
ಆದಾಯ ತೆರಿಗೆ ಕಾಯ್ದೆ 2025ರ ಹೊಸ ನಿಯಮಗಳು ಜಾರಿಗೆ ಬರುತ್ತವೆ. ವಾರ್ಷಿಕ 12.75 ಲಕ್ಷಗಳವರೆಗೆ ತೆರಿಗೆ ರಿಯಾಯಿತಿ, ಮನೆ ಬಾಡಿಗೆ, ಮಕ್ಕಳ ಶಿಕ್ಷಣ ಮೊದಲಾದವುಗಳಲ್ಲಿ ವಿನಾಯಿತಿ ಇತ್ಯಾದಿ ಅಂಶಗಳು ಜಾರಿಯಾಗಲಿವೆ.
ಈವರೆಗೆ ಬಳಕೆಯಲ್ಲಿದ್ದ ಫಿನಾನ್ಶಿಯಲ್ ಇಯರ್ ಮತ್ತು ಅಸೆಸ್‌ಮೆಂಟ್ ಇಯರ್ ಎಂಬ ಪದಗಳ ಬದಲಿಗೆ ಟ್ಯಾಕ್ಸ್ ಇಯರ್ ಎಂಬ ಒಂದೇ ಪದ ಬಳಕೆಯಾಗಲಿದೆ. ಗೊಂದಲ ಕಡಿಮೆಮಾಡುವುದು ಈ ಬದಲಾವಣೆಯ ಉದ್ದೇಶ.
ಸ್ಟಾಂಡರ್ಡ್ ಡಿಡಕ್ಷನ್ ಎಂದರೆ ಉದ್ಯೋಗಿಗಳು ತಮ್ಮ ವಾರ್ಷಿಕ ಆದಾಯದ ಮೇಲೆ ಪಡೆಯಬಹುದಾದ ತೆರಿಗೆ ರಿಯಾಯಿತಿ. ಈ ಮೊತ್ತ 75,000 ಆಗಿದೆ. ಮೊದಲು ಇದು 50,000 ರು. ಇತ್ತು. ಈ ಮೊತ್ತದ ಮೇಲೆ ಯಾವುದೇ ತೆರಿಗೆ ಇರುವುದಿಲ್ಲ.
ಊಟ, ಮನೆ ಬಾಡಿಗೆ ಮೊದಲಾದೆಡೆ ಹೆಚ್‌ಆರ್‌ಎ ನಿಯಮದಡಿ ವಿನಾಯಿತಿ ಕಲ್ಪಿಸಲಾಗಿದ್ದರೂ ನಿಯಮಗಳು ಹೆಚ್ಚು ಕಟ್ಟುನಿಟ್ಟಾಗಿರಲಿವೆ.
ಇನ್‌ಕಂ ಟ್ಯಾಕ್ಸ್ ರಿಟರ್ನ್ಸ್ (ಐಟಿಆರ್) ಸಲ್ಲಿಕೆಗೆ ಅಂತಿಮ ಗಡುವನ್ನು ಆಗಸ್ಟ್ 31ಕ್ಕೆ ವಿಸ್ತರಿಸಲಾಗಿದೆ.