ಆದಾಯ ತೆರಿಗೆ ಇಲಾಖೆಯು ನಗದು ವ್ಯವಹಾರಗಳ ಮೇಲೆ ಕಠಿಣ ಮಿತಿಗಳನ್ನು ವಿಧಿಸಿದೆ. ದಿನನಿತ್ಯದ ವ್ಯವಹಾರ, ಆಸ್ತಿ ಖರೀದಿ, ಕೈಸಾಲ, ಮತ್ತು ಬಾಡಿಗೆ ಅಡ್ವಾನ್ಸ್ ಸೇರಿದಂತೆ ಹಲವು ವಹಿವಾಟುಗಳಿಗೆ ಮಿತಿ ನಿಗದಿಪಡಿಸಲಾಗಿದ್ದು, ನಿಯಮ ಉಲ್ಲಂಘಿಸಿದರೆ 100% ದಂಡ ತೆರಬೇಕಾಗುತ್ತದೆ.

ಆದಾಯ ತೆರಿಗೆ ಇಲಾಖೆಯ ನಿಯಮಗಳ ಪ್ರಕಾರ ನಗದು ವ್ಯವಹಾರಕ್ಕೆ ಸಂಬಂಧಿಸಿದಂತೆ ಅತ್ಯಂತ ಕಠಿಣವಾದ ಹೊಸ ಮಿತಿಗಳನ್ನು ಜಾರಿಗೆ ತರಲಾಗಿದೆ. ನಿಯಮ ಮೀರಿದರೆ ನೀವು ವ್ಯವಹಾರ ಮಾಡಿದ ಮೊತ್ತಕ್ಕೆ ಸಮನಾದ (100%) ದಂಡ ತೆರಬೇಕಾಗುತ್ತದೆ.

ಯಾವುದೇ ವ್ಯಾಪಾರಸ್ಥರು ಒಬ್ಬ ವ್ಯಕ್ತಿಯಿಂದ ಒಂದೇ ದಿನದಲ್ಲಿ 2 ಲಕ್ಷ ರೂಪಾಯಿಗಿಂತ ಹೆಚ್ಚು ನಗದು ಸ್ವೀಕರಿಸುವಂತಿಲ್ಲ. ಒಂದು ವೇಳೆ ಮಿತಿ ಮೀರಿದರೆ, ಆದಾಯ ತೆರಿಗೆ ಕಾಯ್ದೆಯಡಿ ಸ್ವೀಕರಿಸಿದ ಮೊತ್ತಕ್ಕೆ ಸಮನಾದ (100%) ದಂಡ ವಿಧಿಸಲಾಗುತ್ತದೆ.

ಪ್ರಾಪರ್ಟಿ ಡೀಲ್ ಮಾಡುವಾಗ 20,000 ರೂಪಾಯಿಗಿಂತ ಹೆಚ್ಚು ನಗದನ್ನು ಮುಂಗಡವಾಗಲಿ ಅಥವಾ ಪೂರ್ಣ ಹಣವಾಗಲಿ ನೀಡುವಂತಿಲ್ಲ. ಈ ಮಿತಿ ಮೀರಿದ ವ್ಯವಹಾರಕ್ಕೆ ಪೂರ್ಣ ಮೊತ್ತದಷ್ಟು ದಂಡ ಬೀಳಲಿದೆ.

ಒಂದು ವೇಳೆ ಆಸ್ತಿ ಖರೀದಿ ಒಪ್ಪಂದ (Property Deal) ರದ್ದಾದಲ್ಲಿ, ವಾಪಸ್ ನೀಡುವ ಹಣವು 20,000 ರೂ. ಮೀರಿದ್ದರೆ ಅದನ್ನು ನಗದು ರೂಪದಲ್ಲಿ ನೀಡುವಂತಿಲ್ಲ. ನೀಡಿದಲ್ಲಿ ಅಷ್ಟೇ ಮೊತ್ತದ ಪೆನಾಲ್ಟಿ ಅನ್ವಯವಾಗುತ್ತದೆ.

ವೈಯಕ್ತಿಕವಾಗಿ ನೀಡುವ ಅಥವಾ ತೆಗೆದುಕೊಳ್ಳುವ ಕೈಸಾಲದ ಮಿತಿ ಕೂಡ 20,000 ರೂ. ಮಾತ್ರ. ಈ ಮಿತಿಗಿಂತ ಹೆಚ್ಚು ನಗದು ರೂಪದಲ್ಲಿ ಸಾಲ ಪಡೆದರೂ ಅಥವಾ ಮರುಪಾವತಿ ಮಾಡಿದರೂ 100% ದಂಡ ಪಾವತಿಸಬೇಕಾಗುತ್ತದೆ.

ಬಾಡಿಗೆಗೆ ಮನೆ ಅಥವಾ ಕಚೇರಿ ಪಡೆಯುವಾಗ ನೀಡುವ ಸೆಕ್ಯುರಿಟಿ ಡಿಪಾಸಿಟ್ (Security Deposit) 20,000 ರೂ.ಗಿಂತ ಹೆಚ್ಚಿದ್ದರೆ ಅದನ್ನು ನಗದು ರೂಪದಲ್ಲಿ ನೀಡುವಂತಿಲ್ಲ. ನೀಡಿದಲ್ಲಿ ಅಷ್ಟೇ ಮೊತ್ತದ ದಂಡ ವಿಧಿಸಲು ಅವಕಾಶವಿದೆ.

ಬಾಡಿಗೆದಾರರು ಮನೆ ಖಾಲಿ ಮಾಡುವಾಗ ಮಾಲೀಕರು ಅಡ್ವಾನ್ಸ್ ಹಣವನ್ನು ಹಿಂತಿರುಗಿಸುವಾಗಲೂ ಎಚ್ಚರಿಕೆ ವಹಿಸಬೇಕು. 20,000 ರೂ.ಗಿಂತ ಹೆಚ್ಚಿನ ಮೊತ್ತವನ್ನು ನಗದು ರೂಪದಲ್ಲಿ ವಾಪಸ್ ನೀಡಿದರೂ ಕಠಿಣ ದಂಡ ಅನ್ವಯವಾಗುತ್ತದೆ.

ಒಬ್ಬ ವ್ಯಾಪಾರಸ್ಥರು ತಮ್ಮ ವ್ಯವಹಾರದ ಉದ್ದೇಶಕ್ಕಾಗಿ ಒಬ್ಬ ವ್ಯಕ್ತಿಗೆ ಒಂದೇ ದಿನದಲ್ಲಿ 10,000 ರೂ.ಗಿಂತ ಹೆಚ್ಚು ನಗದು ಪಾವತಿ ಮಾಡಿದರೆ, ಅಂತಹ ಪಾವತಿಯನ್ನು ಆದಾಯ ತೆರಿಗೆ ಲೆಕ್ಕಾಚಾರದಲ್ಲಿ ‘ಖರ್ಚು’ (Expense) ಎಂದು ಪರಿಗಣಿಸಲಾಗುವುದಿಲ್ಲ.

Source link
ನಗದು ವ್ಯವಹಾರಕ್ಕೆ ಹೊಸ ನಿಯಮ: ಕೈಸಾಲಕ್ಕೂ ಇನ್ನು ಕಂಡೀಷನ್; ಒಂದು ತಪ್ಪು, 100% ದಂಡ