ಮೇಘನಾ ರಾಜ್ ಮಗ ರಾಯನ್ ಹಾಗೂ ತಮ್ಮ ಕುಟುಂಬದ ಜೊತೆ ವೆಕೇಶನ್ ತೆರಳಿದ್ದಾರೆ. ಈ ಸಂದರ್ಭದ ಫೋಟೋ ಹಂಚಿಕೊಂಡಿದ್ದು, ಅದು ವೈರಲ್ ಆಗಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಮೇಘನಾ ರಾಜ್ ಅವರ ಮಗ ರಾಯನ್ ಓದುವುದರಲ್ಲಿ ತೊಡಗಿಸಿಕೊಂಡಿದ್ದಾನೆ. ಈಗ ಸಮ್ಮರ್ ವೆಕೇಶನ್ ಶುರುವಾಗಿದೆ. ಹೀಗಾಗಿ, ಮಗನ ಜೊತೆ ಮೇಘನಾ ಪ್ರವಾಸ ತೆರಳಿದ್ದಾರೆ. ಈ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಮೇಘನಾ ರಾಜ್ ಅವರಿಗೆ ಈಗ ಮಗನ ಪ್ರಪಂಚ. ಚಿರಂಜೀವಿ ಸರ್ಜಾ ನಿಧನ ಹೊಂದಿದಾಗ ಮೇಘನಾ ರಾಜ್ ಪ್ರೆಗ್ನೆಂಟ್ ಆಗಿದ್ದರು. ಚಿರುನ ಕಳೆದುಕೊಂಡುದಲ್ಲಿ ಕೈ ತೊಳೆದರು. ಆ ಬಳಿಕ ಅವರ ಬದುಕು ನಿಧಾನವಾಗಿ ಬದಲಾಗುತ್ತಾ ಬಂತು.
ಮೇಘನಾ ರಾಜ್ ಅವರು ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ಅಲ್ಲೊಂದು, ಇಲ್ಲೊಂದು ಸಿನಿಮಾ ಒಪ್ಪಿಕೊಂಡು ಅವರು ನಟಿಸುತ್ತಿದ್ದಾರೆ. ಅವರ ಸಂಪೂರ್ಣ ಗಮನ ಮಗನ ಸಾಕುವುದರ ಮೇಲೆಯೇ ಇದೆ.
ಮೇಘನಾ ರಾಜ್ ತಂದೆ ಸುಂದರ್ ರಾಜ್ ಹಾಗೂ ಪ್ರಮಿಳಾ ಜೋಶಾಯಿ ಅವರು ಕೂಡ ಮೇಘನಾ ಬೆಂಬಲಕ್ಕೆ ನಿಂತಿದ್ದಾರೆ. ಅವರು ಮಗಳು ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳನ್ನು ಬೆಂಬಲಿಸುತ್ತಾ ಬರುತ್ತಿದ್ದಾರೆ.




