಬುದ್ಧಿಮಾತು ಎಂದು ಹೇಳುವ ಮೂಲಕ ಒಳ್ಳೆಯ ಪಾತ್ರಕ್ಕೆ ಮಾತ್ರ ಮನ್ನಣೆ ಎಂದಿದ್ದಾರೆ ಭವಾನಿ.

ಮೊದಲಿನಿಂದಲೂ ವಿಭಿನ್ನ ಪಾತ್ರ ಮಾಡಿರುವ ಕಾರಣ, ವಾಯ್ಸ್​ ಬದಲಾವಣೆ ಅಷ್ಟೊಂದು ಕಷ್ಟವಾಗಲಿಲ್ಲ. ಆದರೂ ಆರಂಭದಲ್ಲಿ ಕೆಲವು ಎಪಿಸೋಡ್​ನಲ್ಲಿ ಪರದಾಡಿದೆ ಎಂದು ನೆನಪಿಸಿಕೊಂಡಿದ್ದಾರೆ ನಟಿ.

Source link

Leave a Reply

Your email address will not be published. Required fields are marked *