Headlines

ಮೈಮೇಲೆ 1 ಕೋಟಿ ಚಿನ್ನ ಎಂದವ ಧರಿಸಿದ್ದು ಕೇವಲ 3 ಲಕ್ಷದ ತಾಮ್ರ ಆಭರಣ-ಗೋಲ್ಡ್‌ಮ್ಯಾನ್‌ ವಂಚನೆ ಐಟಿಯಿಂದ ಬಯಲು | A Man Wearing 1 Crore Gold On His Body Is Wearing Only 3 Lakh Copper Ornaments

ಮೈಮೇಲೆ 1 ಕೋಟಿ ಚಿನ್ನ ಎಂದವ ಧರಿಸಿದ್ದು ಕೇವಲ 3 ಲಕ್ಷದ ತಾಮ್ರ ಆಭರಣ-ಗೋಲ್ಡ್‌ಮ್ಯಾನ್‌ ವಂಚನೆ ಐಟಿಯಿಂದ ಬಯಲು | A Man Wearing 1 Crore Gold On His Body Is Wearing Only 3 Lakh Copper Ornaments



ಮೈಮೇಲೆ 1 ಕೋಟಿ ಚಿನ್ನ ಎಂದವ ಧರಿಸಿದ್ದು ಕೇವಲ 3 ಲಕ್ಷದ ತಾಮ್ರ ಆಭರಣ-ಗೋಲ್ಡ್‌ಮ್ಯಾನ್‌ ವಂಚನೆ ಐಟಿಯಿಂದ ಬಯಲು | A Man Wearing 1 Crore Gold On His Body Is Wearing Only 3 Lakh Copper Ornaments

ಮೈ ತುಂಬಾ 1 ಕೋಟಿ ರು.ಮೌಲ್ಯದ ಚಿನ್ನ ಧರಿಸಿಕೊಂಡು ‘ಓಲ್ಡ್‌ ಸಿಟಿ ಗೋಲ್ಡ್‌ ಮ್ಯಾನ್‌’ ಅಂತಲೇ ಖ್ಯಾತಿ ಹೊಂದಿದ್ದ ಸುರೇಶ್‌ ಕುಮಾರ್‌ನ ಅಸಲಿಯತ್ತನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬಯಲಿಗೆಳೆದಿದ್ದಾರೆ.

ಹೈದರಾಬಾದ್‌: ಮೈ ತುಂಬಾ 1 ಕೋಟಿ ರು.ಮೌಲ್ಯದ ಚಿನ್ನ ಧರಿಸಿಕೊಂಡು ‘ಓಲ್ಡ್‌ ಸಿಟಿ ಗೋಲ್ಡ್‌ ಮ್ಯಾನ್‌’ ಅಂತಲೇ ಖ್ಯಾತಿ ಹೊಂದಿದ್ದ ಸುರೇಶ್‌ ಕುಮಾರ್‌ನ ಅಸಲಿಯತ್ತನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬಯಲಿಗೆಳೆದಿದ್ದಾರೆ. ಕೋಳಿ ಅಂಗಡಿ ಮಾಲೀಕ ಮತ್ತು ಜಿಮ್‌ ತರಬೇತುದಾರನಾಗಿದ್ದ ಸುರೇಶ್‌ ಮಾಸಿಕ 5 ಲಕ್ಷ ರು. ಆದಾಯ ಹೊಂದಿರುವುದಾಗಿ ಘೋಷಿಸಿಕೊಂಡಿದ್ದ. ಆದರೆ ಕಳೆದ 6 ವರ್ಷಗಳಿಂದ ಆದಾಯ ತೆರಿಗೆ ಪಾವತಿಸಿಲ್ಲ. ಹೀಗಾಗಿ ಅವನಿಗೆ ಐಟಿ ಅಧಿಕಾರಿಗಳು ನೋಟಿಸ್‌ ನೀಡಿದ್ದರು. ವಿಚಾರಣೆಗೆ ಬಂದಿದ್ದ ವೇಳೆ ಆತ ಧರಿಸಿದ್ದ 1 ಕೋಟಿ ರು. ಮೌಲ್ಯದ್ದು ಎನ್ನಲಾದ 12 ಚಿನ್ನಾಭರಣ ವಶ ಪಡಿಸಿಕೊಂಡಿದ್ದರು. ಆದರೆ ವಿಚಾರಣೆ ವೇಳೆ ಇವು ಅಸಲಿ ಚಿನ್ನ ಅಲ್ಲ. ತಾಮ್ರದಿಂದ ಮಾಡಿದ್ದು, ಇವುಗಳ ಮೌಲ್ಯ 3 ಲಕ್ಷ ರು. ಎಂದು ಒಪ್ಪಿಕೊಂಡಿದ್ದಾನೆ.

ಚಿನ್ನ ₹3,700, ಬೆಳ್ಳಿ ₹7000 ರು. ಏರಿಕೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ದರ ಏರಿಕೆ ಪರ್ವ ಮುಂದುವರೆದಿದೆ. ದೆಹಲಿಯಲ್ಲಿ 24 ಕ್ಯಾರೆಟ್‌ನ ಚಿನ್ನದ ಬೆಲೆ ಒಂದೇ ದಿನ 10 ಗ್ರಾಂಗೆ 3700 ರು. ಏರಿಕೆ ಕಂಡು 1,51,500ರು.ಗೆ ತಲುಪಿದ್ದರೆ, ಬೆಳ್ಳಿ 7000 ರು. ಹೆಚ್ಚಳದೊಂದಿಗೆ ಕೇಜಿಗೆ 2,37,000 ರು.ಗೆ ತಲುಪಿದೆ.

ಬೆಂಗಳೂರಲ್ಲೂ ಏರಿಕೆ: ಇನ್ನು ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಚಿನ್ನ ಕೊಂಚ ಏರಿಕೆ ಕಂಡಿದೆ. ಇಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನ 170 ರು. ಹೆಚ್ಚಳವಾಗಿ 1,48,260 ರು.ಗೆ ತಲುಪಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನ 150 ರು. ಏರಿಕೆಯೊಂದಿಗೆ 1,35,900 ರು.ದಾಖಲಿಸಿದೆ. ಇನ್ನು ಬೆಳ್ಳಿ ಕೇಜಿಗೆ 2,45,000 ರು.ನಲ್ಲಿ ಸ್ಥಿರವಾಗಿದೆ.

ಸೆನ್ಸೆಕ್ಸ್‌ 1635 ಅಂಕ ಕುಸಿತ: ಹೂಡಿಕೆ ₹10 ಲಕ್ಷ ಕೋಟಿ ನಷ್ಟ

ಮುಂಬೈ: ಮಧ್ಯಪ್ರಾಚ್ಯ ಯುದ್ಧ ತೀವ್ರಗೊಳ್ಳುವ ಭೀತಿಯು, ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್‌ ಸೋಮವಾರ 1635 ಅಂಕಗಳ ಭಾರೀ ಕುಸಿತ ಕಾಣುವಂತೆ ಮಾಡಿದೆ. ಸೆನ್ಸೆಕ್ಸ್‌ 1635 ಅಂಕ ಕುಸಿದು 71947 ಅಂಕಗಳಲ್ಲಿ ಮುಕ್ತಾಯವಾದರೆ, ನಿಫ್ಟಿ 488 ಅಂಕ ಕುಸಿದು 22331ರಲ್ಲಿ ಮುಕ್ತಾಯವಾಗಿದೆ. ಇದು ಎರಡೂ ಸೂಚ್ಯಂಕಗಳ ಎರಡು ವರ್ಷದ ಕನಿಷ್ಠ ಅಂಕವಾಗಿದೆ. ಇದರೊಂದಿಗೆ ಈ ವರ್ಷ ಒಟ್ಟಾರೆ ಸೆನ್ಸೆಕ್ಸ್‌ 5467 ಅಂಕ ಮತ್ತು ನಿಫ್ಟಿ 1187 ಅಂಕ ಕುಸಿತ ಕಂಡಂತೆ ಆಗಿದೆ. ಸೋಮವಾರ ಬಾಂಬೆ ಷೇರುಪೇಟೆಯಲ್ಲಿ ನೊಂದಾಯಿತ ಕಂಪನಿಗಳ ಪೈಕಿ 3563 ಕಂಪನಿಗಳ ಷೇರು ಮೌಲ್ಯ ಇಳಿದಿದ್ದರೆ, 876 ಏರಿಕೆ ಕಂಡವು. ಪರಿಣಾಮ ಹೂಡಿಕೆದಾರರ ಸಂಪತ್ತು 10 ಲಕ್ಷ ಕೋಟಿ ರು.ನಷ್ಟು ಕರಗಿ ಹೋಗಿದೆ. ಕಳೆದ ಎರಡು ದಿನಗಳಲ್ಲಿ ಸೂಚ್ಯಂಕ ಒಟ್ಟಯ 3325 ಅಂಕ ಕುಸಿದ್ದು, ಹೂಡಿಕೆದಾರರಿಗೆ 18.60 ಲಕ್ಷ ಕೋಟಿ ರು.ನಷ್ಟವಾಗಿದೆ.

ಯುದ್ಧ ತೀವ್ರ ಭೀತಿ: ಮತ್ತೆ 115 ಡಾಲರ್‌ಗೆ ತಲುಪಿದ ಕಚ್ಚಾತೈಲ

ದುಬೈ: ಮಧ್ಯಪ್ರಾಚ್ಯ ಯುದ್ಧ ತೀವ್ರಗೊಳ್ಳುವ ಆತಂಕ ಹೆಚ್ಚಿದ ಬೆನ್ನಲ್ಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಸೋಮವಾರ ಬ್ಯಾರೆಲ್‌ಗೆ 115 ಡಾಲರ್‌ಗೆ ತಲುಪಿದೆ. ಕೆಲ ವಾರಗಳ ಹಿಂದೆ ಕೂಡಾ 120ರವರೆಗೆ ತಲುಪಿತ್ತಾದರೂ, ಅಮೆರಿಕ ಕದನ ವಿರಾಮ ಘೋಷಿಸಿದ ಬಳಿಕ ದರ 90 ಡಾಲರ್‌ವರೆಗೂ ಕುಸಿದಿತ್ತು. ಆದರೆ ಇದೀಗ ಅಮೆರಿಕದ ಭೂದಾಳಿ ಬೆದರಿಕೆ ಮತ್ತು ಅದಕ್ಕೆ ಇರಾನ್‌ನ ತಿರುಗೇಟು, ಯುದ್ಧದ ತೀವ್ರತೆ ಹೆಚ್ಚಿಸುವ ಭೀತಿ ಮೂಡಿಸಿದೆ. ಹೀಗಾಗಿ ಕಚ್ಚಾತೈಲದ ದರ ಮತ್ತೆ 115 ಡಾಲರ್‌ ತಲುಪಿದೆ. ಇದು ಫೆ.28 ರಂದು ಇರಾನ್‌ ಮೇಲೆ ಅಮೆರಿಕ ದಾಳಿಗೂ ಮುನ್ನ ಇದ್ದ ದರಕ್ಕಿಂತ ಶೆ.60ರಷ್ಟು ಅಧಿಕ

3100 ದಾಟಿದ ಸಾವಿನ ಸಂಖ್ಯೆ

ಬೈರೂರ್‌/ ಟೆಹ್ರಾನ್‌: ಒಂದು ತಿಂಗಳು ಪೂರೈಸಿರುವ ಕೊಲ್ಲಿ ಯುದ್ಧದಲ್ಲಿ ಇದುವರೆಗೆ ಮಡಿದವರ ಸಂಖ್ಯೆ 3100 ದಾಟಿದೆ. ಈ ಪೈಕಿ ಇರಾನ್‌ನಲ್ಲಿ 1900ಕ್ಕೂ ಹೆಚ್ಚು, ಲೆಬನಾನ್‌ನಲ್ಲಿ 1200ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇದರ ಹೊರತಾಗಿ ಇಸ್ರೇಲ್‌ ಮತ್ತು ಕೊಲ್ಲಿ ದೇಶಗಳಲ್ಲಿ ಇರಾನ್ ನಡೆಸಿದ ದಾಳಿಗೆ ಬಲಿಯಾದವರನ್ನೂ ಸೇರಿಸಿದರೆ ಸಾವಿಗೀಡಾದವರ ಸಂಖ್ಯೆ 3100 ದಾಟಿದಂತಾಗಿದೆ.



Source link

Leave a Reply

Your email address will not be published. Required fields are marked *