Headlines

Hanuman Jayanti 2026: ಹನುಮ ಜಯಂತಿ ಯಾವಾಗ? ಏಪ್ರಿಲ್ 1 ಅಥವಾ 2..? ಸರಿಯಾದ ದಿನಾಂಕ ಇಲ್ಲಿದೆ

Hanuman Jayanti 2026: ಹನುಮ ಜಯಂತಿ ಯಾವಾಗ? ಏಪ್ರಿಲ್ 1 ಅಥವಾ 2..? ಸರಿಯಾದ ದಿನಾಂಕ ಇಲ್ಲಿದೆ


Hanuman Jayanti 2026: ಹನುಮ ಜಯಂತಿ ಯಾವಾಗ? ಏಪ್ರಿಲ್ 1 ಅಥವಾ 2..? ಸರಿಯಾದ ದಿನಾಂಕ ಇಲ್ಲಿದೆ

ಭಾರತೀಯ ಸಂಸ್ಕೃತಿಯಲ್ಲಿ ಹನುಮ ಜಯಂತಿಯು ಕೇವಲ ಒಂದು ಹಬ್ಬವಲ್ಲ; ಅದು ಅಚಲ ಭಕ್ತಿ ಮತ್ತು ಅಪ್ರತಿಮ ಸಾಹಸದ ಸಂಕೇತ. ಹನುಮಂತನನ್ನು ಭಕ್ತಿ, ಶಕ್ತಿ, ಧೈರ್ಯ ಮತ್ತು ಕರ್ಮ ಜ್ಞಾನದ ಮೂರ್ತರೂಪವೆಂದು ಪೂಜಿಸಲು. ವಾಯುದೇವನ ಮಗನಾದ ಅವನನ್ನು “ಮಾರುತಿ”, “ಆಂಜನೇಯ” ಮತ್ತು “ಪವನಸುತ” ಎಂಬ ದಿವ್ಯ ನಾಮಗಳಿಂದ ಕರೆಯಲಾಗುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಚೈತ್ರ ಮಾಸದ ಹುಣ್ಣಿಮೆ ತಿಥಿಯು ಏಪ್ರಿಲ್ 1 ಗಂಟೆಗೆ 7.06 ರಿಂದ ಶುರುವಾಗಿ ಏಪ್ರಿಲ್ 2 ರ ಬೆಳಗ್ಗೆ 7. 41ಕ್ಕೆ ಕೊನೆಗೊಳ್ಳುತ್ತದೆ. ಆದ್ದರಿಂದ ಈ ಪವಿತ್ರ ಹಬ್ಬವನ್ನು ಏಪ್ರಿಲ್ 2 ರಂದು ಭಕ್ತಿ ಸಡಗರದಿಂದ ಆಚರಿಸಲಾಗುತ್ತಿದೆ.

ಹನುಮಂತನ ಜನ್ಮದ ಹಿಂದೆ ಒಂದು ರೋಚಕ ಕಥೆಯಿದೆ. ಅಂಜನಾದೇವಿ ಮತ್ತು ಕೇಸರಿ ದಂಪತಿಗಳು ಪುತ್ರ ಸಂತಾನಕ್ಕಾಗಿ ಶಿವನನ್ನು ಕುರಿತು ಕಠಿಣ ತಪಸ್ಸು ಮಾಡುತ್ತಾರೆ. ಅಂಜನಾದೇವಿಯ ಭಕ್ತಿಗೆ ಮೆಚ್ಚಿದ ಪರಶಿವನು ತನ್ನ ಅಂಶವನ್ನೇ ಮಗನಾಗಿ ನೀಡಲು ಅನುಗ್ರಹಿಸುತ್ತಾನೆ. ವಾಯುದೇವನು ಶಿವನ ದಿವ್ಯ ಶಕ್ತಿಯನ್ನು ಹೊತ್ತು ತಂದು ಅಂಜನಾದೇವಿಗೆ ತಲುಪಿಸಿದ ಕಾರಣ, ಹನುಮಂತನು ವಾಯುಪುತ್ರನಾಗಿ ಜನಿಸುತ್ತಾನೆ. ಈ ದಿನವನ್ನು ನಾವು ಹನುಮ ಜಯಂತಿಯನ್ನಾಗಿ ಆಚರಿಸಿ, ಮಹಾಶಕ್ತಿಯನ್ನು ಸ್ಮರಿಸುತ್ತೇವೆ.

ಹನುಮಂತನ ಜೀವನವು ನಮಗೆ “ಭಕ್ತಿ”ಯ ನಿಜವಾದ ಅರ್ಥವನ್ನು ಕಲಿಸುತ್ತದೆ. ಶ್ರೀರಾಮನ ಪರಮ ಭಕ್ತನಾಗಿ, ಅವನು ತನ್ನ ಸಂಪೂರ್ಣ ಅಸ್ತಿತ್ವವನ್ನೇ ದೈವಸೇವೆಗೆ ಸಮರ್ಪಿಸಿದವನು. ಹನುಮಂತನನ್ನು ಪೂಜಿಸುವುದರಿಂದ ಭಕ್ತರಲ್ಲಿ ಪ್ರಾಮಾಣಿಕತೆ ಮೂಡುತ್ತದೆ ಮತ್ತು ಕಷ್ಟದ ಸಮಯದಲ್ಲಿ ಮನಸ್ಸು ಹಾಗೂ ದೇಹ ಸಮರ್ಪಣೆಯಿಂದ ಪ್ರಾರ್ಥಿಸಿದರೆ ಎಂತಹ ಸಂಕಷ್ಟಗಳಿಂದಲೂ ರಕ್ಷಣೆ ಸಿಗುತ್ತದೆ ಎಂಬುದು ಭಕ್ತರ ಅಚಲ ನಂಬಿಕೆ. ಅವನು ಪ್ರತಿ ಭಕ್ತನಿಗೂ ಒಂದು ಆದರ್ಶ ಮಾರ್ಗದರ್ಶಕನಾಗಿದ್ದಾನೆ.

ದೈಹಿಕ ಮತ್ತು ಮಾನಸಿಕ “ಶಕ್ತಿ”ಯ ವಿಚಾರಕ್ಕೆ ಬಂದರೆ ಹನುಮಂತನೇ ಸರ್ವೋಚ್ಚ. ಧೈರ್ಯ, ಸಾಹಸ ಮತ್ತು ಬದ್ಧತೆಯ ಸಾಕಾರ ರೂಪ ಆತ. ಹನುಮಂತನ ಆರಾಧನೆಯು ಭಕ್ತರಲ್ಲಿ ವಿಶ್ವಾಸ ಮತ್ತು ಇಚ್ಛಾಶಕ್ತಿಯನ್ನು ತುಂಬುತ್ತದೆ. ಅಹಂಕಾರ ಮತ್ತು ದುರಾಸೆಯಿಂದ ಮುಕ್ತವಾದ “ಕರ್ಮ” ಹನುಮಂತನ ಮತ್ತೊಂದು ವಿಶೇಷತೆ. ತನ್ನಲ್ಲಿ ಅಪಾರ ಶಕ್ತಿಯಿದ್ದರೂ ಅದನ್ನು ಸ್ವಂತಕ್ಕಲ್ಲದೆ, ಕೇವಲ ಪರಮಾತ್ಮನ ಮತ್ತು ಧರ್ಮದ ಸೇವೆಗಾಗಿ ಬಳಸಿದ ಮಹಾನುಭಾವ ಈತ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಬೇಕು ಯಾಕೆ ಗೊತ್ತಾ?

ಈ ಪವಿತ್ರ ದಿನದಂದು ಭಕ್ತರು ಸೂರ್ಯೋದಯಕ್ಕೂ ಮುನ್ನವೇ ಎದ್ದು ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ಹನುಮಾನ್ ಚಾಲೀಸಾದ ಪಠಣವು ವಾತಾವರಣದಲ್ಲಿ ಆಧ್ಯಾತ್ಮಿಕ ಕಂಪನವನ್ನು ಸೃಷ್ಟಿಸುತ್ತದೆ. ಅನೇಕರು ಉಪವಾಸ ವ್ರತವನ್ನು ಆಚರಿಸುವ ಮೂಲಕ ಶಾಂತಿ ಮತ್ತು ಆರೋಗ್ಯವನ್ನು ವೃದ್ಧಿಸಿಕೊಳ್ಳುತ್ತಾರೆ. ಮೂರ್ತಿಯ ಹೂವು, ಹಣ್ಣು ಮತ್ತು ಪಂಚಾಮೃತಗಳಿಂದ ಪೂಜಿಸಿ, ಧ್ಯಾನ ಮತ್ತು ಜಪದ ಮೂಲಕ ಹನುಮಂತನ ಮಹಿಮೆಯನ್ನು ಕೊಂಡಾಡಿದರು.

ಹನುಮ ಜಯಂತಿಯ ಆಚರಣೆಯು ಕೇವಲ ಧಾರ್ಮಿಕ ವಿಧಿಯಲ್ಲ, ಅದು ಭಕ್ತರ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತರುತ್ತದೆ. ಇದು ಮನಸ್ಸಿನ ಭಯ ಮತ್ತು ಆತಂಕಗಳನ್ನು ದೂರಮಾಡಿ, ದೈಹಿಕ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಹೊಂದಿದೆ. ಜೀವನದ ಕಠಿಣ ಪರಿಸ್ಥಿತಿಗಳಲ್ಲಿ ತಾಳ್ಮೆ ಮತ್ತು ಧೈರ್ಯದಿಂದ ವರ್ತಿಸುವ ಕಲೆಯನ್ನು ಇದು ಕಲಿಸುತ್ತದೆ. ಅಂತಿಮವಾಗಿ, ಶ್ರೀರಾಮನ ಮೇಲಿನ ಭಕ್ತಿಯ ಮೂಲಕ ಧರ್ಮಮಾರ್ಗದಲ್ಲಿ ನಡೆಯಲು ಹನುಮಂತನು ನಮಗೆ ದಾರಿದೀಪವಾಗುತ್ತಾನೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 



Source link

Leave a Reply

Your email address will not be published. Required fields are marked *