Headlines

ಅಮೆರಿಕಾ ವಿಮಾನಗಳಿಗೆ ವಾಯುಪ್ರದೇಶ ನಿರ್ಬಂಧಿಸಿದ ಸ್ಪೇನ್: ಇರಾನ್ ಯುದ್ಧ ಬೆಂಬಲಿಸದ ನ್ಯಾಟೋ ರಾಷ್ಟ್ರಗಳ ವಿರುದ್ಧ ಟ್ರಂಪ್ ಕಿಡಿ | Spain Closes Airspace To Us Warplanes Trump Lashes Out At Nato Countries For Not Supporting Iran War

ಅಮೆರಿಕಾ ವಿಮಾನಗಳಿಗೆ ವಾಯುಪ್ರದೇಶ ನಿರ್ಬಂಧಿಸಿದ ಸ್ಪೇನ್: ಇರಾನ್ ಯುದ್ಧ ಬೆಂಬಲಿಸದ ನ್ಯಾಟೋ ರಾಷ್ಟ್ರಗಳ ವಿರುದ್ಧ ಟ್ರಂಪ್ ಕಿಡಿ | Spain Closes Airspace To Us Warplanes Trump Lashes Out At Nato Countries For Not Supporting Iran War



ಅಮೆರಿಕಾ ವಿಮಾನಗಳಿಗೆ ವಾಯುಪ್ರದೇಶ ನಿರ್ಬಂಧಿಸಿದ ಸ್ಪೇನ್: ಇರಾನ್ ಯುದ್ಧ ಬೆಂಬಲಿಸದ ನ್ಯಾಟೋ ರಾಷ್ಟ್ರಗಳ ವಿರುದ್ಧ ಟ್ರಂಪ್ ಕಿಡಿ | Spain Closes Airspace To Us Warplanes Trump Lashes Out At Nato Countries For Not Supporting Iran War

ಅಮೆರಿಕಾ-ಇಸ್ರೇಲ್‌ನ ಇರಾನ್ ಮೇಲಿನ ಯುದ್ಧ ಮುಂದುವರಿದಿದ್ದು, ಸ್ಪೇನ್‌ನಂತಹ ನ್ಯಾಟೋ ಮಿತ್ರರಾಷ್ಟ್ರಗಳು ಬೆಂಬಲ ನಿರಾಕರಿಸಿವೆ. ಇದರಿಂದ ಅಸಮಾಧಾನಗೊಂಡಿರುವ ಟ್ರಂಪ್, ನ್ಯಾಟೋ ವಿರುದ್ಧ ಕಿಡಿಕಾರಿದ್ದಾರೆ. ಈ ನಡುವೆ, ಪರ್ಶಿಯನ್ ಕೊಲ್ಲಿಯಲ್ಲಿ 18 ಭಾರತೀಯ ಹಡಗುಗಳು ಸಿಲುಕಿಕೊಂಡಿವೆ.

32ನೇ ದಿನಕ್ಕೆ ಕಾಲಿರಿಸಿದ ಅಮೆರಿಕಾ ಇಸ್ರೇಲ್ ಇರಾನ್ ಯುದ್ಧ

ಅಮೆರಿಕಾ ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸುತ್ತಿರುವ ಯುದ್ಧ 32ನೇ ದಿನಕ್ಕೆ ಕಾಲಿರಿಸಿದೆ. ಇರಾನ್ ಮೇಲೆ ಯುದ್ಧ ಸಾರಿದ ಅಮೆರಿಕಾಗೆ ಹಲವು ರಾಷ್ಟ್ರಗಳು ಈಗಾಗಲೇ ಶಾಕ್ ನೀಡಿವೆ. ಇತ್ತೀಚೆಗಷ್ಟೇ ಶ್ರೀಲಂಕಾ ದೇಶವೂ ಇರಾನ್ ಯುದ್ಧದಲ್ಲಿ ಭಾಗಿಯಾಗುವ ಅಮೆರಿಕಾದ ಯುದ್ಧ ವಿಮಾನಗಳಿಗೆ ಲ್ಯಾಂಡಿಂಗ್‌ಗೆ ಅವಕಾಶ ನಿರಾಕರಿಸಿ ತಟಸ್ಥ ನೀತಿ ಕಾಯ್ದುಕೊಂಡಿತ್ತು. ಇದರ ಜೊತೆಗೆ ಈಗ ಸ್ಪೇನ್ ದೇಶವೂ ಕೂಡ ಇರಾನ್ ಯುದ್ಧದಲ್ಲಿ ಭಾಗಿಯಾಗುವ ಅಮೆರಿಕಾದ ವಿಮಾನಗಳಿಗೆ ತನ್ನ ವಾಯು ಪ್ರದೇಶದಲ್ಲಿ ಹಾರಾಡುವುದಕ್ಕೆ ನಿರ್ಬಂಧ ಹೇರಿದೆ. ಹೀಗಿರುವಾಗ ಅಮೆರಿಕಾ ಹಾಗೂ ಡೊನಾಲ್ಡ್ ಟ್ರಂಪ್ ತನ್ನ ಈ ಹುಚ್ಚು ಆಟವನ್ನು ಬೆಂಬಲಿಸದ ನ್ಯಾಟೋ ರಾಷ್ಟ್ರಗಳ ವಿರುದ್ಧ ಕಿಡಿಕಾರಿವೆ. ಅಮೆರಿಕಾ ಇಲ್ಲದೇ ನ್ಯಾಟೋ ಬರೀ ಝೀರೋ ಎಂಬ ಹೇಳಿಕೆ ನೀಡಿದ್ದ ಟ್ರಂಪ್ ಈಗ ಇರಾನ್ ಯುದ್ಧದಲ್ಲಿ ತನ್ನನ್ನು ಬೆಂಬಲಿಸದೇ ಇರುವ ನ್ಯಾಟೋ ರಾಷ್ಟ್ರಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನ್ಯಾಟೋ ರಾಷ್ಟ್ರಗಳ ವಿರುದ್ಧ ಕಿಡಿಕಾರಿದ ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ

ಅಮೆರಿಕಾದ ರಾಜ್ಯ ಕಾರ್ಯದರ್ಶಿ ಮಾರ್ಕೋ ರುಬಿಯೋ ನ್ಯಾಟೋ ರಾಷ್ಟ್ರಗಳ ಬಗ್ಗೆ ಆಕ್ರೋಶ ಹೊರ ಹಾಕಿದ್ದು, ನ್ಯಾಟೋ ಮಿತ್ರರಾಷ್ಟ್ರಗಳು ನಿರ್ಣಾಯಕ ಕ್ಷಣದಲ್ಲಿ ಅಮೆರಿಕವನ್ನು ನಡುನೀರಲ್ಲಿ ಬಿಟ್ಟಿವೆ ಎಂದು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಆರೋಪಿಸಿದ್ದಾರೆ. ಇದು ನ್ಯಾಟೋ ಮೈತ್ರಿಕೂಟದ ಬಗ್ಗೆ ಡೊನಾಲ್ಡ್ ಟ್ರಂಪ್ ಅವರ ನಿಲುವಿನ ಪ್ರತಿಧ್ವನಿಯಾಗಿದೆ. ಇರಾನ್ ಜೊತೆಗಿನ ಸಂಘರ್ಷದಲ್ಲಿ ಭಾಗಿಯಾಗಿರುವ ಅಮೆರಿಕದ ವಿಮಾನಗಳಿಗೆ ಸ್ಪೇನ್ ವಿಮಾನ ತನ್ನ ವಾಯು ಪ್ರದೇಶವನ್ನು ನಿರಾಕರಿಸಿದ ನಂತರ ರೂಬಿಯೋ ಹೀಗೆ ಹೇಳಿದ್ದಾರೆ. ಯುದ್ಧದ ಸಮಯದಲ್ಲಿ ಸದಸ್ಯ ರಾಷ್ಟ್ರಗಳಿಂದ ಸಾಕಷ್ಟು ಬೆಂಬಲ ದೊರೆಯರುವುದ್ದಕ್ಕೆ ರೂಬಿಯೊ ಹತಾಶೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬಿರಿಯಾನಿಯಲ್ಲಿ ಚಿಕನ್ ಲೆಗ್‌ಪೀಸ್ ಸಿಗ್ತಿಲ್ಲ ಅಂತ ಮದುವೆ ಮನೆಯಾಯ್ತು ರಣಾಂಗಣ

ಇತ್ತ ಟ್ರುತ್ ಸೋಶಿಯಲ್ ಮೀಡಿಯಾದಲ್ಲಿ ಯುದ್ಧದ ಅಪ್‌ಡೇಟ್‌ಗಳನ್ನು ಪ್ರಮುಖ ಮಾಹಿತಿಗಳನ್ನು, ತಮ್ಮ ಹೇಳಿಕೆಗಳನ್ನು ಪೋಸ್ಟ್ ಮಾಡಿ ಜಗತ್ತಿಗೆ ಸಾರುವ ಡೋನಾಲ್ಡ್ ಟ್ರಂಪ್ ಈಗ ಇರಾನ್ ಮೇಲೆ ಮಿಲಿಟರಿ ದಾಳಿಯ ವೀಡಿಯೋವೊಂದನ್ನು ಈಗ ಈ ಸೋಶಿಯಲ್ ಸೈಟ್‌ನಲ್ಲಿ ಹಂಚಿಕೊಂಡಿದ್ದಾರೆ. ಆದರೆ ಈ ದಾಳಿ ಎಲ್ಲಿ ನಡೆದಿದೆ ಎಂಬ ಬಗ್ಗೆ ಅವರು ಸ್ಪಷ್ಟ ಮಾಹಿತಿ ನೀಡಿಲ್ಲ, ಈಗಾಗಲೇ ಅಮೆರಿಕಾ ಅಧ್ಯಕ್ಷನ ಯುದ್ಧ ದಾಹಕ್ಕೆ ಸ್ವದೇಶದಲ್ಲೇ ವಿರೋಧ ಕೇಳಿ ಬಂದಿರೋದು ಗೊತ್ತೇ ಇದೆ. ಅಮೆರಿಕಾದ ಹಲವು ಭಾಗಗಳು ಹಾಗೂ ಯುರೋಪ್‌ನ ಹಲವು ದೇಶಗಳು ಯುದ್ಧವನ್ನು ಖಂಡಿಸಿ ನೋ ಕಿಂಗ್ ಎಂಬ ಬೋರ್ಡ್‌ಗಳನ್ನು ಪ್ರದರ್ಶಿಸುತ್ತಾ ಪ್ರತಿಭಟನೆ ನಡೆಸುತ್ತಿದ್ದಾರೆ. ಅಮೆರಿಕದಲ್ಲಿ ನಡೆದ ಪ್ರತಿಭಟನೆಯಲ್ಲಿ ಲಕ್ಷಾಂತರ ಜನ ಭಾಗವಹಿಸಿದ್ದಾರೆ. 50 ರಾಜ್ಯಗಳಲ್ಲಿ 3,100ಕ್ಕೂ ಹೆಚ್ಚು ಸಮಾವೇಶಗಳು ಜರುಗಿವೆ.

ಪರ್ಷಿಯನ್ ಕೊಲ್ಲಿಯಲ್ಲಿ ಸಿಲುಕಿದ 18 ಭಾರತೀಯ ಹಡಗುಗಳು

ಈ ನಡುವೆ ಇರಾನ್ ಅಮೆರಿಕಾ ಯುದ್ಧದಿಂದಾಗಿ 18 ಭಾರತೀಯ ಹಡಗುಗಳು ಹಾಗೂ ಅದರಲ್ಲಿರುವ 485 ಭಾರತೀಯ ಸಿಬ್ಬಂದಿ ಪರ್ಶಿಯನ್ ಕೊಲ್ಲಿಯಲ್ಲಿ ಸಿಲುಕಿಕೊಂಡಿವೆ ಎಂದು ವರದಿಯಾಗಿದ್ದು, ಎಲ್ಲರೂ ಸುರಕ್ಷಿತವಾಗಿದ್ದು, ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಜಲಮಾರ್ಗ ಸಚಿವಾಲಯ ತಿಳಿಸಿದೆ. ಸೋಮವಾರ ಇರಾನ್‌ನಲ್ಲಿ ನಡೆದ ಅಮೆರಿಕ ದಾಳಿಯಲ್ಲಿ ಮಹನ್ ಏರ್‌ಲೈನ್ಸ್ ವಿಮಾನಕ್ಕೆ ಹಾನಿಯಾಗಿದೆ. ಈ ವಿಮಾನವು ಮಶಾದ್ ವಿಮಾನ ನಿಲ್ದಾಣದಲ್ಲಿ ನಿಂತಿತ್ತು ಮತ್ತು ಭಾರತದಿಂದ ಔಷಧಿಗಳು ಮತ್ತು ಇತರ ಅಗತ್ಯ ಪರಿಹಾರ ಸಾಮಗ್ರಿಗಳನ್ನು ತರಲು ನವದೆಹಲಿಗೆ ಹಾರಲು ಸಿದ್ಧವಾಗಿತ್ತು ಎಂದು ವರದಿಯಾಗಿದೆ. ಆದರೆ ಈ ದಾಳಿಯ ಬಗ್ಗೆ ಅಮೆರಿಕದಿಂದ ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲ.

ಇದನ್ನೂ ಓದಿ: MRI ಸ್ಕ್ಯಾನಿಂಗ್ ವೇಳೆ ಪುಟ್ಟ ಮಗನಿಗೆ ಭಯವಾಗುತ್ತೆ ಅಂತ ಜೊತೆಗೆ ಮೆಷಿನ್ ಒಳಗೆ ಹೋದ ಅಪ್ಪ



Source link

Leave a Reply

Your email address will not be published. Required fields are marked *