
ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾ ಈ ವರ್ಷ ದೀಪಾವಳಿಯಲ್ಲಿ ರಿಲೀಸ್ ಆಗಲಿದೆ. ಮೊದಲ ಭಾಗ ಈ ವರ್ಷ ತೆರೆಗೆ ಬಂದರೆ, ಎರಡನೇ ಭಾಗ 2027ರ ದೀಪಾವಳಿಗೆ ತೆರೆಗೆ ಬರಲಿದೆ. ಈ ಚಿತ್ರದ ಪ್ರಚಾರವನ್ನು ಇನ್ನೂ ಆರಂಭಿಸಿಲ್ಲ ಎಂಬ ಅಭಿಪ್ರಾಯವಿದೆ. ಈಗ ಇದಕ್ಕೆ ಉತ್ತರವಾಗಿ ಸಿನಿಮಾ ತಂಡ ಪ್ರಚಾರ ಆರಂಭಿಸಿದೆ. ‘ರಾಮಾಯಣ’ ತಂಡ ಇತ್ತೀಚೆಗೆ ಲಾಸ್ ಏಂಜಲೀಸ್‌ಗೆ ತೆರಳಿತ್ತು. ಅಲ್ಲಿ ‘ರಾಮಾಯಣ’ ಸಿನಿಮಾದ ಟೀಸರ್ ರಿಲೀಸ್ ಮಾಡಲಾಗಿತ್ತು. ಆದರೆ, ಈ ಶೋನಲ್ಲಿ ಯಶ್ ಇರಲಿಲ್ಲ.
ರಣಬೀರ್ ಕಪೂರ್ ಅವರು ‘ರಾಮಾಯಣ’ ಸಿನಿಮಾದಲ್ಲಿ ರಾಮನ ಪಾತ್ರ ಮಾಡುತ್ತಿದ್ದಾರೆ. ಸೀತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಾವಣನಾಗಿ ಯಶ್ ನಟಿಸುತ್ತಿದ್ದಾರೆ. ಈ ಟೀಸರ್ ಶೋನಲ್ಲಿ ಭಾಗವಹಿಸಿದ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಸಿನಿಮಾದ ಗ್ರಾಫಿಕ್ಸ್ ನ ಹಾಡಿ ಹೊಗಳಿದ್ದಾರೆ. ಈ ಬಗ್ಗೆ ಕೇಳಿ ರಣಬೀರ್ ಕಪೂರ್ ಕೂಡ ಖುಷಿಪಟ್ಟಿದ್ದಾರೆ.
ರಾಮಾಯಣ ಟೀಸರ್ ಸ್ಕ್ರೀನಿಂಗ್ ವಿವರಗಳು
ರೆಡ್ಡಿಟ್ನಲ್ಲಿ ಸ್ಕೂಪರ್ ಈ ಕೆಳಗಿನ ವಿವರಗಳನ್ನು ಬಹಿರಂಗಪಡಿಸಿದೆ #ರಾಮಾಯಣ LA ನಲ್ಲಿ ಟೀಸರ್ ಸ್ಕ್ರೀನಿಂಗ್ ನಡೆಯಿತು:
~ಟೀಸರ್ ಚೆನ್ನಾಗಿದೆ, ಅತ್ಯುತ್ತಮವಾಗಿಲ್ಲ!
~ಟೀಸರ್ ಡೈಲಾಗ್ಸ್+ಸಂಗೀತ+ವಾಯ್ಸ್ ಓವರ್ ಹೊಂದಿದೆ
~#ರಣಬೀರ್ ಕಪೂರ್ ರಾಮನು ಮಧ್ಯವನ್ನು ಅನುಭವಿಸುತ್ತಾನೆ (ಮೂಲದ ಪ್ರಕಾರ).
~VFX ಕೆಲಸ, ಮತ್ತೊಮ್ಮೆ ಚೆನ್ನಾಗಿದೆ,… pic.twitter.com/DqW3Twrbnb— ಇಲ್ಯೂಷನ್ಮಿನಾಟಿ (@illuminatiGuyy) ಮಾರ್ಚ್ 31, 2026
‘ಅದ್ಭುತ ವಿಶ್ಯುವಲ್ಸ್’ ಎಂದು ಕೆಲವರು ಹೇಳಿದ್ದಾರೆ. ‘ಈ ಸಿನಿಮಾ ನೋಡಲು ಕಾದಿದ್ದೇವೆ’ ಎಂದು ಇನ್ನೂ ಕೆಲವರು ಹೇಳಿದ್ದಾರೆ. ಈ ಟೀಸರ್ ನೋಡಲು ಅಭಿಮಾನಿಗಳು ಕಾದಿದ್ದಾರೆ. ಏಪ್ರಿಲ್ 2 ರಂದು ಟೀಸರ್ ವೀಕ್ಷಿಸಲು ಬರಲಿದೆ. ಯಶ್ ಅವರನ್ನು ರಾವಣನಾಗಿ ನೋಡಲು ಫ್ಯಾನ್ಸ್ ಕಾದಿದ್ದಾರೆ.
ಇದನ್ನೂ ಓದಿ: ರಣಬೀರ್, ಸಾಯಿ ಪಲ್ಲವಿ ‘ರಾಮಾಯಣ’ ಫೋಟೋ ಫೇಕ್; ಅಸಲಿ ವಿಷಯ ಬಿಚ್ಚಿಟ್ಟ ನಟ
‘ರಾಮಾಯಣ’ ಚಿತ್ರಕ್ಕೆ 2 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಇಷ್ಟು ದೊಡ್ಡ ಮೊತ್ತದ ಹಣವನ್ನು ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ರಿಕವರಿ ಮಾಡಲಿದೆ ಎಂಬುದು ಸದ್ಯದ ಪ್ರಶ್ನೆ. ಎಲ್ಲಕ್ಕಿಂತ ಮುಖ್ಯವಾಗಿ, ಸಿನಿಮಾ ಸೂಕ್ಷ್ಮ ವಿಷಯಗಳ ಮೇಲಿದೆ. ಹೀಗಾಗಿ, ಕಥೆಯಲ್ಲಿ ಕೊಂಚ ಬದಲಾವಣೆ ಆದರೂ ಸಾಕಷ್ಟು ಟ್ರೋಲ್ ಎದುರಿಸಬೇಕಾದ ಪರಿಸ್ಥಿತಿ ಬರುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.