
ಮುಜಾಫರ್ನಗರ, ಮಾರ್ಚ್ 31: ಮುಜಾಫರ್ನಗರದಲ್ಲಿ ನಡೆದ ಅಪಘಾತದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.ಮರಳು ತುಂಬಿದ್ದ ಟ್ರಕ್ ಒಂದು ಅಣ್ಣ ತಂಗಿ ಹೋಗುತ್ತಿದ್ದ ಬೈಕ್ಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದು, ಸವಾರ ನಿಯಂತ್ರಣ ತಪ್ಪಿ ತಂಗಿ ಜತೆ ನಡು ರಸ್ತೆಗೆ ಬಿದ್ದಿದ್ದಾರೆ. ಆಗ ಟ್ರಕ್ ಬೈಕ್ ಮೇಲೆ ಹರಿದಿದೆ. ಅವರಿಬ್ಬರು ಬೈಕ್ ಬಿಟ್ಟು ರಸ್ತೆಗೆ ಬಿದ್ದ ಪರಿಣಾಮ ಸ್ವಲ್ಪದರಲ್ಲೇ ಅಪಘಾತ ತಪ್ಪಿದೆ. ಕೆಲವು ದಿನಗಳ ಹಿಂದೆ ದೆಹಲಿ-ಹರಾಡೂನ್ ರಾಷ್ಟ್ರೀಯ ಹೆದ್ದಾರಿ 58 ರಲ್ಲಿ ನ್ಯೂಂಡಿ ಕೊತ್ವಾಲಿ ಪ್ರದೇಶದಲ್ಲಿ ಈ ಘಟನೆ ನಡೆದಿತ್ತು. ಸಹರಾನ್ಪುರದಿಂದ ಬರುತ್ತಿದ್ದ ನಿಯಂತ್ರಣ ತಪ್ಪಿದ ಟ್ರಕ್ ಎರಡು ವಾಹನಗಳಿಗೆ ಡಿಕ್ಕಿ ಹೊಡೆದು ನಂತರ ಬೈಕ್ ಮೇಲೆ ಹರಿದಿತ್ತು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ