ಬೆಂಗಳೂರಲ್ಲಿ ಪೊಲೀಸರು ಇದ್ದಾರಾ.. ಇಲ್ವಾ?: ಹೈವೇಯಲ್ಲೇ ಕಾರಿನ ರೂಫ್ ಟಾಪ್ ಓಪನ್ ಮಾಡಿ ಬಾಟಲಿ ಎತ್ತಿದ ವ್ಯಕ್ತಿ

ಬೆಂಗಳೂರಲ್ಲಿ ಪೊಲೀಸರು ಇದ್ದಾರಾ.. ಇಲ್ವಾ?: ಹೈವೇಯಲ್ಲೇ ಕಾರಿನ ರೂಫ್ ಟಾಪ್ ಓಪನ್ ಮಾಡಿ ಬಾಟಲಿ ಎತ್ತಿದ ವ್ಯಕ್ತಿ


ಬೆಂಗಳೂರಿನಲ್ಲಿ ಬಟ್ಟೆ ಇದ್ದಾರಾ.. ಇಲ್ವಾ?: ಹೈವೇಯಲ್ಲೇ ಕಾರಿನ ರೂಫ್ ಟಾಪ್ ಓಪನ್ ಬಾಟಲಿ ಎತ್ತಿದ ವ್ಯಕ್ತಿ

ಬೆಂಗಳೂರು, ಮಾ.31: ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ ಪುಂಡರ ಹಾವಳಿ ಮಿತಿಮೀರಿದ್ದು, ಮಧ್ಯರಾತ್ರಿ ಚಲಿಸುತ್ತಿದ್ದ ಕಾರಿನ ರೂಫ್ ಟಾಪ್ ಓಪನ್ ಮಾಡಿ ಯುವಕನೊಬ್ಬ ಮದ್ಯ ಸೇವಿಸಿರುವ ಬೆಂಗಳೂರು-ನೆಲಮಂಗಲ ಮಾರ್ಗದಲ್ಲಿ ಘಟನೆ ನಡೆದಿದೆ. ಈ ಪುಂಡಾಟದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. KA 01 MM 7215 ನೋಂದಣಿ ಸಂಖ್ಯೆಯ XUV 500 ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಯುವಕನೊಬ್ಬ, ಚಲಿಸುತ್ತಿದ್ದ ವಾಹನದ ರೂಫ್ ಟಾಪ್‌ನಿಂದ ಹೊರಬಂದು ಮದ್ಯ ಸೇವಿಸಿದ್ದಾನೆ. ನೀರಿನ ಬಾಟಲಿಯಲ್ಲಿ ಮದ್ಯ ತುಂಬಿಸಿಕೊಂಡು ಯಾರಿಗೂ ಹೆದರದೆ ‘ಜಾಲಿಯಾಗಿ’ ಕುಡಿಯುತ್ತಿರುವ ದೃಶ್ಯ ಹಿಂಬದಿ ಬರುತ್ತಿದ್ದ ವಾಹನ ಸವಾರರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಕಾರಿನಲ್ಲಿ ಚಲಿಸುತ್ತಿದ್ದ ಮಹಿಳೆಯೊಬ್ಬರು ಈ ದೃಶ್ಯವನ್ನು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. “ಬೆಂಗಳೂರಲ್ಲಿ ಪೊಲೀಸರು ಇದ್ದಾರೋ ಇಲ್ಲವೋ?” ಎಂದು ಪ್ರಶ್ನಿಸುವ ಮೂಲಕ ಸಂಚಾರಿ ನಿಯಮ ಉಲ್ಲಂಘಿಸುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಸಂಚಾರಿ ಪೊಲೀಸರು, ಕಾರಿನ ಮಾಲೀಕರ ಪತ್ತೆಗೆ ಮುಂದಾಗಿದ್ದಾರೆ. ಅತಿವೇಗ ಮತ್ತು ಅಜಾಗರೂಕ ಚಾಲನೆ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಪ್ರಕರಣದಡಿ ಕ್ರಮ ಕೈಗೊಳ್ಳಲು ಮತ್ತು ವಾಹನದ ಪರವಾನಿಗೆಯನ್ನು ರದ್ದುಗೊಳಿಸುವಂತೆ ಆರ್‌ಟಿಒ ಅಧಿಕಾರಿಗಳಿಗೆ ಸೂಚನೆ ನೀಡಿ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *