
ಲಾಸ್ ಏಂಜಲೀಸ್, ಮಾರ್ಚ್ 31: ಎಂಥಾ ನೀಚ ಕೃತ್ಯ, ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಲ್ಲೂ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯಗಳು ನಡೆಯುತ್ತಿರುವುದು ಆತಂಕಕಾರಿ ಸಂಗತಿ. ಲಾಸ್ ಏಂಜಲೀಸ್ ನ ಸೂಪರ್ ಮಾರ್ಕೆಟ್ ನಲ್ಲಿ ವ್ಯಕ್ತಿ ಯುವತಿಗೆ ಕಿರುಕುಳ(ದೈಹಿಕ ಕಿರುಕುಳ) ನೀಡಿರುವ ಘಟನೆಯಾಗಿದೆ. ವಿಡಿಯೋ ಕೂಡ ವೈರಲ್ ಆಗಿದ್ದು, ಆತನ ಕೃತ್ಯದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಸೂಪರ್ ಮಾರ್ಕೆಟ್ ನಲ್ಲಿ ವ್ಯಕ್ತಿಯೊಬ್ಬ ಪ್ಯಾಂಟ್ ಸಡಿಲಿಸಿ ಗುಪ್ತಾಂಗವನ್ನು ಯುವತಿಯೊಬ್ಬಳ ಕಿವಿಗೆ ತಾಗಿಸಿರುವ ಘಟನೆ ಇದಾಗಿದೆ. ಲಾಸ್ ಏಂಜಲೀಸ್ ಕೌಂಟಿಯ ಹೋಲ್ ಫುಡ್ಸ್ ಈ ಘಟನೆ ನಡೆದಿದೆ. ಯುವತಿಯೊಬ್ಬಳು ಮಾರುಕಟ್ಟೆಯಲ್ಲಿ ಮನೆಗೆ ಬೇಕಾದ ವಸ್ತುಗಳನ್ನು ಹುಡುಕುತ್ತಿದ್ದಾಗ ಆ ವ್ಯಕ್ತಿ ಹಿಂದೆ ಬಂದು ನಿಂತು ಅನುಚಿತವಾಗಿ ವರ್ತಿಸಿದ್ದಾನೆ.
ಮತ್ತಷ್ಟು ಓದಿ: ದಾರಿಯುದ್ಧಕ್ಕೂ ಯುವತಿಯ ಮೈಮುಟ್ಟಿ ಅಸಭ್ಯ ವರ್ತನೆ: ರಾಪಿಡೋ ಬೈಕ್ ಚಾಲಕ ಮೊಹಮ್ಮದ್ ಖಾಜಾ ಬಂಧನ
ಅಷ್ಟೇ ಅಲ್ಲದೆ ಪ್ಯಾಂಟ್ ಜಿಪ್ ತೆರೆದು ಆಕೆಯ ಕಿವಿಗೆ ಗುಪ್ತಾಂಗವನ್ನು ತಾಕಿಸಿದ್ದಾನೆ. ಕೂಡಲೇ ಎಚ್ಚೆತ್ತುಕೊಂಡ ಯುವತಿ ಅಲ್ಲಿಂದ ಓಡಿ ಹೋಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಅಧಿಕಾರಿಗಳು ಬರುವಷ್ಟರಲ್ಲಿ ಆತ ಅಲ್ಲಿಂದ ಕಾಲ್ಕಿತ್ತಿದ್ದ. ಆ ಕೃತ್ಯ ಎಸಗುವ ಸಮಯದಲ್ಲಿ ಆತನ ಕೈಯಲ್ಲಿ ಫೋನ್ ಕೂಡ ಇತ್ತು ಎಂದು ಆಕೆ ತಿಳಿಸಿದ್ದಾಳೆ.
ಸದರ್ನ್ ಕ್ಯಾಲಿಫೋರ್ನಿಯಾ ಹೋಲ್ ಫುಡ್ಸ್ನಲ್ಲಿ ವ್ಯಕ್ತಿಯೊಬ್ಬ ತನ್ನ ಪ್ಯಾಂಟ್ ಅನ್ನು ಕೆಳಕ್ಕೆ ಎಳೆದುಕೊಂಡು ಮಹಿಳೆಯ ಕಿವಿಗೆ ತನ್ನ ಜನನಾಂಗವನ್ನು ಒತ್ತಿದರೆ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸಂಪೂರ್ಣ ಹುಚ್ಚುತನ.
ಅವರು ಈ ವಿಕೃತಕಾಮಿಯನ್ನು ಶೀಘ್ರವಾಗಿ ಕಂಡುಹಿಡಿದು ಅವನನ್ನು ಬಂಧಿಸುತ್ತಾರೆ ಎಂದು ನಾನು ಭಾವಿಸುತ್ತೇನೆ.https://t.co/VbICJmznRn
— ಮಾರಿಯೋ ನೌಫಲ್ (@MarioNawfal) ಮಾರ್ಚ್ 30, 2026
ಈ ಮಾರ್ಚ್ 23 ರಂದು ನಡೆದ ಘಟನೆ, ಅಳವಡಿಸಲಾದ ಸಿಸಿಟಿವಿಯಲ್ಲಿ ವಿಡಿಯೋ ಸೆರೆಯಾಗಿದೆ. ಒಬ್ಬ ವ್ಯಕ್ತಿಯ ವಯಸ್ಸು 30 ರ ಆಸುಪಾಸಿರಬಹುದು ಎಂದು ಅಂದಾಜಿಸಲಾಗಿದೆ. ಗಡ್ಡ, ನೀಲಿ ಬಣ್ಣದ ಶಾರ್ಟ್ ಹರಿದ ಜೀನ್ಸ್ ತೊಟ್ಟಿದ್ದ.ದೃಶ್ಯಾವಳಿಗಳು ಮತ್ತು ಇತರ ಸುಳಿವುಗಳನ್ನು ಆರೋಪಿಯನ್ನು ಗುರುತಿಸಲು ಮತ್ತು ಪತ್ತೆ ಮಾಡಲು ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಅಂಗಡಿಯ ಆಡಳಿತ ಮಂಡಳಿಯು ತನಿಖೆಗೆ ಸಹಕರಿಸಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಸದರ್ನ್ ಕ್ಯಾಲಿಫೋರ್ನಿಯಾ ಹೋಲ್ ಫುಡ್ಸ್ನಲ್ಲಿ ವ್ಯಕ್ತಿಯೊಬ್ಬ ತನ್ನ ಪ್ಯಾಂಟ್ ಅನ್ನು ಕೆಳಕ್ಕೆ ಎಳೆದುಕೊಂಡು ಮಹಿಳೆಯ ಕಿವಿಗೆ ತನ್ನ ಜನನಾಂಗವನ್ನು ಒತ್ತಿದರೆ ಕ್ಯಾಮೆರಾದಲ್ಲಿ ಸೆರೆಯಾಗಿದೆ.