ಗುಜರಾತ್​ನಲ್ಲಿ 3,300 ಕೋಟಿ ರೂ ವೆಚ್ಚದ ಕೇನ್ಸ್ ಸಮಿಕಾನ್ ಘಟಕ ಉದ್ಘಾಟನೆ ಮಾಡಿದ ನರೇಂದ್ರ ಮೋದಿ

ಗುಜರಾತ್​ನಲ್ಲಿ 3,300 ಕೋಟಿ ರೂ ವೆಚ್ಚದ ಕೇನ್ಸ್ ಸಮಿಕಾನ್ ಘಟಕ ಉದ್ಘಾಟನೆ ಮಾಡಿದ ನರೇಂದ್ರ ಮೋದಿ


ಗುಜರಾತ್ ನಲ್ಲಿ 3,300 ಕೋಟಿ ರೂ ವೆಚ್ಚದ ಕೇನ್ಸ್ ಸಮಿಕಾನ್ ಘಟಕ ಉದ್ಘಾಟನೆ ಮಾಡಿದ ನರೇಂದ್ರ ಮೋದಿ

ಅಹ್ಮದಾಬಾದ್, ಮಾರ್ಚ್ 31: ಇಲ್ಲಿಗೆ ಸಮೀಪದ ಸಾನಂದ್‌ನಲ್ಲಿ ಕೇನ್ಸ್ ಸಮಿಕಾನ್ನ ಒಸಾಟ್ (OSAT- ಹೊರಗುತ್ತಿಗೆ ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಪರೀಕ್ಷೆ) ಘಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ. ಇದು 3,300 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಟೆಸ್ಟಿಂಗ್ ಫೆಸಿಲಿಟಿ ಆಗಿದೆ. ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಅಡಿಯಲ್ಲಿ ಶುರುವಾಗಿರುವ ಎರಡನೇ ಚಿಪ್ ಮ್ಯಾನುಫ್ಯಾಕ್ಚರಿಂಗ್ ಘಟಕ ಇದಾಗಿದೆ. ಇದೇ ತಿಂಗಳು ಗುಜರಾತ್‌ನಲ್ಲೇ ಅಮೆರಿಕ ಮೂಲದ ಮೈಕ್ರಾನ್ ಟೆಕ್ನಾಲಜಿಯಿಂದ ಭಾರತದ ಮೊದಲ ಸೆಮಿಕಂಡಕ್ಟರ್ ಘಟಕ ಪ್ರಾರಂಭವಾಯಿತು.

ಕೆನ್ಸ್ ಸಮಿಕಾನ್ ಮೈಸೂರಿನ ಕೆನ್ಸ್ ಟೆಕ್ನಾಲಜಿ ಸಂಸ್ಥೆಯಿಂದ ಶುರುವಾಗಿರುವ ಸೆಮಿಕಂಡಕ್ಟರ್ ಚಿಪ್ ತಯಾರಕರಾಗಿದ್ದಾರೆ. ಪ್ರಾರಂಭಕ್ಕೆ ಮುಂಚೆಯೇ ಇಲ್ಲಿ ಕಮರ್ಷಿಯಲ್ ಉತ್ಪಾದನೆ ಪ್ರಾರಂಭವಾಗಿದೆ. ಆಟೋಮೋಟಿವ್ ಮತ್ತು ಔದ್ಯಮಿಕ ಅಪ್ಲಿಕೇಶನ್‌ಗಳಿಗೆ ಬಳಸಲಾಗುವ ಇಂಟೆಲಿಜೆಂಟ್ ಪವರ್ ಮ್ಯಾಡ್ಯೂಲ್‌ಗಳನ್ನು (ಐಪಿಎಂ) ತಯಾರಿಸುವ ಕಾರ್ಯ ನಡೆಯುತ್ತಿದೆ. ಈ ಒಂದೊಂದು ಮಾಡ್ಯೂಲ್‌ನಲ್ಲಿ 17 ಚಿಪ್‌ಗಳನ್ನು ಜೋಡಿಸಲಾಗಿರುತ್ತದೆ. ಸುಮಾರು 900 ಮಲ್ಟಿಚಿಪ್ ಮಾಡ್ಯೂಲ್ಗಳನ್ನು ತಯಾರಿಸಿ ಹೊರಕಳುಹಿಸಲಾಗಿದೆ.

ಇದನ್ನೂ ಓದಿ: ಆನ್‌ಲೈನ್ ಪೋಸ್ಟ್ ಹಾಕುವಾಗ ಹುಷಾರ್; ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಿಗೆ ಬಿಸಿ; ಇದು ಸರ್ಕಾರದ ಪ್ರಸ್ತಾವಿತ ಐಟಿ ನಿಯಮಗಳ ಎಫೆಕ್ಟ್

ಈ ಘಟಕ ಪೂರ್ಣ ಶಕ್ತಿಯಿಂದ ಕಾರ್ಯಾರಂಭಿಸಿದರೆ ಒಂದು ದಿನಕ್ಕೆ 60 ಲಕ್ಷ ಚಿಪ್ ಯುನಿಟ್‌ಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದೆ.

ಭಾರತದಲ್ಲಿ ಇನ್ನೂ ಹಲವು ಚಿಪ್ ಮ್ಯಾನುಫ್ಯಾಕ್ಚರಿಂಗ್ ಘಟಕಗಳು ಬರಲಿವೆ

ಸರ್ಕಾರವು ಸೆಮಿಕಂಡಕ್ಟರ್ ಮಿಷನ್ ಅನ್ನು ಗಂಭೀರವಾಗಿ ಪರಿಗಣಿಸಿದ್ದು, ಹಲವಾರು ಘಟಕಗಳಿಗೆ ಅನುಮೋದನೆ ನೀಡಿದೆ. ಸದ್ಯಕ್ಕೆ ಅಮೆರಿಕದ ಮೈಕ್ರಾನ್ ಮತ್ತು ಮೈಸೂರಿನ ಕೇನ್ಸ್ ಟೆಕ್ನಾಲಜಿ ಕಂಪನಿಗಳು ಗುಜರಾತ್ ಸಾನಂದ್‌ನಲ್ಲಿ ಚಿಪ್ ತಯಾರಿಸುವ ಘಟಕವನ್ನು ಪ್ರಾರಂಭಿಸಿವೆ. ತೈವಾನ್‌ನ ಪಿಎಸ್‌ಎಂಸಿ ಮತ್ತು ಟಾಟಾ ಇತ್ಯಾದಿ ಸಂಸ್ಥೆಗಳಿಂದಲೂ ಸೆಮಿಕಂಡಕ್ಟರ್ ಘಟಕಗಳು ಪ್ರಾರಂಭವಾಗಲಿವೆ. ಅನುಮೋದನೆಗೊಂಡಿರುವ ಐದು ಸೆಮಿಕಂಡಕ್ಟರ್ ಘಟಕಗಳು:

  1. ಮೈಕ್ರಾನ್ ಟೆಕ್ನಾಲಜಿ: ಗುಜರಾತ್ನ ಸಾನಂದ್ನಲ್ಲಿ
  2. ಕೆನ್ಸ್ ಸೆಮಿಕಾನ್: ಗುಜರಾತ್ ನ ಸಾನಂದ್ ನಲ್ಲಿ
  3. ಟಿಎಸ್ಎಟಿ (ಟಾಟಾ ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಟೆಸ್ಟ್) ಘಟಕ: ಅಸ್ಸಾಮ್ನಲ್ಲಿ
  4. ಟಾಟಾಸ್ ಪ್ರೈ ಲಿ (ಟಿಐಪಿಎಲ್) ಫ್ಯಾಬ್ ಘಟಕ: ಗುಜರಾತ್ನ ಧುಲೆರಾದಲ್ಲಿ
  5. ಸಿಜಿ ಪ ರೆನಿಸಾಸ್ ಘಟಕ: ಗುಜರಾತ್‌ನಲ್ಲಿ

ಇದನ್ನೂ ಓದಿ: ವಿವಿಧ ಪೋಸ್ಟ್ ಆಫೀಸ್ ಸ್ಕೀಮ್ಸ್; ಏಪ್ರಿಲ್-ಜೂನ್ ಕ್ವಾರ್ಟರ್‌ಗೆ ಬಡ್ಡಿದರ ಘೋಷಣೆ; ಇಲ್ಲಿದೆ ಪಟ್ಟಿ

ಇಲ್ಲಿ ಸಿಜಿ ಪವರ್ ರೆನಿಸಾಸ್ ಘಟಕವು ಭಾರತ, ಜಪಾನ್ ಮತ್ತು ಥಾಯ್ಲೆಂಡ್ ಕಂಪನಿಗಳ ಜಂಟಿ ಯೋಜನೆಯಾಗಿದೆ. ಜಪಾನ್ನ ರೆನಿಸಾಸ್ ಸಂಸ್ಥೆಗಳು ಕಾರ್ಪೊರೇಶನ್, ಥಾಯ್ಲೆಂಡ್ನ ಸ್ಟಾರ್ಸ್ ಮೈಕ್ರೋ ಇಲೆಕ್ಟಾನಿಕ್ಸ್ ಮತ್ತು ಭಾರತದ ಸಿಜಿ ಪವರ್ ಸಂಸ್ಥೆಗಳು ಸೇರಿ ಸಿಜಿ ಪವರ್ ರೆನಿಸಾಸ್ ಘಟಕವನ್ನು ನಿರ್ಮಿಸುತ್ತಿವೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *