April 2026 Rules Changes: ಡಿಜಿಟಲ್ ಪಾವತಿ, ಪ್ಯಾನ್ ಇತ್ಯಾದಿ ನಿಯಮಗಳಲ್ಲಿ ಬದಲಾವಣೆ; ಆರ್‌ಬಿಐಯಿಂದ ಹೊಸ ಗೈಡ್‌ಲೈನ್ಸ್ ತಿಳಿದಿರಿ

April 2026 Rules Changes: ಡಿಜಿಟಲ್ ಪಾವತಿ, ಪ್ಯಾನ್ ಇತ್ಯಾದಿ ನಿಯಮಗಳಲ್ಲಿ ಬದಲಾವಣೆ; ಆರ್‌ಬಿಐಯಿಂದ ಹೊಸ ಗೈಡ್‌ಲೈನ್ಸ್ ತಿಳಿದಿರಿ


ಏಪ್ರಿಲ್ 2026 ನಿಯಮಗಳ ಬದಲಾವಣೆಗಳು: ಡಿಜಿಟಲ್ ಪಾವತಿ, ಪ್ಯಾನ್ ಇತ್ಯಾದಿ ನಿಯಮಗಳಲ್ಲಿ ಬದಲಾವಣೆ; ಆರ್‌ಬಿಐಯಿಂದ ಹೊಸ ಗೈಡ್‌ಲೈನ್ಸ್ ತಿಳಿದಿರಿ

ಜನವರಿ 31: ನಾಳೆ ಹೊಸ ಹಣಕಾಸು ವರ್ಷದ ಆರಂಭ. ಏಪ್ರಿಲ್ 1 ರಿಂದ ಡಿಜಿಟಲ್ ಪೇಮೆಂಟ್, ಪ್ಯಾನ್ ಕಾರ್ಡ್, ಕ್ರೆಡಿಟ್ ಕಾರ್ಡ್, ಎಟಿಎಂ ಬಳಕೆ ಇತ್ಯಾದಿ ಕೆಲವು ನಿಯಮಗಳಲ್ಲಿ ಬದಲಾವಣೆಯಾಗಲಿದೆ. ಎಚ್ಡಿಎಫ್ಸಿ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕುಗಳು ಎಟಿಎಂ ವಿಟ್ರಾಯಲ್, ಲಾಕರ್, ಎಫ್ಡಿ, ಸಾಲ ಇತ್ಯಾದಿಗಳ ದರಗಳನ್ನು ಪರಿಷ್ಕರಿಸಿವೆ. ಕೆಲ ಕ್ರೆಡಿಟ್ ಕಾರ್ಡ್‌ಗಳ ರಿವಾರ್ಡ್ ಪಾಯಿಂಟ್ಸ್ ನಿಯಮಗಳಲ್ಲಿ ಬದಲಾವಣೆಯಾಗಿದೆ. ಏಪ್ರಿಲ್ 1 ರಿಂದ ಕೆಲವು ಮಹತ್ವದ ಹಣಕಾಸು ನಿಯಮಗಳು (ಹಣಕಾಸು ನಿಯಮಗಳು) ಬದಲಾವಣೆ ಏನೇನು ಎಂಬ ವಿವರ ಇಲ್ಲಿದೆ:

ಡಿಜಿಟಲ್ ಪೇಮೆಂಟ್ ನಿಯಮಗಳು

ಆರ್ಬಿಐ ಮಾರ್ಗಸೂಚಿ ಪ್ರಕಾರ ಡಿಜಿಟಲ್ ಪೇಮೆಂಟ್ಸ್ ನಿಯಮಗಳಲ್ಲಿ ಏಪ್ರಿಲ್ 1 ರಿಂದ ಕೆಲವು ಬದಲಾವಣೆ ಇರಲಿದೆ. ಯುಪಿಐ ಪೇಮೆಂಟ್ಸ್, ಕಾರ್ಡ್ ಪೇಮೆಂಟ್, ವ್ಯಾಟ್ ಪೇಮೆಂಟ್‌ಗಳಲ್ಲಿ ಎರಡು ಸ್ಥಿರ ದೃಢೀಕರಣ ವ್ಯವಸ್ಥೆ ಇರುತ್ತದೆ. ಒಟಿಪಿ ಜೊತೆಗೆ ಪಿನ್ ಅಥವಾ ಪಾಸ್ವರ್ಡ್ ಅಥವಾ ಬಯೋಮೆಟ್ರಿಕ್ ಅಥವಾ ಸೆಕ್ಯೂರಿಟಿ ಟೋಕನ್ಗಳನ್ನು ಸಲ್ಲಿಸುವ ಅವಶ್ಯಕತೆ ಇರುತ್ತದೆ. ಒಟಿಪಿ ಇಲ್ಲದೆಯೂ ಅಥೆಂಟಿಕೇಶನ್ ಸಾಧ್ಯ. ಪಿನ್ ಮತ್ತು ಬಯೋಮೆಟ್ರಿಕ್ ಮೂಲಕ ಟ್ರಾನ್ಸಾಕ್ಷನ್ ದೃಢೀಕರಿಸಬಹುದು. ಯಾವುದಾದರೂ ಎರಡು ಫ್ಯಾಕ್ಟರ್ ದೃಢೀಕರಣವನ್ನು ಆಯ್ಕೆ ಮಾಡಿಕೊಳ್ಳಬಹುದು.

ಇದನ್ನೂ ಓದಿ: ವಿವಿಧ ಪೋಸ್ಟ್ ಆಫೀಸ್ ಸ್ಕೀಮ್ಸ್; ಏಪ್ರಿಲ್-ಜೂನ್ ಕ್ವಾರ್ಟರ್‌ಗೆ ಬಡ್ಡಿದರ ಘೋಷಣೆ; ಇಲ್ಲಿದೆ ಪಟ್ಟಿ

ಹೊಸ ಪ್ಯಾನ್ ಕಾರ್ಡ್ ನಿಯಮಗಳು

ಈ ಮೊದಲು ನೀವು ಹೊಸ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವಾಗ ಆಧಾರ್ ಕಾರ್ಡ್ ದಾಖಲೆ ಕೊಟ್ಟರೆ ಸಾಕು. ಆದರೆ, ಏಪ್ರಿಲ್ 1 ರಿಂದ ನಿಯಮ ಕಠಿಣವಾಗುವುದಿಲ್ಲ. ಪ್ಯಾನ್‌ಗೆ ಅರ್ಜಿ ಸಲ್ಲಿಸುವಾಗ ಆಧಾರ್ ಜೊತೆಗೆ ಇನ್ನೊಂದು ಹೆಚ್ಚುವರಿ ದಾಖಲೆ ಸಲ್ಲಿಸಿ. ಗಮನಿಸಬೇಕಾದ ಮತ್ತೊಂದು ಸಂಗತಿ ಎಂದರೆ, ಆಧಾರ್‌ನಲ್ಲಿರುವಂತೆಯೇ ಸ್ಪೆಲ್ಲಿಂಗ್ ಸಮೇತ ಹೆಸರು ಪ್ಯಾನ್‌ನಲ್ಲಿ ಇರಬೇಕು. ಇಲ್ಲದಿದ್ದರೆ ಅರ್ಜಿ ರಿಜೆಕ್ಟ್ ಆಗಬಹುದು.

ಫಾಸ್ಟ್ಯಾಗ್ ವಾರ್ಷಿಕ ಪಾಸ್ ಶುಲ್ಕ ಒಟ್ಟು

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಎಚ್‌ಎಐ) 2026-27ರ ಹಣಕಾಸು ವರ್ಷಕ್ಕೆ ಫಾಸ್ಟ್ಯಾಗ್ ವಾರ್ಷಿಕ ಪಾಸ್‌ನ ದರ ಪರಿಷ್ಕರಣೆ ಮಾಡಿದೆ. ಏಪ್ರಿಲ್ 1 ರಿಂದ ಪಾಸ್ ತುಸು ದುಬಾರಿಯಾಗಲಿದೆ. ಈಗ 3,000 ರೂ ಇರುವ ಫಾಸ್ಟ್ಯಾಗ್ ವಾರ್ಷಿಕ ಪಾಸ್‌ನ ಬೆಲೆ 3,075 ರೂಗೆ ಏರಲಿದೆ.

ಇದನ್ನೂ ಓದಿ: ಹೆಚ್ಚು ನಾಮಿನಿಗಳು, ಸೊನ್ನೆ ಲೋನ್ ಪ್ರಿಪೇಮೆಂಟ್ ಚಾರ್ಜ್; ಜನಸಾಮಾನ್ಯರು ಗಮನಿಸಬೇಕಾದ ಹೊಸ ನಿಯಮಗಳಿವು

ಡಿಜಿಟಲ್ ಪೇಮೆಂಟ್ ಪಾವತಿ ಮತ್ತು ಪ್ಲಾಟ್ಫಾರ್ಮ್ಗಳ ನಿರ್ವಹಣೆ ವಿಚಾರದಲ್ಲಿ ಆರ್ಬಿಐ ಮಾರ್ಗಸೂಚಿ ಗಮನಾರ್ಹವಾಗಿದೆ. ಡಿಜಿಟಲ್ ಇಕೋಸಿಸ್ಟಂನಲ್ಲಿರುವ ಸಂಸ್ಥೆಗಳು ಸೆಕ್ಯೂರಿಟಿ ಸ್ಟ್ಯಾಂಡರ್ಡ್‌ಗಳನ್ನು ಸರಿಯಾಗಿ ಪಾಲಿಸಬೇಕು. ಸಿಸ್ಟಂ ದೋಷದಿಂದ ಯಾವುದಾದರೂ ವಂಚನೆಯಾದಲ್ಲಿ ಗ್ರಾಹಕರಿಗೆ ಬ್ಯಾಂಕುಗಳೇ ಪರಿಹಾರ. ಗ್ರಾಹಕ ವ್ಯಾಜ್ಯ ಪರಿಹಾರ ವ್ಯವಸ್ಥೆ ವೇಗವಾಗಿ ಆಗಬೇಕು. ಇವೇ ಮುಂತಾದ ನಿಯಮಗಳು ಆರ್ ಬಿಐ ರೂಪಿಸಿದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *